ಜಾಗತಿಕವಾಗಿ ಎಲ್ ಪಿ ಜಿ ಬೆಲೆ ಭಾರತದಲ್ಲೇ ಅತ್ಯಂತ ಕಡಿಮೆ, 6 ರಾಷ್ಟ್ರಗಳಲ್ಲಿನ ಬೆಲೆಯೊಂದಿಗೆ ಹೋಲಿಕೆ ಮಾಡಿದರು ಸಚಿವ ಹರ್ದೀಪ್ ಪುರಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2022 | 4:10 PM

ಮೋದಿ ಸರ್ಕಾರದ ‘ನಾಗರಿಕರು ಮೊದಲು’ ನೀತಿಗಳ ಫಲವಾಗಿ ಅಡುಗೆ ಅನಿಲದ ಬೆಲೆ ಹೆಚ್ಚಿದರೂ ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಲಭ್ಯವಾಗುತ್ತಿರುವ ಬೆಲೆ ಬಹಳ ಕಡಿಮೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ವಿಶ್ವದಾದ್ಯಂತ ಅಡುಗೆ ಅನಿಲ ಸಿಲಿಂಡರ್ ಬೆಲೆ ಜಾಸ್ತಿಯಾಗಿದೆ ಎಂದು ಕೇಂದ್ರ ಸಚಿವರು ಸೋಮವಾರ ಹೇಳಿದ್ದಾರೆ.

ಜಾಗತಿಕವಾಗಿ ಎಲ್ ಪಿ ಜಿ ಬೆಲೆ ಭಾರತದಲ್ಲೇ ಅತ್ಯಂತ ಕಡಿಮೆ, 6 ರಾಷ್ಟ್ರಗಳಲ್ಲಿನ ಬೆಲೆಯೊಂದಿಗೆ ಹೋಲಿಕೆ ಮಾಡಿದರು ಸಚಿವ ಹರ್ದೀಪ್ ಪುರಿ
ಅಡುಗೆ ಅನಿಲ ಸಿಲಿಂಡರ್
Follow us on

ನವದೆಹಲಿ: ಜುಲೈ ತಿಂಗಳ ಆರಂಭದಲ್ಲಿ ಭಾರತ ತೈಲ ಮಾರಾಟ ಕಂಪನಿಗಳು ಗೃಹಬಳಕೆ ಅಡುಗೆ ಅನಿಲದ (ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್, ಎಲ್ ಪಿ ಜಿ) (LPG) ಬೆಲೆಯನ್ನು 50 ರೂ. ಹೆಚ್ಚಿಸಿದಾಗ ಗೃಹಿಣಿಯರು (homemakers), ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು ಕಂಪನಿಗಳು ಮತ್ತು ಸರ್ಕಾರವನ್ನು ಶಪಿಸಿದರು. ಈ ಏರಿಕೆಯಿಂದ ದೆಹಲಿಯಲ್ಲಿ ಈಗ 14.2 ಕೆಜಿ ಸಿಲಿಂಡರ್ ಬೆಲೆ ರೂ. 1053 ಮತ್ತು ಬೆಂಗಳೂರಲ್ಲಿ ರೂ. 1055 ಆಗಿದೆ. ಅಷ್ಟಾಗಿಯೂ ಇತರ ಹಲವಾರು ದೇಶಗಳಲ್ಲಿ ಇಷ್ಟೇ ಸಾಮರ್ಥ್ಯದ ಎಲ್ ಪಿ ಜಿ ಸಿಲಿಂಡರ್ ಬೆಲೆಗೆ ಹೋಲಿಸಿದರೆ ವಿಶ್ವದಲ್ಲಿ ಅತಿ ಕಡಿಮೆ ಬೆಲೆಗೆ ಸಿಲಿಂಡರ್ ಸಿಗುವ ರಾಷ್ಟ್ರಗಳಲ್ಲಿ ಪೈಕಿ ಭಾರತವೂ (India) ಒಂದಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರದ ‘ನಾಗರಿಕರು ಮೊದಲು’ ನೀತಿಗಳ ಫಲವಾಗಿ ಅಡುಗೆ ಅನಿಲದ ಬೆಲೆ ಹೆಚ್ಚಿದರೂ ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಲಭ್ಯವಾಗುತ್ತಿರುವ ಬೆಲೆ ಬಹಳ ಕಡಿಮೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ವಿಶ್ವದಾದ್ಯಂತ ಅಡುಗೆ ಅನಿಲ ಸಿಲಿಂಡರ್ ಬೆಲೆ ಜಾಸ್ತಿಯಾಗಿದೆ ಎಂದು ಕೇಂದ್ರ ಸಚಿವರು ಸೋಮವಾರ ಹೇಳಿದ್ದಾರೆ.

ಯುಎಸ್, ಕೆನಡಾ, ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಆಸ್ಟ್ರೇಲಿಯ ಸೇರಿದಂತೆ 7 ರಾಷ್ಟ್ರಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆಯ ಜೊತೆ ಭಾರತದಲ್ಲಿ ಈಗ ಲಭ್ಯವಾಗುತ್ತಿರುವ ಸಿಲಿಂಡರ್ ಬೆಲೆಯನ್ನು ಹೋಲಿಕೆ ಮಾಡಿ ಒಂದು ಪಟ್ಟಿಯನ್ನು ನೀಡಿದ್ದಾರೆ. ಇಲ್ಲಿ ಉಲ್ಲೇಖಿಸಿರುವ ದೇಶಗಳಲ್ಲಿ ಹೋಲಿಸಿದರೆ ಅಡುಗೆ ಅನಿಲದ ಸಿಲಿಂಡರ್ ಭಾರತದಲ್ಲೇ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ.

ಭಾರತ- ರೂ. 1,053
ಪಾಕಿಸ್ತಾನ- ರೂ. 1,113.73
ನೇಪಾಳ- ರೂ. 1,139.93
ಶ್ರೀಲಂಕಾ- ರೂ. 1,343
ಯುಎಸ್- ರೂ. 1,754. 26
ಆಸ್ಟ್ರೇಲಿಯ- ರೂ. 1,764.67
ಕೆನಡಾ-ರೂ. 2,411.20

ಜುಲೈ 6 ರಂದು ಅಡುಗೆ ಅನಿಲದ ಸಿಲಿಂಡರ್ ಬೆಲೆ ಹೆಚ್ಚಾದ ನಂತರ ಆಗಲೇ ತಿಳಿಸಿದಂತೆ ದೆಹಲಿಯಲ್ಲಿ ಬೆಲೆ ರೂ 1052.50, ಮುಂಬೈಯಲ್ಲಿ ರೂ. 1002.50 ಇದ್ದ ಬೆಲೆ ರೂ. 1,079, ಕೊಲ್ಕತ್ತಾದಲ್ಲಿ ರೂ. 1,029 ಇದ್ದಿದ್ದು ರೂ. 1,079 ಮತ್ತು ಚೆನೈಯಲ್ಲಿ ರೂ. 1058.50 ಇದ್ದ ಬೆಲೆ ರೂ. 1068.50 ಆಗಿದೆ.