Moto E13: ಇಂದು ಮೋಟೋರೊಲಾದಿಂದ ಮೋಟೋ E13 ಬಿಡುಗಡೆ: ಇದರ ಬೆಲೆ 7,000 ರೂ. ಗಿಂತ ಕಡಿಮೆ

ಮೋಟೋ E13 ಸ್ಮಾರ್ಟ್‌ಫೋನ್​ನ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದರ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಬೆಲೆ 7,000 ರೂ. ಒಳಗಡೆ ಇರಲಿದೆ ಎನ್ನಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಕಾಣಲಿದ್ದು ಟೀಸರ್ ಬಿಡುಗಡೆ ಮಾಡಿದೆ. ಈ ಫೋನಿನ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ಮಾತ್ರ ಇರುವುದು ಟೀಸರ್​ನಿಂದ ತಿಳಿದುಬಂದಿದೆ. ಮುಂಭಾಗದ ಪ್ಯಾನೆಲ್ ವಾಟರ್​ಡ್ರಾಪ್ ಸ್ಟೈಲ್​ನಲ್ಲಿದೆ.

Moto E13: ಇಂದು ಮೋಟೋರೊಲಾದಿಂದ ಮೋಟೋ E13 ಬಿಡುಗಡೆ: ಇದರ ಬೆಲೆ 7,000 ರೂ. ಗಿಂತ ಕಡಿಮೆ
Moto E13
Edited By:

Updated on: Oct 08, 2026 | 12:35 PM

ಮೋಟೋರೊಲಾ (Motorola) ಕಂಪನಿಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಬಜೆಟ್ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯ ಫೋನ್​ಗಳನ್ನು ತಯಾರು ಮಾಡುತ್ತಿರುವ ಮೋಟೋ ಕಂಪನಿಯ ಪೋನ್​ಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ತನ್ನ E ಸರಣಿಯಲ್ಲಿ ಮೋಟೋ E32s ಎಂಬ ಸ್ಮಾರ್ಟ್‌ಫೋನ್‌ ಅನ್ನು ಬಜೆಟ್ ಬೆಲೆಗೆ ಅನಾವರಣ ಮಾಡಿ ಸದ್ದು ಮಾಡಿದ್ದ ಕಂಪನಿ ಇದೀಗ ಇದೇ ಸರಣಿಯಡಿಯಲ್ಲಿ ಮೋಟೋ ಇ13 (Moto E13) ಫೋನನ್ನು ರಿಲೀಸ್ ಮಾಡಲು ಸಿದ್ಧವಾಗಿದೆ. ಇಂದು ಈ ಸ್ಮಾರ್ಟ್​ಫೋನ್ (Smartphone) ಭಾರತದಲ್ಲಿ ಬಿಡುಗಡೆ ಆಗಲಿದ್ದು, ಇದುಕೂಡ ಅತ್ಯಂತ ಕಡಿಮೆ ಬೆಲೆ ಹೊಂದಿರಲಿದೆ ಎಂದು ಹೇಳಲಾಗಿದೆ.

ಮೋಟೋ E13 ಸ್ಮಾರ್ಟ್‌ಫೋನ್​ನ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದರ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಬೆಲೆ 7,000 ರೂ. ಒಳಗಡೆ ಇರಲಿದೆ ಎನ್ನಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಕಾಣಲಿದ್ದು ಟೀಸರ್ ಬಿಡುಗಡೆ ಮಾಡಿದೆ. ಈ ಫೋನಿನ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ಮಾತ್ರ ಇರುವುದು ಟೀಸರ್​ನಿಂದ ತಿಳಿದುಬಂದಿದೆ. ಮುಂಭಾಗದ ಪ್ಯಾನೆಲ್ ವಾಟರ್​ಡ್ರಾಪ್ ಸ್ಟೈಲ್​ನಲ್ಲಿದೆ.

ಈ ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ IPS LCD ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು 90Hz ರಿಫ್ರೆಶ್ ರೇಟ್​ನಿಂದ ಕೂಡಿರಬಹುದು. ಆಕ್ಟಾ-ಕೋರ್ T606 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 OS ಜೊತೆಗೆ ರನ್ ಆಗಲುತ್ತಿದ್ದು 1TB ವರೆಗೆ ಮೆಮೋರಿಯನ್ನು ಹೆಚ್ಚಿಸಬಹುದಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಮೋಟೋ E13 ಸ್ಮಾರ್ಟ್‌ಫೋನ್‌ ಸಿಂಗಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹಾಗೂ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಮೂಲಕ 30fps ಫುಲ್‌ HD ವಿಡಿಯೋವನ್ನು ರೆಕಾರ್ಡಿಂಗ್ ಮಾಡಬಹುದು. ಜೊತೆಗೆ ಪನೋರಮ, ಪೋಟ್ರೆಟ್, ನೈಟ್ ವರ್ಷನ್, ಡ್ಯುಯೆಲ್ ಕಾಪ್ಚರ್, ಲೈವ್ ಫಿಲ್ಟರ್ ಸೇರಿದಂತೆ ಅನೇಕ ಆಯ್ಕೆಗಳಿವೆ.

ಮೋಟೋ E13 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಪಡೆದಿದೆ. ಇದು 10W ಚಾರ್ಜಿಂಗ್ ವೇಗವನ್ನು ಬೆಂಬಲಿಸಬಹುದು ಎನ್ನಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಫೋನ್ ಜ್ಯಾಕ್‌, ವೈಫೈ, ಬ್ಲೂಟೂತ್ v5.0 ಬೆಂಬಲ ಪಡೆದುಕೊಂಡಿದೆ. ಇದು 5ಜಿ ಬೆಂಬಲ ಪಡೆದುಕೊಂಡಿಲ್ಲ ಬದಲಾಗಿ 4G VoLTE ಸಪೋರ್ಟ್ ಮಾಡುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್​ನೊಂದಿಗೆ ಮಾರುಕಟ್ಟೆಗೆ ಬರಲಿದೆ.

Published On - 6:48 am, Wed, 8 February 23

TV9 Web

TV9 Kannada

Read More
Loading...
Unable to load recommendations.
Follow Us