ನವದೆಹಲಿ, ನವೆಂಬರ್ 17: ಕ್ರಿಕೆಟ್ ವೃತ್ತಿಯೇ ಅಂತ್ಯವಾಯಿತು ಎಂದು ಎಲ್ಲರೂ ಭಾವಿಸುತ್ತಿರುವಂತೆಯೇ ಮೊಹಮ್ಮದ್ ಶಮಿ (Mohammed Shami) ಫೀನಿಕ್ಸ್ನಂತೆ ಮರಳಿದ್ದಾರೆ. ಅವರ ವೃತ್ತಿಜೀವನದ ಸರ್ವಶ್ರೇಷ್ಠ ಪ್ರದರ್ಶನ ಭಾರತದ ಅದೃಷ್ಟಕ್ಕೆ ವಿಶ್ವಕಪ್ ವೇಳೆಯೇ ಬಂದಿದೆ. ಬದಲೀ ಆಟಗಾರನಾಗಿ ಟೂರ್ನಿಯ ಮಧ್ಯದಲ್ಲಿ ಬಂದು ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್ ಪಡೆಯುವುದೆಂದರೆ ಸಾಮಾನ್ಯ ವಿಷಯವೇ…? ಈ ವಿಶ್ವಕಪ್ ಮೂಲಕ ಭಾರತೀಯ ಕ್ರಿಕೆಟಿಗರು ಶೈನಿಂಗ್ ಸ್ಟಾರ್ಗಳಾಗಿದ್ದಾರೆ. ಎಲ್ಲರೂ ಕೂಡ ಉತ್ತಂಗದ ಫಾರ್ಮ್ನಲ್ಲಿದ್ದಾರೆ. ಮೊಹಮ್ಮದ್ ಶಮಿ ಅವರಂತೂ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ್ದಾರೆ. ಭಾರತೀಯ ಕ್ರಿಕೆಟ್ನ ಹೊಸ ಪೋಸ್ಟರ್ ಬಾಯ್ ಆಗಿದ್ದಾರೆ.
ಮೊಹಮ್ಮದ್ ಶಮಿ ಎಂಬ ಬ್ರ್ಯಾಂಡ್ನ ಮೌಲ್ಯ ಒಮ್ಮೆಗೇ ಮೇಲೇರಿದೆ. ಸಾಲುಸಾಲಾಗಿ ಕಂಪನಿಗಳು ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ಮಾಡಿಕೊಳ್ಳಲು ಸರದಿಯಲ್ಲಿ ನಿಲ್ಲುವಂತಾಗಿದೆ. ಮೊಹಮ್ಮದ್ ಶಮಿಯ ಜಾಹೀರಾತುಗಳನ್ನು ಡೀಲ್ ಮಾಡುವ ಫ್ಲೇರ್ ಮೀಡಿಯಾ ಸಂಸ್ಥೆಯ ಸಂಸ್ಥಾಪಕ ಸೌರಜಿತ್ ಚಟರ್ಜಿ ನೀಡಿರುವ ಮಾಹಿತಿ ಪ್ರಕಾರ ಆರೋಗ್ಯ ಪಾನೀಯ ಕಂಪನಿಗಳು, ಹೆಡ್ಫೋನ್ ಕಂಪನಿಗಳು, ಎಲೆಕ್ಟ್ರಾನಿಕ್ಸ್ ಕಂಪನಿಗಳು ಶಮಿಯನ್ನು ರಾಯಭಾರಿಯಾಗಿ ಮಾಡಿಕೊಳ್ಳಲು ಮುಗಬಿದ್ದಿವೆ.
ಇದನ್ನೂ ಓದಿ: Mohammed Shami: ತಂಡಕ್ಕೆ ಅಗತ್ಯವಿಲ್ಲ ಎಂದು ಕೈಬಿಟ್ಟದ್ದರು: ಮೊಹಮ್ಮದ್ ಶಮಿಯ ಕಮ್ಬ್ಯಾಕ್ ಕಥೆಯೇ ರೋಚಕ
ಸದ್ಯ, ಮೊಹಮ್ಮದ್ ಶಮಿ ಅವರು ಪ್ಯೂಮಾ, ಹೆಲ್ ಎನರ್ಜಿ ಡ್ರಿಂಕ್ ಮತ್ತು ವಿಶನ್ 11 ಫ್ಯಾಂಟಸಿ ಆ್ಯಪ್ಗಳಿಗೆ ಜಾಹೀರಾತು ಕೊಡುತ್ತಿದ್ದಾರೆ. ವಿಶ್ವಕಪ್ನಲ್ಲಿ ಶಮಿ ಮಾಡಿದ ಆರ್ಭಟವನ್ನು ಪ್ಯೂಮಾ ಸಖತ್ತಾಗಿ ಮೈಲೇಜ್ ಪಡೆಯಲು ಹೊರಟಿದೆ. ಸೋಷಿಯಲ್ ಮೀಡಿಯಾದಲ್ಲಿ ಶಮಿ ಹೆಸರನ್ನು ಪ್ಯೂಮಾ ಸಖತ್ತಾಗಿ ಬಳಸುತ್ತಿದೆ.
SHAMI STORM HAS HIT WANKHEDE 🌪️ @MdShami11 #INDvNZ pic.twitter.com/HD9P7uRiBd
— PUMA Cricket (@pumacricket) November 15, 2023
ಇದನ್ನೂ ಓದಿ: ‘ನಿಮಗೆ ನಾಚಿಕೆಯಾಗಬೇಕು’! ಪಾಕ್ ಮಾಜಿ ಆಟಗಾರನ ಮೋಸದಾಟದ ಆರೋಪಕ್ಕೆ ಶಮಿ ಖಡಕ್ ಉತ್ತರ
ಇದೇ ವೇಳೆ, ವಿಶ್ವಕಪ್ ವೇಳೆ ಮೊಹಮ್ಮದ್ ಶಮಿಯ ಜಾಹೀರಾತು ಮೌಲ್ಯ ಎರಡು ಪಟ್ಟು ಹೆಚ್ಚಾಗಿದೆ. ವಿಶ್ವಕಪ್ಗೆ ಮುನ್ನ ಅವರ ಎಂಡೋರ್ಸ್ಮೆಂಟ್ ಡೀಲ್ 40ರಿಂದ 50 ಲಕ್ಷ ರೂ ರೇಂಜ್ನಲ್ಲಿತ್ತು. ಈಗ ಒಂದು ಡೀಲ್ಗೆ 1 ಕೋಟಿ ರೂ ಶುಲ್ಕ ತೆರಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Fri, 17 November 23