ಸೃಜನಶೀಲ ಮನಸ್ಸಿದ್ದರೆ ಸಾಕು..! ಕೇರಳದ ರಾಮಚಂದ್ರನ್ 17,000 ಕೋಟಿ ರೂ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ಕಥೆ
How Ramachandran built Jyothi Labs: ಜ್ಯೋತಿ ಲ್ಯಾಬೊರೇಟರೀಸ್ ಸಂಸ್ಥಾಪಕ ರಾಮಚಂದ್ರನ್ ಅವರು ಛಲಬಿಡದೆ ಯಶಸ್ವಿ ಉದ್ಯಮ ಕಟ್ಟಿದ ಕಥೆ ಸ್ಫೂರ್ತಿದಾಯಕ ಎನಿಸಿದೆ. ಕೇರಳದ ರಾಮಚಂದ್ರನ್ ಅಕೌಂಟೆಂಟ್ ಆಗಿದ್ದರೂ ಸ್ವಂತ ಉದ್ಯಮದ ಕನಸು ಹೊಂದಿದವರು. ಹಲವು ಉತ್ಪನ್ನಗಳನ್ನು ಹೊರತರುವ ಜ್ಯೋತಿ ಲ್ಯಾಬ್ನ ಮಾರುಕಟ್ಟೆ ಬಂಡವಾಳ 17,000 ಕೋಟಿ ರೂ ಇದೆ.

ಉದ್ಯಮಿಗಳಾಗಬೇಕು, ಸಾವಿರಾರು ಜನರಿಗೆ ಕೆಲಸ ಕೊಡಬೇಕು, ಸಾವಿರಾರು ಕೋಟಿ ರೂ ವ್ಯವಹಾರ ನಡೆಸಬೇಕು ಎಂಬ ಕನಸು ಬಹಳ ಜನರಲ್ಲಿ ಇರುತ್ತದೆ. ಆದರೆ, ಏನು ಮಾಡಬೇಕು ಎಂಬುದರಲ್ಲೇ ಕಾಲಹರಣವಾಗಿ ಹೋಗಿರುತ್ತದೆ. ಆದರೆ, ಕೆಲವರು ತಾವು ಅಂದುಕೊಂಡಿದ್ದನ್ನು ಸಾಧಿಸದೇ ಬಿಡಲ್ಲ. ಅಂಥ ಸಾಧಕರಲ್ಲಿ ರಾಮಚಂದ್ರನ್ ಒಬ್ಬರು. ಕೇರಳದ ಈ ವ್ಯಕ್ತಿ ಜ್ಯೋತಿ ಲ್ಯಾಬೊರೇಟರೀಸ್ ಸಂಸ್ಥೆಯ (Jyothy Labs) ಸಂಸ್ಥಾಪಕರು. 17,000 ಕೋಟಿ ರೂ ಮೌಲ್ಯದ ಈ ಸಂಸ್ಥೆಯನ್ನು ಅವರು ಕಟ್ಟಿದ ಕಥೆ ನಿಜಕ್ಕೂ ಪ್ರೇರಣೆ ನೀಡುವಂಥದ್ದು.
ಕೇರಳದ ತ್ರಿಶ್ಶೂರ್ ಜಿಲ್ಲೆಯವರಾದ ರಾಮಚಂದ್ರನ್ ಶಾಲಾ ದಿನಗಳಿಂದಲೇ ಸೃಜನಶೀಲ ಮನಸ್ಸನ್ನು ಹೊಂದವರು. ಏನಾದರೂ ಹೊಸ ಪ್ರಯೋಗಗಳನ್ನು ಮಾಡುವ ಸ್ವಭಾವದವರು. ಸ್ನಾತಕೋತ್ತರ ಪದವಿ ಗಳಿಸಿ ಅಕೌಂಟೆಂಟ್ ಕೆಲಸಕ್ಕೆ ಸೇರಿ ಉತ್ತಮ ಸಂಬಳ ಪಡೆಯುತ್ತಿದ್ದರೂ ಹೊಸ ಪ್ರಯೋಗ ನಿಲ್ಲಿಸಲಿಲ್ಲ.
ತಮ್ಮದೇ ಸ್ವಂತವಾದ ಉದ್ಯಮ ಆರಂಭಿಸಬೇಕೆಂಬ ತಮ್ಮ ಕನಸ್ಸನ್ನು ಸಾಕಾರಗೊಳಿಸಲು ಪ್ರಯತ್ನ ಮುಂದುವರಿಸಿದ್ದರು. ಬಟ್ಟೆಯ ಹೊಳಪನ್ನು ಹೆಚ್ಚಿಸುವಂತಹ ವೈಟ್ನರ್ ಅನ್ನು ಸ್ವಂತವಾಗಿ ಅಭಿವೃದ್ಧಿಪಡಿಸುವುದು ಅವರ ಕನಸ್ಸಾಗಿತ್ತು.
ಇದನ್ನೂ ಓದಿ: ಜಿಎಸ್ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ
ತಮ್ಮ ಅಡುಗೆ ಮನೆಯಲ್ಲೇ ಹೊಸ ಲಾಂಡ್ರಿ ವೈಟ್ನರ್ ಪ್ರಯೋಗಕ್ಕೆ ಮುಂದಾದರು. ಹಲವು ಪ್ರಯತ್ನಗಳಾದರೂ ಸರಿಯಾದ ವೈಟ್ನರ್ ತಯಾರಿಸಲು ಆಗಲಿಲ್ಲ. ಮ್ಯಾಗಝಿನ್ವೊಂದರಲ್ಲಿ ಈ ಬಗ್ಗೆ ಬಂದಿದ್ದ ಲೇಖನ ಓದಿ ವೈಟ್ನರ್ ತಯಾರಿಕೆ ಬಗ್ಗೆ ಒಂದಷ್ಟು ಮಹತ್ವದ ಜ್ಞಾನ ಸಿಕ್ಕಿತು. ಅದನ್ನು ಬಳಸಿ ಮತ್ತೆ ವೈಟ್ನರ್ ತಯಾರಿಕೆಗೆ ನಿಂತರು. ಒಂದಿಡೀ ವರ್ಷ ಸತತವಾಗಿ ನಡೆಸಿದ ಪ್ರಯತ್ನ ಫಲಪ್ರದವಾಯಿತು. ಬಟ್ಟೆಯ ಹೊಳಪನ್ನು ಅದ್ಭುತವಾಗಿ ಹೆಚ್ಚಿಸಬಲ್ಲ ವೈಟ್ನರ್ ಫಾರ್ಮುಲಾ ಕಂಡು ಹಿಡಿದರು.
ಇದು ಉಜಾಲ ಹೊಳಪು
ತಮ್ಮದೇ ಲಾಂಡ್ರಿ ವೈಟ್ನರ್ ಕಂಡು ಹಿಡಿದ ರಾಮಚಂದ್ರನ್ 1983ರಲ್ಲಿ ಸಣ್ಣ ಲ್ಯಾಬ್ ಸ್ಥಾಪಿಸಿದರು. ಆಗ 5,000 ರೂ ಸಾಲ ಪಡೆದುಕೊಂಡಿದ್ದರು. ತಮ್ಮ ಮಗಳಾದ ಜ್ಯೋತಿ ಹೆಸರಿನಲ್ಲಿ ಲ್ಯಾಬ್ ಸ್ಥಾಪಿಸಿದರು. ಅದೇ ಜ್ಯೋತಿ ಲ್ಯಾಬೊರೇಟರೀಸ್.
ಇದನ್ನೂ ಓದಿ: ಇಥನಾಲ್ ತಯಾರಿಕೆಗೆ ನಮ್ಮ ಜೋಳ ಬಳಸಿ: ಭಾರತಕ್ಕೆ ಬೇಡಿಕೆ ಇಟ್ಟ ಅಮೆರಿಕ
ಇವರು ತಯಾರಿಸಿದ ಉಜಾಲ ಲಿಕ್ವಿಡ್ ಸೂಪರ್ ಹಿಟ್ ಎನಿಸಿತು. ನಿರ್ಮಾ ರೀತಿ ಮನೆ ಮನೆಯಲ್ಲೂ ಉಜಾಲ ವೈಟ್ನರ್ ಜನಪ್ರಿಯವಾಯಿತು. ಜನಬಳಕೆ ಹೆಚ್ಚಿತ್ತು. ಮೊದಲಿಗೆ ದಕ್ಷಿಣ ಭಾರತ, ನಂತರ ಉತ್ತರ ಭಾರತ, ಹೀಗೆ ದೇಶಾದ್ಯಂತ ಜ್ಯೋತಿ ಲ್ಯಾಬೊರೇಟರೀಸ್ನ ಉತ್ಪನ್ನಗಳು ಮಾರಾಟ ಆಗುತ್ತಿವೆ. ಇವತ್ತು ಈ ಕಂಪನಿಯ ಮಾರುಕಟ್ಟೆ ಬಂಡವಾಳ 17,000 ಕೋಟಿ ರೂ ಇದೆ.
ಹೆಂಕೋ, ಮಿಸ್ಟರ್ ವೈಟ್, ಮೋರ್ ಲೈಟ್, ಇಕ್ಸೋ, ಪ್ರಿಲ್, ಮಾರ್ಗೋ, ನೀಮ್, ಫಾ, ಮ್ಯಾಕ್ಸೋ, ಟಿ ಶೈನ್, ಮಾಯಾ ಅಗರ್ಬತ್ತಿ ಹೀಗೆ ಹಲವು ಉತ್ಪನ್ನಗಳು ಜ್ಯೋತಿ ಲ್ಯಾಬೊರೇಟರೀಸ್ನಿಂದ ಹೊರಬಂದು ಹಿಟ್ ಎನಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




