AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NordPass: ಇದು ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್; ಸುರಕ್ಷತೆಯ ಬಗ್ಗೆ ಜನರಿಗೆ ಕಾಳಜಿಯಿಲ್ಲವೇ?

ಭಾರತದಲ್ಲಿ ಈಗಲೂ 123456 ಅತ್ಯಂತ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಆಗಿದೆ ಎಂದು NordPass ವರದಿ ತಿಳಿಸಿದೆ. ಸುಲಭವಾಗಿ ಊಹಿಸಬಹುದಾದ ಸಂಖ್ಯೆಗಳು ಮತ್ತು ಸಾಮಾನ್ಯ ಪದಗಳನ್ನೇ ಜನರು ಪಾಸ್‌ವರ್ಡ್‌ಗಳಾಗಿ ಬಳಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿಯೂ ಇದೇ ಪಾಸ್‌ವರ್ಡ್ ಮೊದಲ ಸ್ಥಾನದಲ್ಲಿದೆ. ಹಾಗಾದರೆ ಭಾರತದಲ್ಲಿ ಹೆಚ್ಚು ಬಳಕೆಯಾಗುವ ಟಾಪ್ 20 ಪಾಸ್‌ವರ್ಡ್‌ಗಳು ಯಾವುವು?

NordPass: ಇದು ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್; ಸುರಕ್ಷತೆಯ ಬಗ್ಗೆ ಜನರಿಗೆ ಕಾಳಜಿಯಿಲ್ಲವೇ?
Password
ಮಾಲಾಶ್ರೀ ಅಂಚನ್​
| Edited By: |

Updated on: Nov 18, 2026 | 7:52 PM

Share

ಮುಖ್ಯಾಂಶಗಳು

  • ನಿಮ್ಮ ಪಾಸ್‌ವರ್ಡ್ ಕೂಡ 123456 ಆಗಿದೆಯೇ?
  • ಭಾರತದಲ್ಲಿ ಈಗಲೂ 123456 ಅತ್ಯಂತ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್
  • ಜಗತ್ತಿನಲ್ಲೇ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್‌ಗಳ ಪಟ್ಟಿ ಇಲ್ಲಿದೆ!

ಪಾಸ್‌ವರ್ಡ್ ನಿರ್ವಹಣಾ ಕಂಪನಿ ನಾರ್ಡ್‌ಪಾಸ್ (NordPass) ನಡೆಸಿದ ಹೊಸ ಅಧ್ಯಯನದ ಪ್ರಕಾರ, ಭಾರತದಲ್ಲಿ ಜನರು ಈಗಲೂ 123456 ನಂತಹ ಸುಲಭವಾದ ಸಂಖ್ಯೆಗಳ ಸಂಯೋಜನೆಯನ್ನೇ ಅತಿ ಹೆಚ್ಚು ಪಾಸ್‌ವರ್ಡ್ ಆಗಿ ಬಳಸುತ್ತಿದ್ದಾರೆ. ವಿವಿಧ ತಲೆಮಾರುಗಳ ಜನರು ತಮಗೆ ಇಷ್ಟವಾದ ಸಂಗೀತ, ಸಿನಿಮಾಗಳು, ವಿಡಿಯೊ ಗೇಮ್‌ಗಳು ಮತ್ತು ಇಂಟರ್‌ನೆಟ್ ಟ್ರೆಂಡ್‌ಗಳನ್ನು ಆಧರಿಸಿ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಪಾಸ್‌ವರ್ಡ್‌ಗಳನ್ನು ರಚಿಸಿಕೊಳ್ಳುತ್ತಾರೆ ಎಂಬುದೂ ಅಧ್ಯಯನದಲ್ಲಿ ಬಹಿರಂಗವಾಗಿದೆ.

ಮೆಟಾಲಿಕಾ ಅಂತಹ ಹಳೆಯ ಜನಪ್ರಿಯ ಸಂಗೀತ ಗುಂಪಿನಿಂದ ಹಿಡಿದು ಸ್ಕಿಬಿಡಿ ಟಾಯ್ಲೆಟ್‌ನಂತಹ ಹೊಸ ಇಂಟರ್‌ನೆಟ್ ಟ್ರೆಂಡ್‌ಗಳವರೆಗೆ, ಜನರ ಆಸಕ್ತಿಗಳು ಮತ್ತು ಜನಪ್ರಿಯ ಸಂಸ್ಕೃತಿಯು ಪಾಸ್‌ವರ್ಡ್ ಆಯ್ಕೆಯ ಮೇಲೂ ಪ್ರಭಾವ ಬೀರುತ್ತಿವೆ ಎಂಬುದನ್ನು ಈ ಫಲಿತಾಂಶಗಳು ತೋರಿಸಿವೆ. ಇದರಿಂದ ಇಂತಹ ಪಾಸ್‌ವರ್ಡ್‌ಗಳನ್ನು ಊಹಿಸುವುದು ಇನ್ನಷ್ಟು ಸುಲಭವಾಗುತ್ತದೆ.

ಭಾರತ ಸೇರಿದಂತೆ 45 ದೇಶಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್‌ಗಳನ್ನು ಈ ಅಧ್ಯಯನ ವಿಶ್ಲೇಷಿಸಿದೆ. ಜನರು ಯಾವ ರೀತಿಯ ಪಾಸ್‌ವರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ವಿವಿಧ ಖಾತೆಗಳಲ್ಲಿ ಮತ್ತೆ ಮತ್ತೆ ಬಳಸುತ್ತಾರೆಯೇ ಎಂಬುದನ್ನು ತಿಳಿಯುವುದು ಇದರ ಉದ್ದೇಶವಾಗಿದೆ.

ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಯಾವುದು?

ನಾರ್ಡ್‌ಪಾಸ್ ಸಂಸ್ಥೆಯು ನಾರ್ಡ್‌ಲೇಯರ್ ಇಂಟೆಲಿಜೆನ್ಸ್ ಮತ್ತು ಸೈಬರ್ ಭದ್ರತಾ ತಜ್ಞರ ಸಹಯೋಗದಲ್ಲಿ ಈ ಅಧ್ಯಯನ ನಡೆಸಿದೆ. 2025ರ ಸೆಪ್ಟೆಂಬರ್‌ನಿಂದ 2026ರ ಸೆಪ್ಟೆಂಬರ್‌ವರೆಗೆ ನಡೆದ ಡೇಟಾ ಸೋರಿಕೆಗಳು ಮತ್ತು ಡಾರ್ಕ್ ವೆಬ್‌ನಲ್ಲಿ ಬಹಿರಂಗವಾದ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲಾಗಿದೆ.

ಅಧ್ಯಯನದ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಈಗಲೂ 123456 ಆಗಿದೆ. ನಂತರದ ಸ್ಥಾನಗಳಲ್ಲಿ 12345678 ಮತ್ತು admin ಇವೆ. ದೇಶದ ಅತಿ ಹೆಚ್ಚು ಬಳಕೆಯಾಗುವ 20 ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ ಸರಳ ಸಂಖ್ಯೆಗಳು ಮತ್ತು ದೈನಂದಿನ ಬಳಕೆಯ ಸಾಮಾನ್ಯ ಪದಗಳಿಂದ ರಚಿಸಲಾದ ಪಾಸ್‌ವರ್ಡ್‌ಗಳೇ ಹೆಚ್ಚಿವೆ.

ವರ್ಷದಿಂದ ಬಿಟ್ಟಿ ಸಂಬಳ; ಕೆಲಸ ಹೇಳೋರಿಲ್ಲ; ಹೆಚ್​ಆರ್​ಗೆ ಹೋದ್ರೆ ಕೆಲಸ ಹೋಗುತ್ತೆ, ಏನು ಮಾಡ್ಲಿ? ಉದ್ಯೋಗಿಯೊಬ್ಬನ ಸಂದಿಗ್ಧತೆ

ಈ ಪಟ್ಟಿಯಲ್ಲಿ 1234, 12345, 123456789, password ಮತ್ತು 1234567890 ಕೂಡ ಸೇರಿವೆ. ಇದರ ಜತೆಗೆ Admin@123, Welcome@123, admin@123 ಮತ್ತು India@123 ನಂತಹ ಪಾಸ್‌ವರ್ಡ್‌ಗಳನ್ನೂ ಜನರು ಬಳಸುತ್ತಿದ್ದಾರೆ.

ಜಗತ್ತಿನಲ್ಲೂ 123456 ಪಾಸ್‌ವರ್ಡ್‌ಗೆ ಮೊದಲ ಸ್ಥಾನ

ಒಂದೇ ಪದದ ಜತೆಗೆ ಕೆಲವು ಸಂಖ್ಯೆಗಳು ಅಥವಾ ವಿಶೇಷ ಚಿಹ್ನೆಗಳನ್ನು ಸೇರಿಸಿದರೆ ಪಾಸ್‌ವರ್ಡ್‌ ಊಹಿಸುವುದು ಕಷ್ಟವಾಗುತ್ತದೆ ಎಂಬುದು ಸುಳ್ಳು ಎನ್ನುವುದನ್ನು ಈ ಪಾಸ್‌ವರ್ಡ್‌ಗಳ ಮರುಬಳಕೆ ತೋರಿಸುತ್ತದೆ.

ಜಾಗತಿಕ ಮಟ್ಟದಲ್ಲಿಯೂ 123456 ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಆಗಿ ಮೊದಲ ಸ್ಥಾನದಲ್ಲಿದೆ. Admin ಎರಡನೇ ಸ್ಥಾನದಲ್ಲಿದ್ದರೆ, 12345678 ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷದ ಪಟ್ಟಿಗೆ ಹೋಲಿಸಿದರೆ ಅಗ್ರ ನಾಲ್ಕು ಪಾಸ್‌ವರ್ಡ್‌ಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ನಾರ್ಡ್‌ಪಾಸ್ ತಿಳಿಸಿದೆ.

ಪಾಸ್‌ವರ್ಡ್‌ಗಳಲ್ಲಿ ವಿಶೇಷ ಚಿಹ್ನೆಗಳ ಬಳಕೆಯೂ ಹೆಚ್ಚಳ

ಪಾಸ್‌ವರ್ಡ್‌ಗಳಲ್ಲಿ ವಿಶೇಷ ಚಿಹ್ನೆಗಳ ಬಳಕೆ ಹೆಚ್ಚಾಗಿರುವುದನ್ನೂ ಅಧ್ಯಯನ ಗುರುತಿಸಿದೆ. ಈ ವರ್ಷದ ಜಾಗತಿಕ ಪಟ್ಟಿಯಲ್ಲಿ 39 ಪಾಸ್‌ವರ್ಡ್‌ಗಳು ವಿಶೇಷ ಚಿಹ್ನೆಗಳನ್ನು ಒಳಗೊಂಡಿವೆ. ಕಳೆದ ವರ್ಷ ಇಂತಹ ಪಾಸ್‌ವರ್ಡ್‌ಗಳ ಸಂಖ್ಯೆ 32 ಇತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು