AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ರೀಮೆಂಟ್ ಮುಗಿದರೂ ಬಾಡಿಗೆದಾರ ಮನೆ ಖಾಲಿ ಮಾಡುತ್ತಿಲ್ಲವಾ? ಬೀಗ ಜಡಿಯದಿರಿ ಮಾಲೀಕರೆ; ಹೀಗೆ ಮಾಡಿ

Tenants vs owners: ಬಾಡಿಗೆದಾರರು ಕರಾರು ಮುಗಿದರೂ ಮನೆ ಖಾಲಿ ಮಾಡದಿದ್ದಾಗ ಮಾಲೀಕರು ಏನು ಮಾಡಬೇಕು? ಜಗಳ ಮಾಡುವುದು, ಬೀಗ ಹಾಕುವುದು ಇತ್ಯಾದಿ ಮಾಡದೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ವಕೀಲರ ಮೂಲಕ ಲೀಗಲ್ ನೋಟೀಸ್ ಕೊಡಬಹುದು. ಹಾಗೆ ಮಾಡಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತ ಮಾಹಿತಿ ಇಲ್ಲಿದೆ.

ಅಗ್ರೀಮೆಂಟ್ ಮುಗಿದರೂ ಬಾಡಿಗೆದಾರ ಮನೆ ಖಾಲಿ ಮಾಡುತ್ತಿಲ್ಲವಾ? ಬೀಗ ಜಡಿಯದಿರಿ ಮಾಲೀಕರೆ; ಹೀಗೆ ಮಾಡಿ
ಮನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 19, 2025 | 4:38 PM

Share

ಮನೆಯನ್ನು ಬಾಡಿಗೆಗೆ ಕೊಡುವಾಗ ಹೆಚ್ಚಿನ ಮಾಲೀಕರು (House Owners) ಬಾಡಿಗೆ ಕರಾರು ಅಥವಾ ರೆಂಟಲ್ ಅಗ್ರೀಮೆಂಟ್ (Rent Agreement) ಮಾಡಿಕೊಳ್ಳುವುದಿಲ್ಲ. ಕಾನೂನು ಸುರಕ್ಷತೆ ದೃಷ್ಟಿಯಿಂದ ಕರಾರು ಮಾಡಿಕೊಳ್ಳುವುದು ಯಾವಾಗಲೂ ಉತ್ತಮ. ಸಾಮಾನ್ಯವಾಗಿ 11 ತಿಂಗಳ ಅಗ್ರೀಮೆಂಟ್ ಇರುತ್ತದೆ. ಈ 11 ತಿಂಗಳ ಬಳಿಕ ಮಾಲೀಕರ ಇಚ್ಛಿಸಿದರೆ ಮತ್ತು ಬಾಡಿಗೆದಾರರು ಒಪ್ಪಿದರೆ ಕರಾರು ಮುಂದುವರಿಸಬಹುದು. ಅದಕ್ಕಾಗಿ ಮತ್ತೆ 11 ತಿಂಗಳಿಗೆ ಹೊಸ ಕರಾರು ಮಾಡಿಕೊಳ್ಳಬೇಕಾಗುತ್ತದೆ.

ಬಾಡಿಗೆದಾರ ಮನೆ ಖಾಲಿ ಮಾಡಲು ಒಪ್ಪದೇ ಇದ್ದರೆ?

ಬಾಡಿಗೆ ಕರಾರಿನಲ್ಲಿ ಸಾಮಾನ್ಯವಾಗಿರುವ ನಿಯಮವೆಂದರೆ ಮನೆ ಖಾಲಿ ಮಾಡುವ ಮುನ್ನ 1-3 ತಿಂಗಳು ನೋಟೀಸ್ ಕೊಡಬೇಕು ಎಂದಿರುತ್ತದೆ. ಬಾಡಿಗೆದಾರರನ್ನು ಖಾಲಿ ಮಾಡಿಸಲೂ ಮಾಲೀಕರು ಮುಂಚಿತವಾಗಿ ನೋಟೀಸ್ ಕೊಡಬೇಕು. 11 ತಿಂಗಳ ಅಗ್ರೀಮೆಂಟ್ ಮುಗಿದು, ಮನೆ ತೆರವು ಮಾಡಲು ಹೇಳಿದರೂ ಬಾಡಿಗೆದಾರ ಮನೆ ಖಾಲಿ ಮಾಡದೇ ಇದ್ದಾಗ ಮಾಲೀಕ ಏನು ಮಾಡಬೇಕು?

ಇದನ್ನೂ ಓದಿ: ಸರ್ಕಾರ ನೋಟ್ ಪ್ರಿಂಟ್ ಮಾಡಿ ಸಾಲ ತೀರಿಸಬಹುದಲ್ಲ? ಹೆಚ್ಚು ನೋಟ್ ಪ್ರಿಂಟ್ ಮಾಡಿದರೆ ಏನು ಅಪಾಯ?

ಬಾಡಿಗೆದಾರರ ಮೇಲೆ ಮಾಲೀಕ ಜಗಳ ಆಡುವುದು ತಪ್ಪು. ಮನೆಗೆ ಬೀಗ ಹಾಕುವುದೋ, ಗೇಟಿಗೆ ಬೀಗ ಹಾಕುವುದೋ, ಅಥವಾ ಮನೆಯ ಸಾಮಾನನ್ನು ಹೊರಗೆ ಹಾಕುವುದೋ, ಕರೆಂಟ್ ಕನೆಕ್ಷನ್ ಕಡಿತಗೊಳಿಸುವುದೋ, ನೀರಿನ ಕನೆಕ್ಷನ್ ಕಡಿತಗೊಳಿಸುವುದೋ ಇತ್ಯಾದಿ ಕ್ರಮಗಳು ಅಪರಾಧ ಎನಿಸುತ್ತವೆ. ಅಂಥ ತಪ್ಪನ್ನು ಮಾಲೀಕರು ಮಾಡಬಾರದು.

ಅದಕ್ಕೆ ಬದಲಾಗಿ, ಬಾಡಿಗೆದಾರರಿಗೆ ವಕೀಲರೊಬ್ಬರ ಮೂಲಕ ಲೀಗಲ್ ನೋಟೀಸ್ ಕೊಡಬೇಕು. ಬಾಡಿಗೆ ಕರಾರು ಮುಗಿದಿದೆ, ಇಂತಿಷ್ಟು ದಿನದೊಳಗೆ ಮನೆ ಖಾಲಿ ಮಾಡಿ ಎಂದು ಸಿಂಪಲ್ ಆಗಿ ನೋಟೀಸ್ ಕೊಟ್ಟರೆ ಸಾಕು.

ಖಾಲಿ ಮಾಡಿಸಬೇಕೆಂದಿರುವ ಬಾಡಿಗೆದಾರರಿಂದ ಬಾಡಿಗೆ ಪಡೆಯದಿರಿ…

ಕರಾರು ಮುಗಿದ ಬಳಿಕ ಬಾಡಿಗೆದಾರರನ್ನು ಮುಂದುವರಿಸಲು ಇಷ್ಟವಿಲ್ಲದಿದ್ದರೆ ನೀವು ಅವರಿಂದ, ನಂತರದ ತಿಂಗಳ ಬಾಡಿಗೆ ಸ್ವೀಕರಿಸಬಾರದು. ಹಾಗೆ ನೀವು ಬಾಡಿಗೆ ಸ್ವೀಕರಿಸಿದರೆ ಮನೆಯಲ್ಲಿ ವಾಸ್ತವ್ಯ ಮುಂದುವರಿಸಲು ನೀವು ಅನುಮತಿಸಿದಂತಾಗುತ್ತದೆ. ಬಾಡಿಗೆ ಹಣ ಕೊಡಲು ಮಂದಾದಾಗ, ಅದನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ. ನಿಮ್ಮ ತಿರಸ್ಕಾರವು ಲಿಖಿತ ರೂಪದಲ್ಲಿ ಇದ್ದರೆ ಉತ್ತಮ.

ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ

ಒಂದು ವೇಳೆ, ಬಾಡಿಗೆ ಬೇಡವೆಂದರೂ ಹಣವನ್ನು ಯುಪಿಐ ಪೇಮೆಂಟ್ ಮಾಡಿದರೆ ಆಗ ಮಾಲೀಕರು ಅದನ್ನು ವಾಪಸ್ ಹಾಕಿ, ವಾಟ್ಸಾಪ್ ಮೂಲಕವಾದರೂ ಮನೆ ಖಾಲಿ ಮಾಡಬೇಕಿರುವ ವಿಚಾರವನ್ನು ಕಮ್ಯೂನಿಕೇಟ್ ಮಾಡಬೇಕು. ಅಕಸ್ಮಾತ್, ಬಾಡಿಗೆದಾರ ಲೀಗಲ್ ನೋಟೀಸ್​ಗೂ ಜಗ್ಗಲಿಲ್ಲವೆಂದಾದಾಗ ಕೋರ್ಟ್​ನಲ್ಲಿ ಇವೆಲ್ಲವೂ ಪ್ರಬಲ ಸಾಕ್ಷ್ಯವಾಗಿರಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ