ನರೇಂದ್ರ ಮೋದಿ ಜನ್ಮದಿನ ವಿಶೇಷ; ಕಳೆದ ಒಂದು ವರ್ಷದಲ್ಲಿ ಭಾರತ ಹೇಗೆ ಬದಲಾಗಿದೆ ನೋಡಿ?

|

Updated on: Sep 16, 2023 | 10:00 AM

PM Narendra Modi Birthday 17th September: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೀಗ 73 ವರ್ಷ ವಯಸ್ಸು ಪೂರ್ಣಗೊಳ್ಳುತ್ತಿದೆ. ಈ ಬಾರಿಯ ಅವರ ಜನ್ಮದಿನಕ್ಕೂ, ಹಿಂದಿನ ವರ್ಷದ ಜನ್ಮದಿನಕ್ಕೂ ಮಧ್ಯೆ ಭಾರತ ಸಾಕಷ್ಟು ಪರಿವರ್ತನೆಗಳನ್ನು ಕಂಡಿದೆ. ಭಾರತ ಸೂಪರ್ ಪವರ್ ದೇಶ ಎಂದು ಹಣೆಪಟ್ಟಿ ಪಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಕಾಣತೊಡಗಿವೆ. ಜಿ20 ಸಭೆ ಭಾರತವನ್ನು ವಿಶ್ವಗುರು ಸ್ಥಾನದತ್ತ ನೂಕಿದೆ. ಈ ಒಂದು ವರ್ಷದಲ್ಲಿ ಜಿಡಿಪಿ ಸೇರಿದಂತೆ ಭಾರತ ಕಂಡ ಪ್ರಮುಖ ಬದಲಾವಣೆಗಳ ವಿವರ ಈ ಲೇಖನದಲ್ಲಿದೆ.

ನರೇಂದ್ರ ಮೋದಿ ಜನ್ಮದಿನ ವಿಶೇಷ; ಕಳೆದ ಒಂದು ವರ್ಷದಲ್ಲಿ ಭಾರತ ಹೇಗೆ ಬದಲಾಗಿದೆ ನೋಡಿ?
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಜನ್ಮದಿನ (Narendra Modi’s Birthday) ಸೆಪ್ಟೆಂಬರ್ 17ರಂದು ಇದೆ. 2001ರಿಂದಲೂ, ಅಂದರೆ 22 ವರ್ಷಗಳಿಂದಲೂ ನರೇಂದ್ರ ಮೋದಿ ಅವರು ಸತತವಾಗಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಸ್ಥಾನಗಳಲ್ಲಿದ್ದು ಆಡಳಿತ ನಿರ್ವಹಿಸುತ್ತಿದ್ದಾರೆ. ಅವರ ಆಡಳಿತದ ಅಡಿಯಲ್ಲಿ ಮೊದಲಿಗೆ ಗುಜರಾತ್ ಮತ್ತು ಈಗ ಇಡೀ ರಾಷ್ಟ್ರವೇ ಸಕಾರಾತ್ಮಕವಾಗಿ ಪರಿವರ್ತನೆಗೊಂಡಿದೆ. 2014ರಿಂದೀಚೆ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಸಾಕಷ್ಟು ಸುಧಾರಣಾ ಕ್ರಮಗಳು ಜಾರಿಯಾಗಿವೆ, ಜಾರಿ ಮಾಡುವ ಪ್ರಯತ್ನಗಳಾಗಿವೆ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸುಧಾರಣಾ ಕ್ರಮಗಳನ್ನು ತರಲಾಗಿದೆ. ಕಳೆದ ಒಂದು ವರ್ಷದಲ್ಲೇ ಭಾರತ ಸಾಕಷ್ಟು ಗಮನಾರ್ಹ ಬೆಳವಣಿಗೆಗಳನ್ನು ಕಂಡಿದೆ.

ಭಾರತದ ಜಿಡಿಪಿ ಬಹಳ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಕಳೆದ ವರ್ಷ 2022ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ 6.3ರಷ್ಟು ಬೆಳೆದಿತ್ತು. ನಂತರ ಕ್ವಾರ್ಟರ್​ನಲ್ಲಿ ಶೇ. 4.4 ಮತ್ತು ಶೇ. 6.1ರಷ್ಟು ಬೆಳವಣಿಗೆ ಹೊಂದಿತ್ತು. 2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 7.8ರ ದರದಲ್ಲಿ ಬೆಳೆದು ಇಡೀ ವಿಶ್ವದ ಗಮನ ಸೆಳೆದಿದೆ.

ಇದನ್ನೂ ಓದಿ: ಭಾರತದ ಆರ್ಥಿಕ ಕಾರಿಡಾರ್, ಆಟೊಮೊಬೈಲ್ ನೀತಿ: ರಷ್ಯಾ ಅಧ್ಯಕ್ಷರಿಂದ ನರೇಂದ್ರ ಮೋದಿ ಗುಣಗಾನ

ಹಣದುಬ್ಬರವೂ ಕೂಡ ಸಾಕಷ್ಟು ಇಳಿಕೆ ಕಂಡಿದೆ. ಈ ವರ್ಷದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಶೇ. 6ಕ್ಕಿಂತಲೂ ಹೆಚ್ಚಿರುವುದು ಬಿಟ್ಟರೆ ಉಳಿದಂತೆ ಕಳೆದ ಒಂದು ವರ್ಷದಲ್ಲಿ ಹಣದುಬ್ಬರ ಬಹುತೇಕ ಅಂಕೆಯಲ್ಲಿತ್ತು.

ಜಿ20 ಸಭೆಯಿಂದ ಭಾರತದ ಶಕ್ತಿಯ ಅನಾವರಣ

ಜಿಡಿಪಿ ಮತ್ತು ಹಣದುಬ್ಬರಕ್ಕಿಂತ ಹೆಚ್ಚಾಗಿ ಭಾರತ ವಿಶ್ವದ ಪ್ರಮುಖ ರಾಜಕೀಯ ಮತ್ತು ಆರ್ಥಿಕ ಶಕ್ತಿಯಾಗಿ ಗುರುತಾಗತೊಡಗಿದೆ. ಇದಕ್ಕೆ ಸ್ಪಷ್ಟವಾಗಿ ವೇದ್ಯವಾಗಿದ್ದು ಜಿ20 ಸಮಾವೇಶದಲ್ಲಿ. ಅಲ್ಲಿ ಒಮ್ಮತದ ಘೋಷಣೆ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ರೀತಿ ಒಮ್ಮತ ಮೂಡಿದ್ದು ಜಿ20 ಗುಂಪಿನ ಇತಿಹಾಸದಲ್ಲೆ ಮೊದಲು. ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ಅದರ ನೀತಿಗಳು ಎಲ್ಲಾ ದೇಶಗಳಿಗೆ ಸಮ್ಮತವಾಗಿರುವುದು ಗೋಚರವಾಗುತ್ತದೆ.

ಇದನ್ನೂ ಓದಿ: ಮಹತ್ವಾಕಾಂಕ್ಷಿ ಕಾರಿಡಾರ್ ಯೋಜನೆ; ಸೌದಿ ಅರೇಬಿಯಾ ಜೊತೆ ಕಾರ್ಯಾಚರಣೆಗಿಳಿದ ಭಾರತ; 8 ಒಪ್ಪಂದಗಳಿಗೆ ಸಹಿ

ಜಿ20 ಶೃಂಗಸಭೆಯಲ್ಲಿ ಘೋಷಣೆಯಾದ ಕೆಲ ಪ್ರಮುಖ ಯೋಜನೆಗಳಲ್ಲಿ ಆರ್ಥಿಕ ಕಾರಿಡಾರ್ ಯೋಜನೆ. ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ನಡುವಿನ ಆರ್ಥಿಕ ಕಾರಿಡಾರ್ ಯೋಜನೆ ಚೀನಾದ ಸಿಲ್ಕ್ ರೋಡ್ ಯೋಜನೆಗೆ ನೇರವಾಗಿ ಸವಾಲು ಒಡ್ಡುವಂತಿದೆ. ವಿಶ್ವದ ಹಲವು ಪ್ರಮುಖ ದೇಶಗಳು ಭಾರತ ನೇತೃತ್ವದ ಈ ಕಾರಿಡಾರ್ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿವೆ. ಈ ಬೆಳವಣಿಗೆ ಭಾರತಕ್ಕೆ ಜಾಗತಿಕ ನಾಯಕನ ಸ್ಥಾನ ಕೊಡುವಲ್ಲಿ ಸಹಾಯಕವಾಗಿದೆ.

ಕೋವಿಡ್ ಸಂದರ್ಭದಲ್ಲಿ ದುರ್ಬಲ ಮತ್ತು ಅಸಹಾಯಕ ದೇಶಗಳಿಗೆ ಭಾರತ ಮಾಡಿದ ನಿಸ್ವಾರ್ಥ ಸಹಾಯ ಜಾಗತಿಕವಾಗಿ ನಮ್ಮ ದೇಶಕ್ಕೆ ವಿಶ್ವಾಸಾರ್ಹತೆ ತಂದುಕೊಟ್ಟಿರುವುದು ಹೌದು. ಹೀಗಾಗಿ, ಭಾರತದ ಮಾತಿಗೆ ಈಗ ಹೆಚ್ಚು ಬೆಲೆ ಸಿಕ್ಕಿದೆ. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರ ಅವಿರತ ವಿದೇಶ ಪ್ರವಾಸಗಳು ಬಹಳಷ್ಟು ದೇಶಗಳಿಗೆ ಭಾರತ ಅಪ್ಯಾಯಮಾನವಾಗುವಂತೆ ಮಾಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ