AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ಕೆಲ ತಿಂಗಳಲ್ಲಿ ಏರಲಿದೆ ಮೊಬೈಲ್ ಬಿಲ್; ಎಲೆಕ್ಷನ್ ಮುಗಿಯಲಿ ಎಂದು ಕಾಯುತ್ತಿವೆ ಟೆಲಿಕಾಂ ಕಂಪನಿಗಳು

Telecom Rate Hike: ಏಪ್ರಿಲ್-ಮೇ ತಿಂಗಳಲ್ಲಿನ ಲೋಕಸಭೆ ಚುನಾವಣೆ ಬಳಿಕ ಭಾರತೀಯ ಟೆಲಿಕಾಂ ಕಂಪನಿಗಳು ಬೆಲೆ ಹೆಚ್ಚಿಸಬಹುದು ಎನ್ನಲಾಗಿದೆ. ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯೂರಿಟೀಸ್ ಎಂಬ ಬ್ರೋಕರೇಜ್ ಸಂಸ್ಥೆಗಳ ಪ್ರಕಾರ ಟೆಲಿಕಾಂ ದರಗಳು ಶೇ. 20ರಷ್ಟು ಹೆಚ್ಚಾಗಬಹುದು. 2-3 ವರ್ಷದ ಬಳಿಕ ನಡೆಯಲಿರುವ ಬೆಲೆ ಏರಿಕೆಯಿಂದ ಟೆಲಿಕಾಂ ಕಂಪನಿಗಳ ಆರೋಗ್ಯಕ್ಕೆ ಅನುಕೂಲವಾಗಲಿದೆ.

ಮುಂದಿನ ಕೆಲ ತಿಂಗಳಲ್ಲಿ ಏರಲಿದೆ ಮೊಬೈಲ್ ಬಿಲ್; ಎಲೆಕ್ಷನ್ ಮುಗಿಯಲಿ ಎಂದು ಕಾಯುತ್ತಿವೆ ಟೆಲಿಕಾಂ ಕಂಪನಿಗಳು
ಟೆಲಿಕಾಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 10, 2024 | 4:08 PM

Share

ನವದೆಹಲಿ, ಜನವರಿ 10: ಮೇ ಅಥವಾ ನಂತರ ಭಾರತದ ಟೆಲಿಕಾಂ ಕಂಪನಿಗಳು ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಏಜೆನ್ಸಿಯೊಂದು ವರದಿ ಮಾಡಿದೆ. ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯೂರಿಟೀಸ್ (Bank of America Securities) ಪ್ರಕಾರ ಲೋಕಸಭಾ ಚುನಾವಣೆ ಮುಗಿದ ಬಳಿಕ ಟೆಲಿಕಾಂ ಕಂಪನಿಗಳು ವಿವಿಧ ಸೇವೆಗಳ ದರವನ್ನು ಶೇ. 20ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಇದು ನಿಜವೇ ಆದಲ್ಲಿ ಎರಡು ವರ್ಷದ ಬಳಿಕ ಭಾರತೀಯ ಟೆಲಿಕಾಂ ಕಂಪನಿಗಳಿಂದ ದೊಡ್ಡ ಹೆಚ್ಚಳ ಆಗುತ್ತದೆ.

‘ಎರಡು ವರ್ಷದ ಬಳಿಕ ಶೇ. 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಹೆಚ್ಚಳ ಕಾಣಲಿದ್ದೇವೆ. ಸಾರ್ವತ್ರಿಕ ಚುನಾವಣೆಗಳ ಬಳಿಕ ಇದು ನಡೆಯಬಹುದು. ಟೆಲಿಕಾಂ ಉದ್ಯಮದ ಆರೋಗ್ಯಕ್ಕೆ ಈ ಬೆಲೆ ಹೆಚ್ಚಳ ಬಹಳ ಅವಶ್ಯ ಇದೆ. ಅದರಲ್ಲೂ ವೊಡಾಫೋನ್ ಐಡಿಯಾಗೆ ಇದು ಬೇಕಾಗಿದೆ,’ ಎಂದು ಬ್ರೋಕರೇಜ್ ಸಂಸ್ಥೆಯಾದ ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯೂರಿಟೀಸ್​ನ ಅನಾಲಿಸ್ಟ್​ವೊಬ್ಬರು ಹೇಳಿದ್ದಾಗಿ ದಿ ಮಿಂಟ್ ಪತ್ರಿಕೆ ವರದಿ ಮಾಡಿದೆ.

2021ರ ಡಿಸೆಂಬರ್ ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ಗಣನೀಯವಾಗಿ ದರಗಳನ್ನು ಹೆಚ್ಚಿಸಿದ್ದವು. ಅಲ್ಲಿಂದೀಚೆಗೆ ಡಾಟಾ ದರಗಳಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ.

ಇದನ್ನೂ ಓದಿ: ಮತ್ತೆ ಫ್ಲೈಟ್ ಬುಕಿಂಗ್ ಆರಂಭಿಸಿ: ಭಾರತದ ಈಸ್ ಮೈ ಟ್ರಿಪ್ ಸಂಸ್ಥೆಗೆ ಮಾಲ್ಡೀವ್ಸ್ ಪ್ರವಾಸೋದ್ಯಮ ಮನವಿ

ಇದೇ ವೇಳೆ, ಟೆಲಿಕಾಂ ಸೇವೆಗಳ ದರ ಹೆಚ್ಚಳದಿಂದ ಭಾರ್ತಿ ಏರ್ಟೆಲ್ ಸಂಸ್ಥೆಗೆ ಹೆಚ್ಚು ಅನುಕೂಲವಾಗಬಹುದು. ಏರ್ಟೆಲ್​ನಲ್ಲಿ ಹೈ ಎಂಡ್ ಯೂಸರ್​ಗಳ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಬೆಲೆ ಏರಿಕೆಯ ಲಾಭ ಹೆಚ್ಚು ಆಗಬಹುದು ಎಂದು ಅಭಿಪ್ರಾಯಪಟ್ಟಿರುವ ಬ್ರೋಕರೇಜ್ ಸಂಸ್ಥೆ, ಇದೇ ಕಾರಣಕ್ಕೆ ಏರ್​ಟೆಲ್​ಗೆ ತಾನು ಅಂಡರ್​ಪರ್ಫಾರ್ಮಿಂಗ್ ಎಂದು ನೀಡಿದ್ದ ರೇಟಿಂಗ್ ಅನ್ನು ನ್ಯೂಟ್ರಲ್​ಗೆ ಬದಲಾಯಿಸಿದೆ.

2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಭಾರತದ ಟೆಲಿಕಾಂ ಕಂಪನಿಗಳು ಹೆಚ್ಚು ಆದಾಯ ಪಡೆದಿರುವ ಸಾಧ್ಯತೆ ಇದೆ. ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯವನ್ನು (ಎಆರ್​ಪಿಯು) ಎಲ್ಲಾ ಟೆಲಿಕಾಂ ಕಂಪನಿಗಳು ಕಾಣಲಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್, ಮೇ ತಿಂಗಳ ನಂತರ ಶೇ. 20ರಷ್ಟು ದರ ಹೆಚ್ಚಾದರೆ ಟೆಲಿಕಾಂ ಕಂಪನಿಗಳ ಆರೋಗ್ಯ ಗಣನೀಯವಾಗಿ ಸುಧಾರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: World Leaders: ಮೊರಾಕ್ಕೋ, ಟಿಮಾರ್ ಲೆಸ್ಟೇ ಸೇರಿದಂತೆ ವಿವಿಧ ದೇಶಗಳ ನಾಯಕರು ಗುಜರಾತ್​ನಲ್ಲಿ ನಿಂತು ಭಾರತದ ಬಗ್ಗೆ ಹೇಳಿದ್ದಿದು…

ಕುತೂಹಲದ ಸಂಗತಿ ಎಂದರೆ ಭಾರತದಲ್ಲಿರುವ ಟೆಲಿಕಾಂ ದರಗಳು ಜಾಗತಿಕ ಸರಾಸರಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಬಳಿಕ ದರಗಳು ಬಹಳಷ್ಟು ಇಳಿಕೆಯಾಗಿದ್ದವು. ಈಗ ಒಮ್ಮತದಿಂದ ಎಲ್ಲಾ ಕಂಪನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Wed, 10 January 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ