ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್ ಚಾನಲ್ ಬಳಗದ ಸಂಖ್ಯೆ 50ಲಕ್ಷಕ್ಕಿಂತ ಹೆಚ್ಚು; ಮುಂಚೂಣಿಯಲ್ಲಿ ಯಾರಿದ್ದಾರೆ?

|

Updated on: Sep 25, 2023 | 4:33 PM

Naredra Modi Followers In Whatsapp Channel: ಸೋಷಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಫಾಲೋಯರ್​ಗಳನ್ನು ಹೊಂದಿರುವ ವಿಶ್ವನಾಯಕರಲ್ಲಿ ಪ್ರಮುಖರಾಗಿರುವ ನರೇಂದ್ರ ಮೋದಿ ಅವರು ವಾಟ್ಸಾಪ್​ನಲ್ಲೂ ಕಿಂಗ್ ಎನಿಸಿಕೊಳ್ಳುವತ್ತ ಸಾಗುತ್ತಿದ್ದಾರೆ. ಸೆ. 14ರಂದು ವಾಟ್ಸಾಪ್ ಚಾನಲ್​ಗೆ ಅಡಿ ಇಟ್ಟ ನರೇಂದ್ರ ಮೋದಿ 10 ದಿನದಲ್ಲಿ ಪಡೆದ ಫಾಲೋಯರ್ಸ್ ಸಂಖ್ಯೆ 53 ಲಕ್ಷ ಗಡಿ ದಾಟಿದೆ. ಕತ್ರಿನಾ ಕೈಫ್ ಮತ್ತು ಅಕ್ಷಯ್ ಕುಮಾರ್ ಬಳಿಕ ವಾಟ್ಸಾಪ್ ಚಾನಲ್​ನಲ್ಲಿ ಅತಿಹೆಚ್ಚು ಫಾಲೋಯರ್ಸ್ ಇರುವುದು ನರೇಂದ್ರ ಮೋದಿಗೆಯೇ.

ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್ ಚಾನಲ್ ಬಳಗದ ಸಂಖ್ಯೆ 50ಲಕ್ಷಕ್ಕಿಂತ ಹೆಚ್ಚು; ಮುಂಚೂಣಿಯಲ್ಲಿ ಯಾರಿದ್ದಾರೆ?
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ ಅವರ ವಾಟ್ಸಾಪ್ ಚಾನಲ್ (Narendra Modi whatsapp channel) ಜನಪ್ರಿಯತೆ ಹೆಚ್ಚುತ್ತಿದೆ. ದಿನೇ ದಿನೇ ಲಕ್ಷಾಂತರ ಮಂದಿ ಹೊಸ ಫಾಲೋಯರ್​ಗಳು ಮೋದಿ ಚಾನಲ್​ಗೆ ಸೇರಿಕೊಳ್ಳುತ್ತಿದ್ದಾರೆ. ಕೇವಲ 10 ದಿನದಲ್ಲಿ ಅವರ ವಾಟ್ಸಾಪ್ ಕಮ್ಯೂನಿಟಿಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಸೆಪ್ಟೆಂಬರ್ 14ರಂದು ಪ್ರಧಾನಿಗಳು ಮೊದಲ ಬಾರಿಗೆ ವಾಟ್ಸಾಪ್​ಗೆ ಅಡಿ ಇಟ್ಟಿದ್ದರು. ಇವತ್ತು 11 ದಿನಗಳ ಬಳಿಕ ಅವರ ಫಾಲೋಯರ್ಸ್ ಸಂಖ್ಯೆ 53 ಲಕ್ಷ ಮುಟ್ಟಿದೆ.

ನರೇಂದ್ರ ಮೋದಿ ಸೋಷಿಯಲ್ ಮೀಡಿಯಾ ಕಿಂಗ್

ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅನುಯಾಯಿಗಳ ಬಳಗ ಹೊಂದಿರುವ ವಿಶ್ವನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರು. ಇವರ ಟ್ವಿಟ್ಟರ್ ಮತ್ತು ಫೇಸ್ವುಕ್ ಖಾತೆಗಳಿಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಫಾಲೋಯರ್ಸ್ ಇದ್ದಾರೆ. ಈಗ ವಾಟ್ಸಾಪ್ ಚಾನಲ್​ನಲ್ಲೂ ಅವರ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದೆ.

ವಾಟ್ಸಾಪ್ ಚಾನಲ್​ನಲ್ಲಿ ಮುಂಚೂಣಿಯಲ್ಲಿರುವವರು ಯಾರು?

ಸೆಪ್ಟೆಂಬರ್ 25ರಂದು ಕಂಡಿರುವ ಮಾಹಿತಿ ಪ್ರಕಾರ, ವಾಟ್ಸಾಪ್ ಚಾನಲ್​ಗಳ ಪೈಕಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ವ್ಯಕ್ತಿಗಳ ಸಾಲಿನಲ್ಲಿ ನರೇಂದ್ರ ಮೋದಿ ಬರುತ್ತಾರೆ. ವಾಟ್ಸಾಪ್, ನೆಟ್​ಫ್ಲಿಕ್ಸ್, ವಿವಿಧ ಕ್ರೀಡಾ ತಂಡಗಳು, ಸುದ್ದಿ ಸಂಸ್ಥೆಗಳು ಇತ್ಯಾದಿಗೆ ಹೆಚ್ಚು ಫಾಲೋಯರ್ಸ್ ಇದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೆಗಾ ರ‍್ಯಾಲಿ: ಎಲ್ಲಾ ಖಾತರಿಗಳನ್ನು ಪೂರೈಸುವ ಭರವಸೆ ನೀಡಿದ ಪ್ರಧಾನಿ ಮೋದಿ

ವಾಟ್ಸಾಪ್ ಚಾನಲ್​ನಲ್ಲಿ ಯಾವ ವ್ಯಕ್ತಿಗಳಿಗೆ ಎಷ್ಟು ಫಾಲೋಯರ್ಸ್?

  1. ಕತ್ರಿನಾ ಕೈಫ್: 1.27 ಕೋಟಿ
  2. ಮಾರ್ಕ್ ಜುಕರ್ಬರ್ಗ್: 82 ಲಕ್ಷ
  3. ಅಕ್ಷಯ್ ಕುಮಾರ್: 70 ಲಕ್ಷ
  4. ನರೇಂದ್ರ ಮೋದಿ: 53 ಲಕ್ಷ
  5. ಒಲಿವಿಯಾ ರೋಡ್ರಿಗೋ: 51 ಲಕ್ಷ
  6. ದಿಲ್ಜಿತ್ ದೋಸಾಂಜ್: 48 ಲಕ್ಷ
  7. ಸನ್ನಿ ಲಿಯೋನೆ: 42 ಲಕ್ಷ
  8. ಸೋನಾಲಿ ಸಿಂಗ್: 25 ಲಕ್ಷ
  9. ಅಸ್ಲಿ ಮೋನಾಲೀಸ: 23 ಲಕ್ಷ
  10. ಪಂಕಜ್ ಭದೂರಿಯಾ: 20 ಲಕ್ಷ

ಇದನ್ನೂ ಓದಿ: ಕಾವೇರಿ ನೀರು ವಿವಾದ: ಮಧ್ಯಸ್ಥಿಕೆ ವಹಿಸುವಂತೆ ನರೇಂದ್ರ ಮೋದಿಗೆ ದೇವೇಗೌಡ ಪತ್ರ

ಇಲ್ಲಿ ಅಸ್ಲಿ ಮೋನಲಿಸಾ ಎಂಬಾಕೆ ಭೋಜಪುರಿ ನಟಿಯಾಗಿದ್ದು ಆಕೆಯ ಅಸಲಿ ಹೆಸರು ಅಂತರಾ ಬಿಸ್ವಾಸ್ ಎಂದಿದೆ. ಈಕೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಫಾಲೋಯರ್ಸ್ ಹೊಂದಿದ್ದಾಳೆ. ಇನ್ನು, ಕತ್ರಿನಾ ಕೈಫ್ ಮತ್ತು ಅಕ್ಷಯ್ ಕುಮಾರ್ ಬಿಟ್ಟರೆ ವಾಟ್ಸಾಪ್ ಚಾನಲ್​ನಲ್ಲಿ ನರೇಂದ್ರ ಮೋದಿ ಅವರೇ ಹೆಚ್ಚು ಫಾಲೋಯರ್ಸ್ ಹೊಂದಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ