Share Market: ಭಾರತದ ಷೇರು ಮಾರುಕಟ್ಟೆ ಮೇಲೆ ಈ ವರ್ಷ ಪ್ರಭಾವ ಬೀರುವ ಆರು ಘಟನೆಗಳು
Global Events In 2024: ಹಣಕಾಸು ವ್ಯವಸ್ಥೆ ಮೇಲೆ ಪ್ರಭಾವಿಸುವಂತಹ ವಿದ್ಯಮಾನಗಳು ನಡೆದಲ್ಲಿ ಅದರ ಪರಿಣಾಮ ಷೇರು ಮಾರುಕಟ್ಟೆಗಳ ಮೇಲೆ ಆಗಬಹುದು. 2023ರಲ್ಲಿ ಉತ್ತಮವಾಗಿ ಬೆಳೆದ ಷೇರುಪೇಟೆ 2024ರಲ್ಲಿ ಅದೇ ವೇಗದಲ್ಲಿ ಸಾಗುತ್ತಾ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿನ ಚುನಾವಣೆ, ಬಜೆಟ್ ಮಂಡನೆ ಇತ್ಯಾದಿ ವಿದ್ಯಮಾನಗಳು ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು.
ಷೇರು ಮಾರುಕಟ್ಟೆಗಳು ಬಹಳ ಸೂಕ್ಷ್ಮ ಸಂವೇದನೆಯ ವರ್ತನೆ ಹೊಂದಿರುತ್ತವೆ. ದೇಶ ವಿದೇಶಗಳ ಪ್ರಮುಖ ಬೆಳವಣಿಗೆಗಳಿಂದ ಬಹಳ ಬೇಗ ಪ್ರಭಾವಿತಗೊಳ್ಳುತ್ತವೆ. ಷೇರು ಮಾರುಕಟ್ಟೆ ಹೀಗೇ ಸಾಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುವಾಗಲೇ ಅಚ್ಚರಿ ರೀತಿಯಲ್ಲಿ ಏರಿಳಿತ ಕಾಣುತ್ತದೆ. 2023ರಲ್ಲಿ ಇಸ್ರೇಲ್, ಉಕ್ರೇನ್ ವಿದ್ಯಮಾನಗಳು ಒಂದಷ್ಟು ಹಿನ್ನಡೆ ತಂದರೂ ಭಾರತದ ಷೇರುಮಾರುಕಟ್ಟೆ (Indian stock markets) ಸಾವರಿಸಿಕೊಂಡು ಉತ್ತಮ ಪ್ರದರ್ಶನ ತೋರಿತ್ತು. ನಿಫ್ಟಿ ಮತ್ತು ಬಿಎಸ್ಇ ಎರಡೂ ಕೂಡ ದಾಖಲೆಯ ಎತ್ತರಕ್ಕೆ ಹೋದವು. ಇದೇ ವೇಗ 2024ರಲ್ಲೂ ಮುಂದುವರಿಯುತ್ತದಾ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಆದರೆ, 2024ರಲ್ಲಿ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವಂತಹ ಕೆಲ ಪ್ರಮುಖ ಘಟನೆಗಳು ಜರುಗಲಿವೆ.
ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್
ಚುನಾವಣೆಗೆ ಮುನ್ನ ಪ್ರಸ್ತುಪಡಿಸಲಾಗುವ ಮಧ್ಯಂತರ ಬಜೆಟ್ನಲ್ಲಿ ತೆರಿಗೆಗೆ ಸಂಬಂಧಿಸಿದ ಕೆಲ ಘೋಷಣೆಗಳು ಆಗಬಹುದು. ಜನಪ್ರಿಯ ಸ್ಕೀಮ್ಗಳನ್ನು ಘೋಷಿಸುವ ಸಾಧ್ಯತೆ ಇಲ್ಲವಾದರೂ ದೂರಗಾಮಿ ಯೋಜನೆಗಳನ್ನು ಪ್ರಕಟಿಸಬಹುದು.
ಲೋಕಸಭಾ ಚುನಾವಣೆ
ಹಿಂದಿನ ಲೋಕಸಭಾ ಚುನಾವಣೆಗಳನ್ನು ಗಮನಿಸಿದಾಗ ಪ್ರತೀ ಚುನಾವಣೆಗೆ ಆರು ತಿಂಗಳು ಮುಂಚಿನಿಂದ ಷೇರುಪೇಟೆ ಹೆಚ್ಚು ಕ್ರಿಯಾಶೀಲಗೊಳ್ಳುತ್ತದೆ. ನಿಫ್ಟಿ ಸೂಚ್ಯಂಕ ಸರಾಸರಿ ಶೇ. 13ರಷ್ಟು ಹೆಚ್ಚಿರುವುದುಂಟು.
ಹಾಗೆಯೇ, ಲೋಕಸಭೆ ಚುನಾವಣೆ ಬಳಿಕ ಯಾವ ಸರ್ಕಾರ ಬರುತ್ತದೆ ಎಂಬುದೂ ಕೂಡ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಮುಂದಿನ ಕೆಲ ತಿಂಗಳಲ್ಲಿ ಏರಲಿದೆ ಮೊಬೈಲ್ ಬಿಲ್; ಎಲೆಕ್ಷನ್ ಮುಗಿಯಲಿ ಎಂದು ಕಾಯುತ್ತಿವೆ ಟೆಲಿಕಾಂ ಕಂಪನಿಗಳು
ಅಮೆರಿಕದಲ್ಲಿ ಬಡ್ಡಿದರ
ಅಮೆರಿಕದ ಫೆಡರಲ್ ರಿಸರ್ವ್ಸ್ 2024ರಲ್ಲಿ ಮೂರು ಬಾರಿ ಬಡ್ಡಿ ದರ ಇಳಿಸುವುದಾಗಿ ಹೇಳಿದೆ. ಇದು ಕೂಡ ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುವಂತಹದ್ದು.
ಚುನಾವಣೆ ನಂತರದ ಬಜೆಟ್
ಲೋಕಸಭೆ ಚುನಾವಣೆ ಆಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗುತ್ತದೆ. ಆ ಬಜೆಟ್ನಲ್ಲಿ ಪ್ರಮುಖ ಘೋಷಣೆಗಳಾಗಬಹುದು.
ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಗಳು
ಎರಡು ತಿಂಗಳಿಗೊಮ್ಮೆ ನಡೆಯುವ ಅರ್ಬಿಐ ಮಾನಿಟರಿ ಪಾಲಿಸಿ ಕಮಿಟಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಸಮೀಕ್ಷೆಗಳು ಹೂಡಿಕೆದಾರರ ಮೇಲೆ ಪ್ರಭಾವ ಬೀರಬಹುದು.
ಇದನ್ನೂ ಓದಿ: Narendra Modi: ಸ್ವಾತಂತ್ರ್ಯ ಶತಮಾನೋತ್ಸವದ ವೇಳೆ ಮುಂದುವರಿದ ದೇಶವನ್ನಾಗಿಸುವ ಗುರಿ: ನರೇಂದ್ರ ಮೋದಿ
ಜಾಗತಿಕ ಚುನಾವಣೆಗಳು…
2024ರಲ್ಲಿ ಭಾರತ ಮಾತ್ರವಲ್ಲ ಜಾಗತಿಕವಾಗಿ 64ಕ್ಕೂ ಹೆಚ್ಚು ದೇಶಗಳಲ್ಲಿ ಚುನಾವಣೆಗಳಿವೆ. ಇದರಲ್ಲಿ ಅಮೆರಿಕ, ರಷ್ಯಾ, ಬ್ರಿಟನ್, ಸೌತ್ ಕೊರಿಯಾ ಮೊದಲಾದ ದೇಶಗಳ ಚುನಾವಣೆಯೂ ಇದೆ. ಅದರಲ್ಲೂ ಅಮೆರಿಕದ ಚುನಾವಣೆ ಷೇರು ಮಾರುಕಟ್ಟೆ ಮೇಲೆ ಹೆಚ್ಚು ಪರಿಣಾಮ ಬೀರುವಂತಹದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ