Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶಗಳ್ಯಾವುವು? ಭಾರತದ ಪಾಸ್​ಪೋರ್ಟ್ ಪ್ರಭಾವ ಎಷ್ಟು?

|

Updated on: Jan 11, 2024 | 10:48 AM

Most Powerful Passports' List: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಆರು ದೇಶಗಳು ಅಗ್ರ ಸ್ಥಾನ ಹಂಚಿಕೊಂಡಿವೆ. ಹೆನ್ಲೀ ಅಂಡ್ ಪಾರ್ಟ್ನರ್ಸ್ ಪ್ರತೀ ವರ್ಷ ಪ್ರಬಲ ಪಾಸ್​ಪೋರ್ಟ್​ಗಳ ಪಟ್ಟಿ ಪ್ರಕಟಿಸುತ್ತದೆ. ಹೆನ್ಲೀ ಪಟ್ಟಿಯಲ್ಲಿ ಭಾರತದ ಪಾಸ್​ಪೋರ್ಟ್ 80ನೇ ಸ್ಥಾನ ಪಡೆದಿದೆ. ಭಾರತೀಯರು 60 ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಬಹುದು.

Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶಗಳ್ಯಾವುವು? ಭಾರತದ ಪಾಸ್​ಪೋರ್ಟ್ ಪ್ರಭಾವ ಎಷ್ಟು?
ಪಾಸ್​ಪೋರ್ಟ್
Follow us on

ನವದೆಹಲಿ, ಜನವರಿ 11: ನಿರ್ದಿಷ್ಟ ದೇಶಗಳ ನಾಗರಿಕರಿಗೆ ಬೇರೆ ನಿರ್ದಿಷ್ಟ ದೇಶಗಳಿಗೆ ಪ್ರಯಾಣಿಸಲು ವೀಸಾ ಅಗತ್ಯ ಇರುವುದಿಲ್ಲ. ಅದರ ಆಧಾರದ ಮೇಲೆ ಒಂದು ದೇಶದ ಪಾಸ್​ಪೋರ್ಟ್ ಶಕ್ತಿ ಎಷ್ಟು ಎಂದು ಅಂದಾಜಿಸಲಾಗುತ್ತದೆ. ಈ ರೀತಿ ಅತಿ ಪ್ರಬಲ ಪಾಸ್​ಪೋರ್ಟ್​ಗಳ ಪಟ್ಟಿಗಳನ್ನು ವಿವಿಧ ಸಂಸ್ಥೆಗಳು ಪ್ರಕಟಿಸುತ್ತವೆ. ಲಂಡನ್ ಮೂಲದ ಹೆನ್ಲೀ ಅಂಡ್ ಪಾರ್ಟ್ನರ್ಸ್ ಎಂಬ ಅಡ್ವೈಸರಿ ಸಂಸ್ಥೆ ಕಲೆಹಾಕಿದ ಪಟ್ಟಿ (Henley Passport Index 2023) ಪ್ರಕಾರ ಆರು ದೇಶಗಳ ಪಾಸ್​ಪೋರ್ಟ್​ಗಳು ಅಗ್ರಸ್ಥಾನ ಹಂಚಿಕೊಂಡಿವೆ. ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್ ಮತ್ತು ಸ್ಪೇನ್ ದೇಶಗಳು ಮೊದಲ ಸ್ಥಾನ ಪಡೆದಿವೆ. ಈ ಆರು ದೇಶಗಳ ನಾಗರಿಕರು ಬೇರೆ 194 ದೇಶಗಳಿಗೆ ವೀಸಾರಹಿತವಾಗಿ ಹೋಗಬಹುದು. ಅಥವಾ ಆ ಪ್ರದೇಶಕ್ಕೆ ಹೋದ ಬಳಿಕ ವೀಸಾ ಪಡೆಯುವ ಆಯ್ಕೆ ಹೊಂದಿರಬಹುದು. ಜಪಾನ್ ಮತ್ತು ಸಿಂಗಾಪುರ ದೇಶಗಳು ಕಳೆದ ಐದು ವರ್ಷಗಳಿಂದಲೂ ಅಗ್ರಸ್ಥಾನದಲ್ಲಿ ಇರುವುದು ವಿಶೇಷ. ಈ ಪಟ್ಟಿಯಲ್ಲಿ ಭಾರತ 80ನೇ ಸ್ಥಾನದಲ್ಲಿದೆ.

ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶ ಹಾಗೂ ಮುಕ್ತ ಪ್ರವೇಶದ ಸ್ಥಳಗಳ ಸಂಖ್ಯೆ

  • ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್, ಸ್ಪೇನ್ (194 ದೇಶಗಳು)
  • ಫಿನ್​ಲ್ಯಾಂಡ್, ಸ್ವೀಡನ್, ಸೌತ್ ಕೊರಿಯಾ (193 ದೇಶಗಳು)
  • ಆಸ್ಟ್ರಿಯಾ, ಡೆನ್ಮಾರ್ಕ್, ಐರ್​ಲ್ಯಾಂಡ್, ದಿ ನೆದರ್​ಲ್ಯಾಂಡ್ಸ್ (192 ದೇಶಗಳು)
  • ಬೆಲ್ಜಿಯಂ, ಲಕ್ಸಂಬರ್ಗ್, ನಾರ್ವೇ, ಪೋರ್ಚುಗಲ್, ಬ್ರಿಟನ್ (191 ದೇಶಗಳು)
  • ಗ್ರೀಸ್, ಮಾಲ್ಟಾ, ಸ್ವಿಟ್ಜರ್​ಲ್ಯಾಂಡ್ (190 ದೇಶಗಳು)
  • ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚೆಕಿಯಾ, ಪೋಲ್ಯಾಂಡ್ (189 ದೇಶಗಳು)
  • ಅಮೆರಿಕ, ಕೆನಡಾ, ಹಂಗೆರಿ (188 ದೇಶಗಳು)
  • ಎಸ್ಟೋನಿಯಾ, ಲಿಥುವೇನಿಯಾ (187 ದೇಶಗಳು)
  • ಲಾಟ್ವಿಯಾ, ಸ್ಲೊವಾಕಿಯಾ, ಸ್ಲೊವೇನಿಯಾ (186 ಸ್ಥಳಗಳು)
  • ಐಸ್​ಲ್ಯಾಂಡ್: 185 ದೇಶಗಳು

ಇದನ್ನೂ ಓದಿ: Share Market: ಭಾರತದ ಷೇರು ಮಾರುಕಟ್ಟೆ ಮೇಲೆ ಈ ವರ್ಷ ಪ್ರಭಾವ ಬೀರುವ ಆರು ಘಟನೆಗಳು

ಭಾರತದ ಪಾಸ್​ಪೋರ್ಟ್ ಶಕ್ತಿ ಎಷ್ಟು?

ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್ ಪಟ್ಟಿಯಲ್ಲಿ ಭಾರತದ ಪಾಸ್​ಪೋರ್ಟ್​ಗೆ 80ನೇ ಸ್ಥಾನ ಇದೆ. ಭಾರತೀಯರು ವೀಸಾ ರಹಿತವಾಗಿ ಪ್ರಯಾಣಿಸಲು ಅಥವಾ ಪ್ರಯಾಣ ನಂತರ ವೀಸಾ ಪಡೆಯುವ ಅವಕಾಶವನ್ನು 60 ದೇಶಗಳು ನೀಡಿವೆ. ಇರಾನ್, ಜೋರ್ಡನ್, ಕತಾರ್, ಹೈಟಿ, ಜಮೈಕಾ, ಭೂತಾನ್, ಇಂಡೋನೇಷ್ಯಾ, ಕೀನ್ಯಾ ಮಾಲ್ಡೀವ್ಸ್, ಜಿಂಬಾಬ್ವೆ, ಟುನಿಶಿಯಾ, ತಾಂಜಾನಿಯಾ, ಮಾರಿಷಸ್, ಮಲೇಷ್ಯಾ, ಮಯನ್ಮಾರ್, ಥಾಯ್ಲೆಂಡ್, ಶ್ರೀಲಂಕಾ, ನೇಪಾಳ ದೇಶಗಳು ಇದರಲ್ಲಿ ಒಳಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ