ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಅಂದ್ರೆ ಅ.17ರಂದು ಕಿಸಾನ್ ಸಮ್ಮಾನ್ ಯೋಜನೆಯಡಿ (PM Kisan Samman)12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಲಿದ್ದಾರೆ.
16 ಸಾವಿರ ಕೋಟಿ ರೂ. ಹಣ 8 ಲಕ್ಷ ರೈತರ ಖಾತೆಗಳಿಗೆ ಜಮವಾಗಲಿದೆ. ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಮಾಡುವುದರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
PM Modi to inaugurate PM Kisan Samman Sammelan 2022 in Delhi tomorrow, inaugurate 600 PM Kisan Samruddhi Kendras
PM to also release PM-KISAN Funds worth Rs 16,000 crores, launch PM Bhartiya Jan Urvarak Pariyojana – One Nation One Fertilizer & Agri Startup Conclave & Exhibition pic.twitter.com/CWMiF3MEEp
— ANI (@ANI) October 16, 2022
ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್‍ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
PM Kisan Samman Nidhi: ಒಂದು ಕುಟುಂಬದಲ್ಲಿ ಎಷ್ಟು ಮಂದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪ್ರಯೋಜನ ಪಡೆಯಬಹುದು?
ಅಲ್ಲದೇ, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಮೋದಿ ಆರಂಭಿಸಲಿದ್ದಾರೆ. ದೇಶದಲ್ಲಿರುವ 2.7 ಲಕ್ಷ ಗೊಬ್ಬರದ ಅಂಗಡಿಗಳನ್ನು ಹಂತ ಹಂತವಾಗಿ ವನ್ ಸ್ಟಾಪ್ ಸೆಂಟರ್‌ಗಳಾಗಿ ಬದಲಿಸಿ ಪಿಎಂ ಸಮೃದ್ಧಿ ಕೇಂದ್ರಗಳೆಂದು ಮರುನಾಮಕರಣ ಮಾಡಲಾಗುತ್ತದೆ.
ವಿವಿಧ ಸಂಘ-ಸಂಸ್ಥೆಗಳಿಂದ ಒಂದು ಕೋಟಿಗೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೀಗ ದೇಶದಲ್ಲಿರುವ ರಸಗೊಬ್ಬರ ಚಿಲ್ಲರೆ ಅಂಗಡಿಗಳನ್ನು ಹಂತ ಹಂತವಾಗಿ ಪ್ರದಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಪರಿವರ್ತಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ.
ಕೃಷಿ ಸ್ಟಾರ್ಟ್ಅಪ್ ಕಾನ್ಕ್ಲೇವ್ & ಪ್ರದರ್ಶನ ಆರಂಭಿಸಲಿದ್ದು, 1,500 ಅಗ್ರಿ ಸ್ಟಾರ್ಟ್ಅಪ್, 13,500 ರೈತರು ಭಾಗಿಯಾಗಲಿದ್ದಾರೆ.
12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳುವುದು ಹೇಗೆ?
-ಅಧಿಕೃತ ವೆಬ್ ಸೈಟ್ pmkisan.gov.in ಲಾಗಿನ್ ಆಗಿ
-‘ಫಾರ್ಮರ್ಸ್ ಕಾರ್ನರ್’ ಎಂದ ಆಪ್ಶನ್ ಮೇಲೆ ಕ್ಲಿಕ್ ಮಾಡಿ
-ನಂತರ ‘ಬೆನೆಫಿಸಿಯರಿ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ
-ನಿಮ್ಮ ಬ್ಯಾಂಕ್ ಅಕೌಂಟ್ ಇಲ್ಲವೇ ಆಧಾರ್ ನಂಬರ್ ಆಪ್ಶನ್ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ.
-ಸೂಕ್ತವಾದ ನಂಬರನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ
-‘ಗೆಟ್ ಡಾಟಾ’ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ
ಇದನ್ನೆಲ್ಲ ಮಾಡಿದ ಮೇಲೆ ವಹಿವಾಟಿನ ಎಲ್ಲ ವಿವರಗಳು ನಿಮಗೆ ಲಭ್ಯವಾಗುತ್ತವೆ.
Published On - 10:15 pm, Sun, 16 October 22