AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring: ಒಂದು ರೂಗೆ ಚಿಕಿತ್ಸೆ, 11,000 ವೈದ್ಯರಿಗೆ ಕೆಲಸ; ಡಾ. ಪ್ರತಾಪ್ ರೆಡ್ಡಿ ಲಕ್ಷ ಕೋಟಿ ರೂ ಸಾಮ್ರಾಜ್ಯದ ಕಥೆ

Inspiring story of building Apollo hospital: 150 ಬೆಡ್​​ಗಳೊಂದಿಗೆ ಚೆನ್ನೈನಲ್ಲಿ ಆರಂಭವಾದ ಅಪೋಲೋ ಆಸ್ಪತ್ರೆ ಇವತ್ತು 10,000ಕ್ಕೂ ಅಧಿಕ ಬೆಡ್​​ಗಳಿರುವ ಆಸ್ಪತ್ರೆ ಸಮೂಹವಾಗಿ ಬೆಳೆದಿದೆ. ಟ್ರೀಟ್ಮೆಂಟ್​​ಗೆ ವಿದೇಶಕ್ಕೆ ಹೋಗಲಾಗದೆ ಭಾರತದಲ್ಲಿ ಒಂದು ಸಾವನ್ನಪ್ಪಿದ್ದು, ಡಾ. ಪ್ರತಾಪ್ ರೆಡ್ಡಿ ಅವರಿಗೆ ಅಪೋಲೋ ಆಸ್ಪತ್ರೆ ಕಟ್ಟಲು ಪ್ರೇರೇಪಣೆ ನೀಡಿತ್ತು. ಇವತ್ತು ಅಪೋಲೋ ನೆಟ್ವರ್ಕ್​​​ನಲ್ಲಿ 73 ಆಸ್ಪತ್ರೆಗಳಿವೆ. 11,000ಕ್ಕೂ ಅಧಿಕ ವೈದ್ಯರು ಕೆಲಸ ಮಾಡುತ್ತಿದ್ದಾರೆ.

Inspiring: ಒಂದು ರೂಗೆ ಚಿಕಿತ್ಸೆ, 11,000 ವೈದ್ಯರಿಗೆ ಕೆಲಸ; ಡಾ. ಪ್ರತಾಪ್ ರೆಡ್ಡಿ ಲಕ್ಷ ಕೋಟಿ ರೂ ಸಾಮ್ರಾಜ್ಯದ ಕಥೆ
ಡಾ. ಪ್ರತಾಪ್ ಸಿ ರೆಡ್ಡಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2025 | 4:16 PM

Share

ಅಪೋಲೋ ಹಾಸ್ಪಿಟಲ್ಸ್ (Apollo hospitals) ಭಾರತದ ಅತಿದೊಡ್ಡ ಖಾಸಗಿ ಆಸ್ಪತ್ರೆ ಸಮೂಹ ಎನಿಸಿದೆ. ದೇಶಾದ್ಯಂತ 73 ಆಸ್ಪತ್ರೆಗಳು, 2,300 ಡಯಾಗ್ನಸ್ಟಿಕ್ಸ್ ಸೆಂಟರ್ಸ್, 700ಕ್ಕೂ ಅಧಿಕ ಕ್ಲಿನಿಕ್, 6,500ಕ್ಕೂ ಹೆಚ್ಚು ಫಾರ್ಮಸಿಗಳು ಇವೆ. 11,000ಕ್ಕೂ ಅಧಿಕ ವೈದ್ಯರು ಕೆಲಸ ಮಾಡುತ್ತಾರೆ. ಇಷ್ಟು ದೊಡ್ಡ ನೆಟ್ವರ್ಕ್ ಇರುವ ಆಸ್ಪತ್ರೆ ಸಮೂಹ ಭಾರತದಲ್ಲಿ ಇದೆ ಎಂದರೆ ಅದು ಅಪೋಲೋ ಮಾತ್ರವೇ. ಇದರ ಮೌಲ್ಯ ಒಂದು ಲಕ್ಷ ಕೋಟಿ ರೂಗಿಂತಲೂ ಅಧಿಕ. ಒಂದು ಟ್ರಿಲಿಯನ್ ರುಪಾಯಿ ಮೌಲ್ಯದ ಕಂಪನಿಯ ಒಡೆಯ ಡಾ. ಪ್ರತಾಪ್ ಸಿ ರೆಡ್ಡಿ (Dr. Pratap Reddy) ಅವರ ಕಥೆ ನಿಜಕ್ಕೂ ಸ್ಫೂರ್ತಿ ನೀಡುವಂಥದ್ದು.

ಆಂಧ್ರದ ಚಿತ್ತೂರಿನ ಅರಗೊಂಡ ಎನ್ನುವ ಒಂದು ಸಣ್ಣ ಗ್ರಾಮದಲ್ಲಿ 1933 ರಲ್ಲಿ ಹುಟ್ಟಿದವರು ಡಾ. ರೆಡ್ಡಿ. ಈಗ 92 ವರ್ಷ ವಯಸ್ಸಾಗಿರುವ ಪ್ರತಾಪ್ ರೆಡ್ಡಿ ಅವರು ಭಾರತದಲ್ಲಿ ಎಂಬಿಬಿಎಸ್ ಮಾಡಿ, ಅಮೆರಿಕ ಬ್ರಿಟನ್ ಮೊದಲಾದ ಕಡೆ ಉನ್ನತ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ.

ರೆಡ್ಡಿ ಬದುಕಿನ ಸ್ವರೂಪ ಬದಲಿಸಿತ್ತು ಆ ಒಂದು ಘಟನೆ…

ಪ್ರತಾಪ್ ರೆಡ್ಡಿ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಮನಕಲಕುವ ಒಂದು ಘಟನೆ ನಡೆಯಿತು. ವಿದೇಶದಲ್ಲಿ ಚಿಕಿತ್ಸೆ ಸಿಗಲು ಸಾಧ್ಯವಾಗದೇ ಭಾರತದ ಒಂದು ಮಗು ಸಾವನ್ನಪ್ಪಿತು. ಆ ಮಗುವಿನ ಪೋಷಕರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸುವ ಶಕ್ತಿ ಇರಲಿಲ್ಲ. ಆ ಒಂದು ಘಟನೆಯು ಡಾ. ಪ್ರತಾಪ್ ಸಿ ರೆಡ್ಡಿ ಅವರ ಜೀವನಕ್ಕೆ ಮಹತ್ತರ ಧ್ಯೇಯ ನೀಡಿತು.

ಇದನ್ನೂ ಓದಿ: 36 ತಿಂಗಳಲ್ಲಿ ಮೊದಲ ಬಾರಿಗೆ ಅಮೆರಿಕದ ಜಿಡಿಪಿ ಕುಸಿತ; ಇದು ಜಾಗತಿಕ ರಿಸಿಶನ್​ನ ಮುನ್ಸೂಚನೆಯಾ?

1971ರಲ್ಲಿ ಡಾ. ರೆಡ್ಡಿ ಅವರು ಭಾರತಕ್ಕೆ ವಾಪಸ್ ಬಂದು, ತವರಿನಲ್ಲಿ ಉತ್ಕೃಷ್ಟ ಮಟ್ಟದ ಆಸ್ಪತ್ರೆ ನಿರ್ಮಿಸುವ ಪಣ ತೊಟ್ಟರು. ಆದರೆ, ಸರ್ಕಾರದಿಂದ ಬೆಂಬಲ ಸಿಗಲಿಲ್ಲ. ಬ್ಯಾಂಕುಗಳಿಂದಲೂ ಸಾಲ ಸಿಗಲಿಲ್ಲ. ಎದೆಗುಂದದ ರೆಡ್ಡಿ, ತಮ್ಮ ಕುಟುಂಬದ ಜಮೀನನ್ನು ಒತ್ತೆ ಇಟ್ಟು 1983ರಲ್ಲಿ ಚೆನ್ನೈನಲ್ಲಿ ಅಪೋಲೋ ಆಸ್ಪತ್ರೆ ಸ್ಥಾಪಿಸಿದರು. ಆಗ ಆಸ್ಪತ್ರೆಯಲ್ಲಿ ಇದ್ದ ಬೆಡ್ ಸಂಖ್ಯೆ 150.

ಒಂದು ಆಸ್ಪತ್ರೆಯು ವಿಶ್ವದರ್ಜೆ ಎನಿಸಬೇಕಾದರೆ ಆಧುನಿಕ ಚಿಕಿತ್ಸಾ ಸಾಧನಗಳು ಮಾತ್ರವಲ್ಲ, ಪ್ರತಿಭಾನ್ವಿತ ವೈದ್ಯರ ತಂಡವೂ ಅಗತ್ಯ. ಭಾರತದಲ್ಲಿ ಅಂದು ಇದ್ದ ಈ ಪ್ರಮುಖ ಕೊರತೆಯನ್ನು ನೀಗಿಸಲು ಪ್ರತಾಪ್ ರೆಡ್ಡಿ ಒಂದು ಉಪಾಯ ಮಾಡಿದರು. ಅಮೆರಿಕಕ್ಕೆ ಮರಳಿ ಅಲ್ಲಿ ಇದ್ದ ಭಾರತ ಮೂಲದ ವೈದ್ಯರನ್ನು ಭೇಟಿ ಮಾಡಿ, ಭಾರತಕ್ಕೆ ಮರಳುವಂತೆ ವೈಯಕ್ತಿಕವಾಗಿ ಮನವಿ ಮಾಡಿದರು. ಕೆಲವರು ಈ ಮನವಿಗೆ ಸ್ಪಂದಿಸಿ ಭಾರತಕ್ಕೆ ಹಿಂದಿರುಗಿದ್ದು ಹೌದು.

ಮೂರು ವರ್ಷದಲ್ಲಿ ಅಪೋಲೋ ಆಸ್ಪತ್ರೆ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಲು ಶಕ್ಯಗೊಂಡಿತು. ಚೆನ್ನೈನಲ್ಲಿ ಮಾತ್ರ ಇದ್ದ ಅಪೋಲ್ಲೋ ಆಸ್ಪತ್ರೆ ಮೈಸೂರು, ಕೋಲ್ಕತಾ ಮೊದಲಾದ ಬೇರೆ ಬೇರೆ ಕೆಲ ನಗರಗಳಲ್ಲಿ ಹರಡಿತು.

ಅಲ್ಲಿಂದ ಅಪೋಲೋ ತಿರುಗಿ ನೋಡಲೇ ಇಲ್ಲ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಭಾರತದ ಮೊದಲ ಹಾಸ್ಪಿಟಲ್ ಗ್ರೂಪ್ ಎನಿಸಿತು. ಫಾರ್ಮಸಿ, ಕ್ಲಿನಿಕ್​ಗಳನ್ನು ಆರಂಭಿಸಿತು. ಇವತ್ತು 11,000ಕ್ಕೂ ಅಧಿಕ ವೈದ್ಯರು ಅಪೋಲೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ 150 ಇದ್ದ ಬೆಡ್​​ಗಳ ಸಂಖ್ಯೆ ಇವತ್ತು 10,000ಕ್ಕೂ ಅಧಿಕಕ್ಕೆ ಏರಿದೆ.

ಇದನ್ನೂ ಓದಿ: ಪಾಕಿಸ್ತಾನದ ಅತಿದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಅಲ್ಲಿಯ ಸೇನೆಯದ್ದು; ಯುದ್ಧ ಗೆಲ್ಲದಿದ್ದರೂ ವ್ಯಾಪಾರದಲ್ಲೇನೂ ಹಿಂದಿಲ್ಲ

ಚಿಕಿತ್ಸೆಗೆ ಒಂದು ರುಪಾಯಿ ಪಡೆಯುವ ಪ್ರತಾಪ್ ರೆಡ್ಡಿ

ಅಪೋಲೋ ಆಸ್ಪತ್ರೆಯಲ್ಲಿ ಸಾಮಾನ್ಯ ಜನರಿಗೆ ಉಚಿತವಾಗಿ ಚಿಕಿತ್ಸೆ ಸಿಗುವುದಿಲ್ಲ. ಆದರೆ, ಪ್ರತಾಪ್ ರೆಡ್ಡಿ ತಮ್ಮ ಜೀವನದಲ್ಲಿ ವೈಯಕ್ತಿಕವಾಗಿ ಬಹುತೇಕ ಉಚಿತವಾಗಿ ಸಾವಿರಾರು ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ತಮ್ಮ ಗ್ರಾಮದಲ್ಲಿ, ಹಾಗೂ ಕೆಲ ಅಪೋಲೋ ಆಸ್ಪತ್ರೆಗಳಲ್ಲಿ 10,000ಕ್ಕೂ ಅಧಿಕ ಮಂದಿಗೆ ಪ್ರತಾಪ್ ರೆಡ್ಡಿ ಅವರು ಒಂದು ರುಪಾಯಿಗೆ ಚಿಕಿತ್ಸೆ ನೀಡಿದ್ದಾರೆ.

ತಮ್ಮ ಊರಿನಲ್ಲಿ ಅವರು ದಿನಕ್ಕೆ ಒಂದು ರುಪಾಯಿ ಇನ್ಷೂರೆನ್ಸ್​ನ ಸ್ಕೀಮ್ ಅನ್ನು ಜಾರಿಗೆ ತಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ