AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಅತಿದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಅಲ್ಲಿಯ ಸೇನೆಯದ್ದು; ಯುದ್ಧ ಗೆಲ್ಲದಿದ್ದರೂ ವ್ಯಾಪಾರದಲ್ಲೇನೂ ಹಿಂದಿಲ್ಲ

Pakistan Army biggest business conglomerate in that country: ಪಾಕಿಸ್ತಾನ ಸೇನೆ ಆ ದೇಶದ ಅತಿದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಹೊಂದಿದೆ. 50ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಪಾಕ್ ಸೇನೆಯಿಂದ ಸ್ಥಾಪಿಸಲಾಗಿರುವ ಐದು ಟ್ರಸ್ಟ್​​​ಗಳ ಮೂಲಕ ಈ ಉದ್ಯಮವನ್ನು ನಿರ್ವಹಿಸಲಾಗುತ್ತಿದೆ. ಪಾಕಿಸ್ತಾನದ ಶೇ. 12ಕ್ಕಿಂತಲೂ ಹೆಚ್ಚು ಭೂಮಿಯು ಸೇನೆಯ ಸುಪರ್ದಿಯಲ್ಲಿದೆ. ಇಷ್ಟಬಂದಂತೆ ಅದು ಲ್ಯಾಂಡ್ ಗ್ರ್ಯಾಬಿಂಗ್ ಮಾಡಬಲ್ಲುದು..

ಪಾಕಿಸ್ತಾನದ ಅತಿದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಅಲ್ಲಿಯ ಸೇನೆಯದ್ದು; ಯುದ್ಧ ಗೆಲ್ಲದಿದ್ದರೂ ವ್ಯಾಪಾರದಲ್ಲೇನೂ ಹಿಂದಿಲ್ಲ
ಪಾಕಿಸ್ತಾನ ಸೇನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 30, 2025 | 7:10 PM

Share

ಪಾಕಿಸ್ತಾನ ಯಾವತ್ತೂ ವಿಚಿತ್ರ ಎನಿಸುವ ದೇಶ. ವಿಶ್ವದ ಆಧುನಿಕ ಭಯೋತ್ಪಾದನೆಯ ಮೂಲಸ್ಥಳ ಅದು. ಪಾಕಿಸ್ತಾನದ ಸೇನೆ (Pakistan Army) ಆ ದೇಶಕ್ಕಿಂತ ಇನ್ನೂ ವಿಚಿತ್ರವಾದುದು. ಆಡು ಮುಟ್ಟದ ಸೊಪ್ಪಿಲ್ಲ, ಪಾಕ್ ಸೇನೆ ಮಾಡದ ಕೆಲಸ ಇಲ್ಲ ಎಂದರೂ ತಪ್ಪಾಗದೇನೋ. ಜಗತ್ತಿನಲ್ಲಿ ದೇಶಗಳು ಸೇನೆಗಳನ್ನು ಹೊಂದಿರುತ್ತವೆ. ಪಾಕಿಸ್ತಾನದಲ್ಲಿ ಮಾತ್ರ, ಸೇನೆಯೇ ದೇಶವನ್ನು ಹೊಂದಿದೆ. ಬೇರೆ ಯಾವ ಸೇನೆ ಮಾಡದ ಕೆಲಸಗಳನ್ನು ಪಾಕ್ ಸೇನೆ ಮಾಡುತ್ತದೆ. ಪಾಕಿಸ್ತಾನದ ಅತಿದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ (business conglomerate) ಎಂದು ಯಾರಾದರೂ ಕೇಳಿದರೆ ಪಾಕ್ ಸೇನೆಗೆ ಬೊಟ್ಟು ಮಾಡಿ ತೋರಿಸಬಹುದು.

ಪಾಕಿಸ್ತಾನ ಸೇನೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ದೇಶದ ಆಡಳಿತ ಚುಕ್ಕಾಣಿ ಹೊಂದಿರುತ್ತದೆ. ಯಾವಾಗ ಬೇಕಾದರೂ ಕೂಪ್ ಮಾಡಿ ಅಧಿಕಾರ ಪಡೆಯಬಲ್ಲುದು. ಜನತಾಂತ್ರಿಕವಾಗಿ ರಾಜಕೀಯ ಪಕ್ಷಗಳು ಅಧಿಕಾರ ಹಿಡಿದರೂ ಪಾಕಿಸ್ತಾನ ಸೇನೆ ಮತ್ತು ಐಎಸ್​​ಐ ಅಣತಿಯಂತೆ ನಡೆಯುವುದು ಅನಿವಾರ್ಯ. ಅದರಲ್ಲೂ ವಿದೇಶಾಂಗ ನೀತಿ ಹೇಗಿರಬೇಕು ಎಂಬುದು ಪಾಕ್ ಸೇನೆ ಮಾರ್ಗದರ್ಶನದಲ್ಲೇ ನಿರ್ಧಾರವಾಗುತ್ತದೆ.

ಚುನಾವಣೆಯಲ್ಲಿ ಯಾವುದೇ ಪಕ್ಷ ಗೆದ್ದರೂ, ಪ್ರಧಾನಿ ಯಾರಾಗಬೇಕು ಎಂಬುದನ್ನು ಸೇನೆ ನಿರ್ಧರಿಸುತ್ತದೆ. ಬಜೆಟ್ ಎಷ್ಟಿರಬೇಕು, ಯಾವ್ಯಾವ ಸೆಕ್ಟರ್​​ಗೆ ಎಷ್ಟು ಹಣ ನೀಡಬೇಕು ಎಂಬೆಲ್ಲವನ್ನೂ ಸೇನೆಯೇ ನಿರ್ಧರಿಸುತ್ತದೆ.

ಇದನ್ನೂ ಓದಿ
Image
ನಿರ್ಬಂಧದ ನಡುವೆಯೂ ಪಾಕಿಸ್ತಾನಕ್ಕೆ 8 ಲಕ್ಷ ಕೋಟಿ ರೂ ಸರಕು ಸಾಗಣೆ?
Image
ಭಾರತೀಯ ವಿಮಾನಗಳಿಗೆ ಪ್ರವೇಶ ನಿರ್ಬಂಧಿಸಿ ಪಾಕ್ ಯಡವಟ್ಟು?
Image
ಅಟ್ಟಾರಿ ಬಂದ್ ಎಫೆಕ್ಟ್; ಪಾಕಿಸ್ತಾನದ ಷೇರುಪೇಟೆ ಕುಸಿತ
Image
ಭಾರತ-ಪಾಕಿಸ್ತಾನದ ಮಿಲಿಟರಿ ಬಲ ಹೇಗಿದೆ?

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆಲ್ಟೋ ಕಾರಿನ ಬೆಲೆಗೆ ಭಾರತದಲ್ಲಿ ದೊಡ್ಡ ಕಾರು ಲಭ್ಯ; ಎರಡು ದೇಶಗಳಲ್ಲಿ ಈ ಕಾರಿನಲ್ಲಿ ವ್ಯತ್ಯಾಸಗಳೇನು?

50 ಕಂಪನಿಗಳ ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಪಾಕ್ ಸೇನೆಯದ್ದು…

ಪಾಕಿಸ್ತಾನ ಸೇನೆ ದೇಶ ವಿದೇಶಗಳಲ್ಲಿ ವ್ಯವಹಾರ ಹೊಂದಿರುವ 50 ಕಂಪನಿಗಳನ್ನು ನಿರ್ವಹಿಸುತ್ತದೆ. ಅದಕ್ಕಾಗಿ ಐದು ಟ್ರಸ್ಟ್​​​ಗಳನ್ನು ರಚಿಸಿದೆ. ಆರ್ಮಿ ವೆಲ್ಫೇರ್ ಟ್ರಸ್ಟ್, ಫೌಜಿ ಫೌಂಡೇಶನ್, ಶಾಹೀನ್ ಫೌಂಡೇಶನ್, ಬಹ್ರಿಯಾ ಫೌಂಡೇಶನ್ ಮತ್ತು ಡಿಫೆನ್ಸ್ ಹೌಸಿಂಗ್ ಅಥಾರಿಟೀಸ್ ಸೇರಿವೆ.

ಸಿಮೆಂಟ್, ವಿದ್ಯುತ್, ಅನಿಲ, ರಸಗೊಬ್ಬರ, ತೈಲ ಸಂಸ್ಕರಣೆ, ಬ್ಯಾಂಕಿಂಗ್, ಬೇಳೆ ಕಾಳುಗಳು, ಬಟ್ಟೆ ಬರೆ, ಜಾಹೀರಾತು, ವಿಮಾನಯಾನ, ರೆಸ್ಟೋರೆಂಟ್ ಹೀಗೆ ಸಾಲು ಸಾಲು ಬ್ಯುಸಿನೆಸ್​​ಗಳಿರುವ ಕಂಪನಿಗಳನ್ನು ಈ ಐದು ಟ್ರಸ್ಟ್​​​ಗಳು ನಿರ್ವಹಿಸುತ್ತವೆ. ಪ್ರತೀ ಟ್ರಸ್ಟ್​​ ಕೂಡ ನಿರ್ದಿಷ್ಟ ಕಂಪನಿಗಳನ್ನು ನಿಭಾಯಿಸುತ್ತವೆ.

ಪಾಕಿಸ್ತಾನ ಸೇನೆಯಿಂದ ನಿವೃತ್ತರಾದ ಅಧಿಕಾರಿಗಳು ಈ ಕಂಪನಿಗಳ ಆಡಳಿತ ನಡೆಸುತ್ತಾರೆ. ಇಲ್ಲಿ ಹೆಚ್ಚಾಗಿ ಕೆಲಸ ಮಾಡುವುದು ಸೇನಾ ನಿವೃತ್ತರೇ.

ಇದನ್ನೂ ಓದಿ: ಭಾರತದ ವಿರುದ್ಧ ಟರ್ಕಿಯಿಂದಲೂ ಪಾಕಿಸ್ತಾನಕ್ಕೆ ಬೆಂಬಲ; ಇಸ್ಲಾಮಾಬಾದ್​ಗೆ ಬಂದಿಳಿದ ಟರ್ಕಿಶ್ ಯುದ್ಧ ವಿಮಾನ

ಭೂ ಅತಿಕ್ರಮಣದಲ್ಲಿ ಪಾಕ್ ಸೇನೆಗೆ ಇಲ್ಲ ಸಾಟಿ…

ಪಾಕಿಸ್ತಾನ ಸೇನೆ ಹಾಗೂ ಸೇನಾಧಿಕಾರಿಗಳ ಬಳಿ ದೇಶದ ಶೇ. 12ಕ್ಕೂ ಹೆಚ್ಚಿನ ಭೂಮಿ ಇದೆ. ಪಾಕ್ ಸೇನೆಯಿಂದ ನಿವೃತ್ತರಾದವರಿಗೆಲ್ಲಾ ನಿವೇಶನಗಳನ್ನು ಹಂಚಲಾಗುತ್ತದೆ. ಜಮೀನು ಅತಿಕ್ರಮಣದಲ್ಲೂ ಪಾಕ್ ಸೇನೆ ಸೈ ಎನಿಸುತ್ತದೆ. ಡಿಫೆನ್ಸ್ ಹೌಸಿಂಗ್ ಟ್ರಸ್ಟ್​​ಗಳ ಮೂಲಕ ಪಾಕಿಸ್ತಾನದ ಪ್ರತಿಯೊಂದು ನಗರದಲ್ಲೂ ಗೃಹ ಸಮುಚ್ಚಯಗಳನ್ನು ಪಾಕ್ ಸೇನೆ ನಿರ್ಮಿಸುತ್ತದೆ.

ಇಷ್ಟೆಲ್ಲಾ ಮಲ್ಟಿ ಟ್ಯಾಸ್ಕಿಂಗ್ ಮಾಡುವ ಪಾಕಿಸ್ತಾನ ಸೇನೆ, ತನ್ನ ಮೂಲ ಕಾರ್ಯವಾದ ಯುದ್ಧದಲ್ಲಿ ಮಾತ್ರ ಸಫಲತೆ ಕಂಡಿಲ್ಲ. ಭಾರತದೊಂದಿಗೆ ಮಾಡಿರುವ ಎಲ್ಲಾ ನಾಲ್ಕೂ ಯುದ್ಧಗಳನ್ನು ಪಾಕ್ ಸೋತಿದೆ. ಹೀಗಾಗಿ, ಉಗ್ರರ ಮೂಲಕ ಭಾರತದ ಮೇಲೆ ಪರೋಕ್ಷವಾಗಿ ಪ್ರಹಾರ ಮಾಡುತ್ತಿದೆ ಸೇನೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Wed, 30 April 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ