“ದೊಡ್ಡ ಹಣವು ಖರೀದಿ ಅಥವಾ ಮಾರಾಟದಲ್ಲಿಲ್ಲ, ಆದರೆ ಕಾಯುವಿಕೆಯಲ್ಲಿದೆ,” ಎಂದು ಮನಿ ಮ್ಯಾಗ್ನೆಟ್ ಚಾರ್ಲಿ ಮುಂಗರ್ ಒಮ್ಮೆ ಹೇಳಿದ್ದರು. ಭಾರತದ ಐಟಿ ಸ್ಟಾಕ್ ಸುಬೆಕ್ಸ್ ವಿಷಯಕ್ಕೆ ಬಂದಾಗ ಇದು ಸರಿಯಾಗಿ ತಾಳೆ ಆಗುತ್ತದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಈ ಕಂಪೆನಿಯ ಷೇರುಗಳ ಬೆಲೆ 2020ರ ಜುಲೈ 9ರಂದು ರೂ. 7.82 ಇದ್ದದ್ದು ಎನ್‌ಎಸ್‌ಇಯಲ್ಲಿ ಪ್ರತಿ ಷೇರು ರೂ. ಇವತ್ತಿಗೆ ಜುಲೈ 9ನೇ ತಾರೀಕಿನ (ಇಂದು ಬೆಳಿಗ್ಗೆ 10.49ಕ್ಕೆ) ರೂ. 72.75ಕ್ಕೆ ಏರಿದೆ. ಅಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಷೇರು ಶೇ 837.34 ರಷ್ಟು ಏರಿಕೆ ಕಂಡಿದೆ. ಈ ಐಟಿ ಸ್ಟಾಕ್ 2021 ರ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಅಂಶ ಏನೆಂದರೆ, ಈ ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪಟ್ಟಿಯಲ್ಲಿ ಸ್ಮಾಲ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಸ್ಟಾಕ್‌ಗಳು ತುಂಬಿವೆ. ಏಕೆಂದರೆ, ಕೊವಿಡ್ 19ನಿಂದಾಗಿ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಹೊಡೆತದ ನಂತರ ಹೂಡಿಕೆದಾರರು ಈ ವಲಯದತ್ತ ಗಮನ ಹರಿಸಿದ್ದಾರೆ.
ಸುಬೆಕ್ಸ್ ಷೇರು ಬೆಲೆ ಇತಿಹಾಸ
ಮೊದಲೇ ಹೇಳಿದಂತೆ, ಕಳೆದ ಆರು ತಿಂಗಳಲ್ಲಿ ಸುಬೆಕ್ಸ್ ಷೇರು ಬೆಲೆ ಶೇಕಡಾ 337.34 ರಷ್ಟು ಏರಿಕೆಯಾಗಿದೆ; ಈ ಐಟಿ ಸ್ಟಾಕ್ ತನ್ನ ಷೇರುದಾರರಿಗೆ ಶೇಕಡಾ 150 ಕ್ಕಿಂತ ಹೆಚ್ಚು ಲಾಭವನ್ನು ಗಳಿಸಿ ಕೊಟ್ಟಿದೆ. ಕಳೆದ ಒಂದು ತಿಂಗಳಲ್ಲಿ ಶೇ 22.88ರಷ್ಟು ಲಾಭವು ಬಂದಿದೆ. ಆದ್ದರಿಂದ, ಐಟಿ ಸ್ಟಾಕ್ ವರ್ಷಪೂರ್ತಿ ತನ್ನ ಹೂಡಿಕೆದಾರರಿಗೆ ಹಣ ಗಳಿಸಿಕೊಟ್ಟಿರುವ ಸ್ಟಾಕ್ ಆಗಿ ಉಳಿದಿದೆ.
ಹೂಡಿಕೆ ಲಾಭ
ಸುಬೆಕ್ಸ್ ಷೇರುಗಳಿಗೆ ಬಂದಿರುವ ಮೇಲಿನ ಆದಾಯದಿಂದ ಲೆಕ್ಕ ತೆಗೆದುಕೊಂಡರೆ, ನಗದು ವಿಭಾಗದ ಹೂಡಿಕೆದಾರರು ಕೌಂಟರ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ, ಆ 1 ಲಕ್ಷ ರೂಪಾಯಿ ಕಳೆದ ಒಂದು ವರ್ಷದಲ್ಲಿ 8.37 ಲಕ್ಷ ರೂಪಾಯಿ ಆಗಿದೆ. ಕಳೆದ ಆರು ತಿಂಗಳಲ್ಲಿ 1 ಲಕ್ಷ ರೂಪಾಯಿ 1.53 ಲಕ್ಷ ಆಗಿದೆ. ಇನ್ನು ಕಳೆದ ಒಂದು ತಿಂಗಳಲ್ಲಿ ಹೂಡಿಕೆದಾರರು ಹೂಡಿದ 1 ಲಕ್ಷ ರೂಪಾಯಿಗೆ 22,000 ಬಂದಿದ್ದು, ನಿವ್ವಳ ಮೊತ್ತವು ಕಳೆದ ಒಂದು ತಿಂಗಳಲ್ಲಿ 1.22 ಲಕ್ಷ ಆಗಿದೆ. ಪ್ರಸ್ತುತ, ಸುಬೆಕ್ಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವು ಸುಮಾರು 3750 ಕೋಟಿ ರೂ. ಆಗಿದೆ. ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ಸಗಟು ಮಾರಾಟವು 754.40 ಕೋಟಿ ದಾಖಲಾಗಿದ್ದರೆ, ಆದಾಯವು 758.90 ಕೋಟಿ ರೂಪಾಯಿ ಎಂದು ವರದಿ ಆಗಿದೆ.
ಇದನ್ನೂ ಓದಿ: Kotak Mahindra Bank: ಖಾಸಗಿ ಬ್ಯಾಂಕ್ ಷೇರಿನ 10,000 ರೂಪಾಯಿ 20 ವರ್ಷದಲ್ಲಿ 64 ಲಕ್ಷ ರೂ.
(Multibagger stock Subex gained 837 percent in one year. Here is the details)