
ನವದೆಹಲಿ, ಸೆಪ್ಟೆಂಬರ್ 16: ಎನ್ಡಿಡಿಬಿ (ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್) ಅಂಗಸಂಸ್ಥೆ ಹಾಗೂ ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿಯ (Mother Dairy) ಹಾಲು ಹಾಗೂ ವಿವಿಧ ಉತ್ಪನ್ನಗಳ ಬೆಲೆಯನ್ನು ಇಳಿಸಲಾಗಿದೆ. ಜಿಎಸ್ಟಿ (GST) ಕಡಿತದ ಹಿನ್ನೆಲೆಯಲ್ಲಿ ಸಂಸ್ಥೆಯು ಬೆಲೆಗಳನ್ನು 2ರಿಂದ 30 ರೂಗಳವರೆಗೆ ಕಡಿಮೆ ಮಾಡಿದೆ. ವರದಿ ಪ್ರಕಾರ, ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಇತ್ಯಾದಿ ಉತ್ಪನ್ನಗಳ ಬೆಲೆಯನ್ನು ಮದರ್ ಡೈರಿ ಕಡಿಮೆಗೊಳಿಸಿದೆ.
ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ನಡುವೆಯೂ ಭಾರತದ ರಫ್ತು ಹೆಚ್ಚಳ; ಟ್ರೇಡ್ ಡೆಫಿಸಿಟ್ ಕೂಡ ಇಳಿಕೆ
ಮದರ್ ಡೈರಿ ಭಾರತದ ಅತಿದೊಡ್ಡ ಡೈರಿ ಕಂಪನಿಗಳಲ್ಲಿ ಒಂದು. ಅಮೂಲ್ ಬಳಿಕ ಮದರ್ ಡೈರಿ ಅತಿದೊಡ್ಡ ಡೈರಿ ಕಂಪನಿ. 2024-25ರ ಹಣಕಾಸು ವರ್ಷದಲ್ಲಿ ಮದರ್ ಡೈರಿ 17,500 ಕೋಟಿ ರೂ ಬ್ಯುಸಿನೆಸ್ ಮಾಡಿತ್ತು. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅದರ ಉತ್ಪನ್ನಗಳು ಲಭ್ಯ ಇವೆ.
ಜಿಎಸ್ಟಿ ಕೌನ್ಸಿಲ್ನ 56ನೇ ಸಭೆಯಲ್ಲಿ ಡೈರಿ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಯಿತು.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ 25 ವರ್ಷಕ್ಕೆ 1 ಕೋಟಿ ರೂ ಗಳಿಕೆಗೆ ಅವಕಾಶ
ಜಿಎಸ್ಟಿ ಕೌನ್ಸಿಲ್ ತೆಗೆದುಕೊಂಡ ನಿರ್ಧಾರದ ಬಳಿಕ ನೂತನ ಜಿಎಸ್ಟಿ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತವೆ. ಆದರೆ, ಡೈರಿ ಉತ್ಪನ್ನಗಳ ಮೇಲಿನ ನೂತನ ಜಿಎಸ್ಟಿ ದರಗಳು ತತ್ಕ್ಷಣದಿಂದಲೇ ಜಾರಿಗೆ ಬಂದಿವೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ