2020ನೇ ಇಸವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 10ಕ್ಕೆ 6 ಜನರ ಆದಾಯ 1 ಲಕ್ಷ ರೂ.ಗಿಂತ ಕಮ್ಮಿ

| Updated By: shruti hegde

Updated on: Nov 04, 2021 | 8:51 AM

ಸಮೀಕ್ಷೆಯೊಂದರಲ್ಲಿ ತಿಳಿದುಬಂದಿರುವ ಪ್ರಕಾರ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರ ಪೈಕಿ ಶೇ 60ಕ್ಕೂ ಮಂದಿಯ ಆದಾಯ 1 ಲಕ್ಷ ರೂಪಾಯಿಯೊಳಗಿತ್ತು.

2020ನೇ ಇಸವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 10ಕ್ಕೆ 6 ಜನರ ಆದಾಯ 1 ಲಕ್ಷ ರೂ.ಗಿಂತ ಕಮ್ಮಿ
ಸಾಂದರ್ಭಿಕ ಚಿತ್ರ
Follow us on

2020ನೇ ಇಸವಿಯಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದವರಲ್ಲಿ ಶೇ 63ರಷ್ಟು ಜನರು ವಾರ್ಷಿಕ ಆದಾಯ 1 ಲಕ್ಷ ರೂಪಾಯಿಗಿಂತ ಕಡಿಮೆ ಹೊಂದಿದ್ದವರು ಎಂದು ವರದಿ ಆಗಿದೆ. ಒಟ್ಟಾರೆಯಾಗಿ, ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಈಡಾಗಿದ್ದ ಸಮಯದಲ್ಲಿ ಭಾರತದಲ್ಲಿ 1,53,052 ಆತ್ಮಹತ್ಯೆಗಳು ವರದಿಯಾಗಿವೆ. ಇದು 2019ನೇ ಇಸವಿಗಿಂತ ಶೇ 10ರಷ್ಟು ಹೆಚ್ಚಾಗಿದೆ. ಸುಮಾರು ಶೇ 32ರಷ್ಟು ಆತ್ಮಹತ್ಯೆಗಳು ಅಥವಾ 49,270 ಜನರು ವಾರ್ಷಿಕ ಆದಾಯ 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ ಹೊಂದಿದ್ದರು. “ಇದು ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮ ಆಗಿರಬಹುದು. ಇದು ಲಾಕ್​ಡೌನ್​ನಿಂದಾಗಿ ಬಡವರು ಮತ್ತು ಬಡತನದ ಅಂಚಿನಲ್ಲಿ ಇರುವವರ ಮೇಲೆ ಬೀರಿದ ಪರಿಣಾಮ ಆಗಿದೆ,” ಎಂದು ನವೀ ಮುಂಬೈ ಮೂಲದ ಸಂಸ್ಥೆ ಮತ್ತು ಆತ್ಮಹತ್ಯೆ ತಡೆಗಟ್ಟುವ ಕೇಂದ್ರವಾದ ಆಸ್ರಾದ ಜಾನ್ಸನ್ ಥಾಮಸ್ ಅವರು ದಿನ ಕೂಲಿಕಾರರು, ವೇತನದಾರರು ಮತ್ತು ಕಡಿಮೆ ಆದಾಯದ ಗುಂಪುಗಳ ಜನರ ಆತ್ಮಹತ್ಯೆಗಳ ಹೆಚ್ಚಿನ ಪಾಲು ಕುರಿತು ಹೇಳಿದ್ದಾರೆ.

“ಅಸಂಘಟಿತ ಕಾರ್ಮಿಕರು ಮತ್ತು ಸುರಕ್ಷಿತ ಉದ್ಯೋಗ ಇಲ್ಲದವರು ಅಥವಾ ಸಣ್ಣ ವ್ಯಾಪಾರವನ್ನು ಹೊಂದಿರುವವರ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಅವರು ಬದುಕುಳಿಯುವುದೇ ಕಷ್ಟಕರವಾಗಿಸಿದೆ. ಮತ್ತು ಆರ್ಥಿಕತೆಯ ಮೇಲೆ ಹೆಚ್ಚಿದ ಪರಿಣಾಮದಿಂದಾಗಿ ಅವರ ಅಸ್ತಿತ್ವದ ಸಾಧ್ಯತೆಗಳಿಗೆ ಮತ್ತೂ ಅಡ್ಡಿಯಾಗಿದೆ. ಅಂತಹ ವಲಯಗಳ ಜನರು, ವಿಶೇಷವಾಗಿ ಬಡತನದ ಅಂಚಿನಲ್ಲಿರುವವರು ಈ ಕಠಿಣ ಸಮಯದಲ್ಲಿ ತಮ್ಮನ್ನು ಉಳಿಸಿಕೊಳ್ಳಲು ಉಳಿತಾಯ ಅಥವಾ ಬೆಂಬಲದ ವ್ಯವಸ್ಥೆಗಳನ್ನು ಹೊಂದಿಲ್ಲದ ಕಾರಣ ಕಷ್ಟಕ್ಕೆ ಈಡಾದರು,” ಎಂದು ಅವರು ಹೇಳಿದ್ದಾರೆ.

ಗೃಹಿಣಿಯರಲ್ಲಿ ಹೆಚ್ಚಿನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಥಾಮಸ್ ಹೇಳುವ ಪ್ರಕಾರ, ಕೌಟುಂಬಿಕ ಹಿಂಸಾಚಾರದ ಜೊತೆಗೆ ಲಾಕ್‌ಡೌನ್‌ಗಳು ಮನೆಯಲ್ಲಿ ಮಹಿಳೆಯರ ಮೇಲೆ ಅಸಮಂಜಸ ನಿರೀಕ್ಷೆಗಳು ಮತ್ತು ಒತ್ತಡವನ್ನು ಹೆಚ್ಚಿಸಿದವು. ಏಕೆಂದರೆ, ಹೆಚ್ಚಿನ ಕುಟುಂಬ ಸದಸ್ಯರು ಮನೆಯಲ್ಲಿ ಇದ್ದು, ಅವರಿಗೆ ಬೇಕಾದ ಕೆಲಸಗಳನ್ನು ಮಾಡಿಕೊಡಬೇಕಾದ್ದರಿಂದ ಅವರಿಗೆ ಕಷ್ಟವಾಯಿತು ಎನ್ನಲಾಗಿದೆ. ವೃತ್ತಿಗಳಿಗೆ ಸಂಬಂಧಿಸಿದಂತೆ, ದೈನಂದಿನ ವೇತನದಾರರು 37,666 ಸಾವುಗಳಿಗೆ ಕಾರಣರಾಗಿದ್ದಾರೆ. ಗೃಹಿಣಿಯರು ಒಟ್ಟು ಅಥವಾ 22,374 ಆತ್ಮಹತ್ಯೆಗಳಲ್ಲಿ ಶೇ 14.6ರಷ್ಟು ವರದಿ ಮಾಡಿದ್ದಾರೆ. ಆ ನಂತರ ಸ್ವಯಂ ಉದ್ಯೋಗಿಗಳು (ಶೇ 11.3) ಮತ್ತು ವೃತ್ತಿಪರರು/ಸಂಬಳ ಪಡೆಯುವ ವ್ಯಕ್ತಿಗಳು ಇದ್ದಾರೆ.

2020ರಲ್ಲಿ ವೃತ್ತಿವಾರು ಆತ್ಮಹತ್ಯೆಗಳ ವಿತರಣೆ ಹೀಗಿದೆ:
ಕಳೆದ ವರ್ಷ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸುಮಾರು ಶೇ 7ರಷ್ಟು ಅಥವಾ 10,677 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 5,579 ರೈತರು ಅಥವಾ ಕೃಷಿಕರು ಮತ್ತು 5,098 ಕೃಷಿ ಕಾರ್ಮಿಕರು ಇದ್ದಾರೆ. ಕೌಟುಂಬಿಕ ಸಮಸ್ಯೆಗಳು (ಶೇ 33.6) ಮತ್ತು ಅನಾರೋಗ್ಯ (ಶೇ 18) ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಾಗಿದೆ. ಮಾದಕ ವ್ಯಸನ/ವ್ಯಸನ (ಶೇ 6), ಮದುವೆ ಸಂಬಂಧಿತ ಸಮಸ್ಯೆಗಳು (ಶೇ 5), ಪ್ರೇಮ ವ್ಯವಹಾರಗಳು (ಶೇ 4.4 ಪ್ರತಿಶತ), ದಿವಾಳಿತನ ಅಥವಾ ಋಣಭಾರ (ಶೇ 3.4), ನಿರುದ್ಯೋಗ (ಶೇ 2.3), ಪರೀಕ್ಷೆಯಲ್ಲಿ ವೈಫಲ್ಯ (ಶೇ 1.4), ವೃತ್ತಿಪರ/ವೃತ್ತಿ ಸಮಸ್ಯೆ (ಶೇ. 1.2) ಮತ್ತು ಬಡತನ (ಶೇ. 1.2) ಆತ್ಮಹತ್ಯೆಗೆ ಇತರ ಕಾರಣಗಳಾಗಿವೆ ಎಂದು ವರದಿ ತಿಳಿಸಿದೆ.

ಮಹಾರಾಷ್ಟ್ರವು ಅತಿ ಹೆಚ್ಚು, ಅಂದತೆ 19,909 ಅಥವಾ ದೇಶದಲ್ಲಿನ ಎಲ್ಲ ಆತ್ಮಹತ್ಯೆಗಳಲ್ಲಿ ಶೇ 13ರಷ್ಟು ವರದಿ ಮಾಡಿದೆ. ತಮಿಳುನಾಡು (16,883), ಮಧ್ಯಪ್ರದೇಶ (14,578), ಪಶ್ಚಿಮ ಬಂಗಾಳ (13,103) ಮತ್ತು ಕರ್ನಾಟಕ (12,259) ನಂತರದ ಸ್ಥಾನದಲ್ಲಿವೆ. ಈ ಐದು ರಾಜ್ಯಗಳು ಒಟ್ಟಾಗಿ ದೇಶದಲ್ಲಿ ವರದಿಯಾದ ಎಲ್ಲ ಆತ್ಮಹತ್ಯೆಗಳಲ್ಲಿ ಶೇ 50ರಷ್ಟು ಹೊಂದಿವೆ.

ಭಾರತದಲ್ಲಿ ಆತ್ಮಹತ್ಯೆಗಳು 2016-20
2020ರಲ್ಲಿ ಭಾರತದಲ್ಲಿ ಆತ್ಮಹತ್ಯೆ ದರ (ಪ್ರತಿ 1,00,000 ಜನಸಂಖ್ಯೆಗೆ ಆತ್ಮಹತ್ಯೆಗಳ ಸಂಖ್ಯೆ) ಶೇ 11.3 ರಷ್ಟಿದೆ ಎಂದು ವರದಿಯಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಣ್ಣ ರಾಜ್ಯಗಳು ಹೆಚ್ಚಿನ ಆತ್ಮಹತ್ಯೆ ದರಗಳನ್ನು ವರದಿ ಮಾಡಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತ್ಯಧಿಕ (45), ನಂತರ ಸಿಕ್ಕಿಂ (42.5), ಛತ್ತೀಸ್‌ಗಢ (26.4), ಪುದುಚೆರಿ (26.3) ಮತ್ತು ಕೇರಳ (24.0) ಇದೆ.

ಇದನ್ನೂ ಓದಿ: ‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್