ಎಕ್ಸ್​ನಲ್ಲಿ ಮೋದಿಗೆ ಇಲ್ಲ ಸರಿಸಾಟಿ; ಒಂದು ತಿಂಗಳ ಅತಿ ಮೆಚ್ಚಿನ 10 ಟ್ವೀಟ್​ಗಳಲ್ಲಿ ಮೋದಿಯದ್ದೇ 8

Narendra Modi's 8 posts among the top-10 most liked tweets in last month: ಟ್ವಿಟ್ಟರ್​ನಲ್ಲಿ (ಎಕ್ಸ್) ಕಳೆದ ಒಂದು ತಿಂಗಳಲ್ಲಿ ಅತಿಹೆಚ್ಚು ಲೈಕ್ ಪಡೆದ ಭಾರತೀಯರ ಟಾಪ್-10 ಪಟ್ಟಿಯಲ್ಲಿ ಎಂಟು ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಇದೆ. ಈ ಟಾಪ್-10ನಲ್ಲಿ ಬೇರೆ ಭಾರತೀಯ ರಾಜಕಾರಣಿಯ ಒಂದೂ ಪೋಸ್ಟ್ ಇಲ್ಲ. ರಷ್ಯಾ ಪ್ರಧಾನಿ ಪುಟಿನ್, ಅಂಧರ ತಂಡದ ವಿಶ್ವಕಪ್ ವಿಕ್ರಮ ಇತ್ಯಾದಿ ಕುರಿತ ಮೋದಿ ಅವರ ಪೋಸ್ಟ್​ಗಳಿಗೆ ಅತಿಹೆಚ್ಚು ಲೈಕ್ ಬಂದಿದೆ.

ಎಕ್ಸ್​ನಲ್ಲಿ ಮೋದಿಗೆ ಇಲ್ಲ ಸರಿಸಾಟಿ; ಒಂದು ತಿಂಗಳ ಅತಿ ಮೆಚ್ಚಿನ 10 ಟ್ವೀಟ್​ಗಳಲ್ಲಿ ಮೋದಿಯದ್ದೇ 8
ನರೇಂದ್ರ ಮೋದಿ

Updated on: Dec 19, 2025 | 1:55 PM

ನವದೆಹಲಿ, ಡಿಸೆಂಬರ್ 19: ಎಕ್ಸ್ ಸದ್ಯ ವಿಶ್ವದ ಅತಿ ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯ ಕಿರು ಸಾಮಾಜಿಕ ಮಾಧ್ಯಮ ಎನಿಸಿದೆ. ಬಹಳ ಸುದ್ದಿಗಳು ಈ ಪ್ಲಾಟ್​ಫಾರ್ಮ್​ನಲ್ಲೇ ಸ್ಫೋಟಗೊಳ್ಳುತ್ತವೆ. ವಿಶ್ವದ ಬಹುತೇಕ ಸೆಲಬ್ರಿಟಿಗಳು ಎಕ್ಸ್​ನಲ್ಲಿ ಉಪಸ್ಥಿತಿ ಹೊಂದಿದ್ದಾರೆ. ಎಕ್ಸ್​ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ರಾಜಕಾರಣಿಗಳಲ್ಲಿ ನರೇಂದ್ರ ಮೋದಿಯೂ (Narendra Modi) ಒಬ್ಬರು. ಇವರು ಹಾಕುವ ಪೋಸ್ಟ್​ಗಳಿಗೆ ಸಿಗುವ ಲೈಕ್​ಗಳೇ ಇವರ ಜನಪ್ರಿಯತೆಗೆ ಅಳತೆಗೋಲೆನಿಸುತ್ತವೆ.

ಕಳೆದ ಒಂದು ತಿಂಗಳಲ್ಲಿ ಎಕ್ಸ್​ನಲ್ಲಿ ಅತಿಹೆಚ್ಚು ಲೈಕ್ ಪಡೆದ ಪೋಸ್ಟ್​ಗಳಲ್ಲಿ ಹೆಚ್ಚಿನವು ನರೇಂದ್ರ ಮೋದಿ ಅವರದ್ದೇ ಆಗಿದೆ. ಒಂದು ತಿಂಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಭಾರತೀಯರ ಟಾಪ್-10 ಪೋಸ್​ಟ್​ಗಳಲ್ಲಿ ನರೇಂದ್ರ ಮೋದಿ ಅವರ 8 ಪೋಸ್ಟ್​ಗಳಿವೆ. ಪ್ರಧಾನಿಗಳ ಜನಪ್ರಿಯತೆಗೆ ಇದು ದ್ಯೋತಕ ಎನಿಸಿದೆ.

ಇದನ್ನೂ ಓದಿ: ಹುರೂನ್ ವೆಲ್ತ್ ರಿಪೋರ್ಟ್: ಮುಂಬೈಯನ್ನು ಹಿಂದಿಕ್ಕಿದ ಬೆಂಗಳೂರು ನಂ. 1

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದನ್ನು ಡಿಸೆಂಬರ್ 4ರಂದು ಪ್ರಧಾನಿಗಳು ಎಕ್ಸ್​ನಲ್ಲಿ ಹಂಚಿಕೊಂಡಿದ್ದರ. ಆ ಪೋಸ್ಟ್​ಗೆ 2.31 ಲಕ್ಷ ಜನರು ಲೈಕ್ ಮಾಡಿದ್ದಾರೆ. 67 ಲಕ್ಷ ಜನರು ಗಮನಿಸಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ. ಆ ಮಟ್ಟದ ಸ್ಪಂದನೆ ಮೋದಿ ಅವರ ಆ ಪೋಸ್ಟ್​ಗೆ ಸಿಕ್ಕಿದೆ.

ಪುಟಿನ್ ಭೇಟಿ ಕುರಿತ ನರೇಂದ್ರ ಮೋದಿ ಅವರ ಮತ್ತಷ್ಟು ಎಕ್ಸ್ ಪೋಸ್ಟ್​ಗಳಿಗೆ ಒಂದು ಲಕ್ಷಕ್ಕೂ ಅಧಿಕ ಲೈಕ್​ಗಳು ಸಿಕ್ಕಿವೆ. ಭಾರತ ಮತ್ತು ರಷ್ಯಾ ಸ್ನೇಹದ ಮಹತ್ವದ ಬಗ್ಗೆ ತಿಳಿಸಿದ ಒಂದು ಪೋಸ್ಟ್​ಗೆ ಎಂಟು ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ.

ಕಳೆದ ಒಂದು ತಿಂಗಳಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪ್ರಧಾನಿಗಳ ಪೋಸ್ಟ್​ಗಳಲ್ಲಿ 19 ವರ್ಷದ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ, ರಾಮಜನ್ಮಭೂಮಿ ಮಂದಿರದ ಧರ್ಮ ಧ್ವಜಾರೋಹಣ್ ಉತ್ಸವ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ವಿವಾಹ ಶುಭಾಶಯ, ಅಂಧ ಮಹಿಳಾ ಕ್ರಿಕೆಟ್ ತಂಡದ ವರ್ಲ್ಡ್ ಕಪ್ ಗೆಲುವಿನ ಕುರಿತ ಬರೆದ ಪೋಸ್ಟ್​ಗಳು ಒಳಗೊಂಡಿವೆ.

ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ

ಡಿಡಿ ನ್ಯೂಸ್​ನಲ್ಲಿ ಈ ಕುರಿತ ಒಂದು ಪೋಸ್ಟ್

ಎಕ್ಸ್​ನಲ್ಲಿ ಇತ್ತೀಚೆಗಷ್ಟೇ ಈ ಹೊಸ ಫೀಚರ್ ಪರಿಚಯಿಸಲಾಗಿದೆ. ಆದರೆ, ಪ್ರೀಮಿಯಮ್ ಸಬ್​ಸ್ಕ್ರಿಪ್ಷನ್ ಪಡೆದಿರುವವರಿಗೆ ಸದ್ಯ ಈ ಫೀಚರ್ ಲಭ್ಯ ಇದ್ದಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ