AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ

Mother Dairy cuts prices of various dairy products: ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿ ತನ್ನ ವಿವಿಧ ಉತ್ಪನ್ನಗಳ ಬೆಲೆ ಕಡಿಮೆ ಮಾಡಿದೆ. ಸರ್ಕಾರವು ಡೈರಿ ಉತ್ಪನ್ನಗಳ ಮೇಲೆ ಜಿಎಸ್​ಟಿ ಇಳಿಸಿದ ಕಾರಣ ಮದರ್ ಡೈರಿ ಈ ಬೆಲೆ ಇಳಿಕೆ ನಿರ್ಧಾರ ಕೈಗೊಂಡಿದೆ. ಹಾಲುಗಳ ಬೆಲೆ 1-2 ರೂ ಇಳಿಕೆಯಾಗಿದೆ. ತುಪ್ಪದ ಬೆಲೆ ಬರೋಬ್ಬರಿ 30 ರೂವರೆಗೂ ತಗ್ಗಿದೆ.

ಜಿಎಸ್​ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ
ಮದರ್ ಡೈರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 16, 2025 | 3:08 PM

Share

ನವದೆಹಲಿ, ಸೆಪ್ಟೆಂಬರ್ 16: ಎನ್​ಡಿಡಿಬಿ (ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್) ಅಂಗಸಂಸ್ಥೆ ಹಾಗೂ ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿಯ (Mother Dairy) ಹಾಲು ಹಾಗೂ ವಿವಿಧ ಉತ್ಪನ್ನಗಳ ಬೆಲೆಯನ್ನು ಇಳಿಸಲಾಗಿದೆ. ಜಿಎಸ್​ಟಿ (GST) ಕಡಿತದ ಹಿನ್ನೆಲೆಯಲ್ಲಿ ಸಂಸ್ಥೆಯು ಬೆಲೆಗಳನ್ನು 2ರಿಂದ 30 ರೂಗಳವರೆಗೆ ಕಡಿಮೆ ಮಾಡಿದೆ. ವರದಿ ಪ್ರಕಾರ, ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಇತ್ಯಾದಿ ಉತ್ಪನ್ನಗಳ ಬೆಲೆಯನ್ನು ಮದರ್ ಡೈರಿ ಕಡಿಮೆಗೊಳಿಸಿದೆ.

ಮದರ್ ಡೈರಿಯ ವಿವಿಧ ಉತ್ಪನ್ನಗಳ ಬೆಲೆ ವಿವರ

  • ಒಂದು ಲೀಟರ್ ಯುಎಚ್​ಟಿ ಹಾಲು (ಟೆಟ್ರಾ ಪ್ಯಾಕ್): 77 ರೂನಿಂದ 75 ರೂಗೆ ಇಳಿಕೆ
  • 450 ಎಂಎಲ್ ಯುಎಚ್​ಟಿ ಡಬಲ್ ಟೋನ್ಡ್ ಹಾಲು: 33 ರೂನಿಂದ 32 ರೂಗೆ ಇಳಿಕೆ
  • ಪನೀರ್ 200 ಗ್ರಾಮ್ ಪ್ಯಾಕ್ ಬೆಲೆ 95 ರೂನಿಂದ 92 ರೂಗೆ ಇಳಿಕೆ
  • ಪನೀರ್ 400 ಗ್ರಾಮ್ ಪ್ಯಾಕ್: 180 ರೂನಿಂದ 174 ರೂಗೆ ಇಳಿಕೆ
  • ಮಲೈ ಪನೀರ್ 200 ಗ್ರಾಮ್ ಪ್ಯಾಕ್: 100 ರೂನಿಂದ 97 ರೂಗೆ ಇಳಿಕೆ
  • ಬೆಣ್ಣೆ 500 ಗ್ರಾಮ್ ಪ್ಯಾಕ್: 305 ರೂನಿಂದ 285 ರೂಗೆ ಇಳಿಕೆ
  • ಬೆಣ್ಣೆ 100 ಗ್ರಾಮ್ ಪ್ಯಾಕ್: 62 ರೂನಿಂದ 58 ರೂಗೆ ಇಳಿಕೆ
  • ಮಿಲ್ಕ್​ಶೇಕ್ 180 ಎಂಎಲ್ ಪ್ಯಾಕ್: 30 ರೂನಿಂದ 28 ರೂಗೆ ಇಳಿಕೆ
  • ತುಪ್ಪ 1 ಲೀಟರ್ ಕಾರ್ಟನ್ ಪ್ಯಾಕ್: 675 ರೂನಿಂದ 645 ರೂಗೆ ಇಳಿಕೆ
  • ತುಪ್ಪ 1 ಲೀಟರ್ ಟಿನ್ ಪ್ಯಾಕ್: 750 ರೂನಿಂದ 720 ರೂಗೆ ಇಳಿಕೆ
  • ತುಪ್ಪ 1 ಲೀಟರ್ ಪೌಚ್: 675 ರೂನಿಂದ 645 ರೂಗೆ ಇಳಿಕೆ
  • ಹಸುವಿನ ತುಪ್ಪ 500 ಎಂಎಲ್ ಬಾಟಲ್: 380 ರೂನಿಂದ 365 ರೂಗೆ ಇಳಿಕೆ
  • ಗಿರ್ ಹಸುವಿನ ತುಪ್ಪ, 500 ಎಂಎಲ್ ಪ್ಯಾಕ್: 999 ರೂನಿಂದ 984 ರೂಗೆ ಇಳಿಕೆ

ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ನಡುವೆಯೂ ಭಾರತದ ರಫ್ತು ಹೆಚ್ಚಳ; ಟ್ರೇಡ್ ಡೆಫಿಸಿಟ್ ಕೂಡ ಇಳಿಕೆ

ಯಾವುದಿದು ಮದರ್ ಡೈರಿ?

ಮದರ್ ಡೈರಿ ಭಾರತದ ಅತಿದೊಡ್ಡ ಡೈರಿ ಕಂಪನಿಗಳಲ್ಲಿ ಒಂದು. ಅಮೂಲ್ ಬಳಿಕ ಮದರ್ ಡೈರಿ ಅತಿದೊಡ್ಡ ಡೈರಿ ಕಂಪನಿ. 2024-25ರ ಹಣಕಾಸು ವರ್ಷದಲ್ಲಿ ಮದರ್ ಡೈರಿ 17,500 ಕೋಟಿ ರೂ ಬ್ಯುಸಿನೆಸ್ ಮಾಡಿತ್ತು. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅದರ ಉತ್ಪನ್ನಗಳು ಲಭ್ಯ ಇವೆ.

ಡೈರಿ ಉತ್ಪನ್ನಗಳ ಮೇಲೆ ಎಷ್ಟಿದೆ ಜಿಎಸ್​ಟಿ?

ಜಿಎಸ್​ಟಿ ಕೌನ್ಸಿಲ್​ನ 56ನೇ ಸಭೆಯಲ್ಲಿ ಡೈರಿ ಉತ್ಪನ್ನಗಳ ಮೇಲಿನ ಜಿಎಸ್​ಟಿಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಯಿತು.

  • ಟೆಟ್ರಾ ಪ್ಯಾಕ್ ಹಾಲು: ಶೇ. 5ರಿಂದ ಸೊನ್ನೆಗೆ ಜಿಎಸ್​ಟಿ ಇಳಿಕೆ
  • ತುಪ್ಪ, ಮೊಸರು, ಚೀಜ್: ಶೇ. 12ರಿಂದ ಶೇ 5ಕ್ಕೆ ಇಳಿಕೆ
  • ಪ್ಯಾಕ್ ಆದ ಪನೀರ್: ಶೇ. 5ರಿಂದ ಸೊನ್ನೆಗೆ ಇಳಿಕೆ

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ 25 ವರ್ಷಕ್ಕೆ 1 ಕೋಟಿ ರೂ ಗಳಿಕೆಗೆ ಅವಕಾಶ

ಜಿಎಸ್​ಟಿ ಕೌನ್ಸಿಲ್ ತೆಗೆದುಕೊಂಡ ನಿರ್ಧಾರದ ಬಳಿಕ ನೂತನ ಜಿಎಸ್​ಟಿ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತವೆ. ಆದರೆ, ಡೈರಿ ಉತ್ಪನ್ನಗಳ ಮೇಲಿನ ನೂತನ ಜಿಎಸ್​ಟಿ ದರಗಳು ತತ್​ಕ್ಷಣದಿಂದಲೇ ಜಾರಿಗೆ ಬಂದಿವೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!