Moody’s: ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ 6ರಷ್ಟು ಮಾತ್ರ ಜಿಡಿಪಿ ವೃದ್ಧಿ: ಆರ್​ಬಿಐಗಿಂತ ಮೂಡೀಸ್ ಅಂದಾಜು ಭಿನ್ನ

|

Updated on: Jun 11, 2023 | 5:16 PM

India To Grow By 6-6.3% In First Quarter: ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 6ರಿಂದ ಶೇ. 6.3ರಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೂಡೀಸ್ ಅಭಿಪ್ರಾಯಪಟ್ಟಿದೆ.

Moodys: ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ 6ರಷ್ಟು ಮಾತ್ರ ಜಿಡಿಪಿ ವೃದ್ಧಿ: ಆರ್​ಬಿಐಗಿಂತ ಮೂಡೀಸ್ ಅಂದಾಜು ಭಿನ್ನ
ಜಿಡಿಪಿ
Follow us on

ನವದೆಹಲಿ: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ (India GDP Growth) ಶೇ. 6ರಿಂದ ಶೇ. 6.3ರಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೂಡೀಸ್ (Moody’s) ಅಭಿಪ್ರಾಯಪಟ್ಟಿದೆ. ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ತನ್ನ ವರದಿಯಲ್ಲಿ ಇದೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8ರಷ್ಟು ಬೆಳವಣಿಗೆ ಹೊಂದಬಹುದು ಎಂದು ಅಂದಾಜು ಮಾಡಿತ್ತು. ಇದಕ್ಕೆ ಬಹುತೇಕ ಭಿನ್ನವಾದ ಅಂದಾಜನ್ನು ಮೂಡೀಸ್ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಸರ್ಕಾರ ನಿರೀಕ್ಷಿಸದಷ್ಟು ಕಡಿಮೆ ಆದಾಯ ಬರುವ ಸಾಧ್ಯತೆ ಇರುವುದರಿಂದ, ಅದರ ಪರಿಣಾಮವಾಗಿ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎಂಬುದು ಮೂಡೀಸ್ ಸಂಸ್ಥೆ ಮುಂದಿಟ್ಟಿರುವ ಕಾರಣಗಳು.

ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.1ರಷ್ಟು ಇತ್ತು. ಈ ಕ್ವಾರ್ಟರ್​ನಲ್ಲಿ ಬೆಳವಣಿಗೆ ದರ ಹೆಚ್ಚೂಕಡಿಮೆ ಅಷ್ಟೇ ಇರಬಹುದು ಎನ್ನಲಾಗಿದೆ.

ಮೂಡೀಸ್ ಸಂಸ್ಥೆ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಶೇ. 6.1ರಷ್ಟು ಇರಬಹುದು. 2023-25ರ ಹಣಕಾಸು ವರ್ಷದಲ್ಲಿ ಶೇ. 6.3ರಷ್ಟು ಬೆಳವಣಿಗೆ ಆಗಬಹುದು ಎಮದು ಅಂದಾಜು ಮಾಡಿದೆ.

ಇದನ್ನೂ ಓದಿRBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು

ಆರ್​ಬಿಐ ಮಾಡಿರುವ ಅಂದಾಜು ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು. ಈ ಹಣಕಾಸು ವರ್ಷದಲ್ಲಿ ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕ್ರಮವಾಗಿ ಶೇ. 8.0, ಶೇ 6.5, ಶೇ 6.0 ಮತ್ತು ಶೇ. 5.7ರಷ್ಟು ಆಗಬಹುದು ಎಂದು ಆರ್​ಬಿಐ ಭವಿಷ್ಯ ಹೇಳಿದೆ.

ಭಾರತ ಸರ್ಕಾರದ ಸಾಲ ಎಷ್ಟಿದೆ…?

ಭಾರತ ಸರ್ಕಾರಕ್ಕೆ ಅಂದರೆ ನಮ್ಮ ಕೇಂದ್ರ ಸರ್ಕಾರಕ್ಕೆ ವಿಪರೀತ ಸಾಲ ಇದೆ. ಮೂಡೀಸ್ ಸಂಸ್ಥೆಯ ಹಿರಿಯ ಅದಿಕಾರಿ ಜೀನ್ ಫ್ಯಾಂಗ್ ಪ್ರಕಾರ ಭಾರತದ 2022-23ರ ಜಿಡಿಪಿಯ ಶೇ. 81.8ರಷ್ಟು ಸಾಲ ಭಾರತ ಸರ್ಕಾರಕ್ಕಿದ್ದು, ಹೆಚ್ಚು ಸಾಲ ಪಡೆಯುವ ಶಕ್ತಿ ಕಡಿಮೆ ಇದೆಯಂತೆ. ಆದರೆ, ಭಾರತದ ಆರ್ಥಿಕ ಪ್ರಗತಿಯ ಶಕ್ತಿ ಹೆಚ್ಚು ಇದೆ. ಸರ್ಕಾರದ ಸಾಲ ತೀರಿಸುವಷ್ಟು ಸ್ಥಿರವಾದ ಹಣಕಾಸು ನೆಲೆ ಭಾರತದಲ್ಲಿದೆ ಎಂದು ಮೂಡೀಸ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ