ಎಕ್ಸ್ನಲ್ಲಿ ಮೋದಿಗೆ ಇಲ್ಲ ಸರಿಸಾಟಿ; ಒಂದು ತಿಂಗಳ ಅತಿ ಮೆಚ್ಚಿನ 10 ಟ್ವೀಟ್ಗಳಲ್ಲಿ ಮೋದಿಯದ್ದೇ 8
Narendra Modi's 8 posts among the top-10 most liked tweets in last month: ಟ್ವಿಟ್ಟರ್ನಲ್ಲಿ (ಎಕ್ಸ್) ಕಳೆದ ಒಂದು ತಿಂಗಳಲ್ಲಿ ಅತಿಹೆಚ್ಚು ಲೈಕ್ ಪಡೆದ ಭಾರತೀಯರ ಟಾಪ್-10 ಪಟ್ಟಿಯಲ್ಲಿ ಎಂಟು ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಇದೆ. ಈ ಟಾಪ್-10ನಲ್ಲಿ ಬೇರೆ ಭಾರತೀಯ ರಾಜಕಾರಣಿಯ ಒಂದೂ ಪೋಸ್ಟ್ ಇಲ್ಲ. ರಷ್ಯಾ ಪ್ರಧಾನಿ ಪುಟಿನ್, ಅಂಧರ ತಂಡದ ವಿಶ್ವಕಪ್ ವಿಕ್ರಮ ಇತ್ಯಾದಿ ಕುರಿತ ಮೋದಿ ಅವರ ಪೋಸ್ಟ್ಗಳಿಗೆ ಅತಿಹೆಚ್ಚು ಲೈಕ್ ಬಂದಿದೆ.

ನವದೆಹಲಿ, ಡಿಸೆಂಬರ್ 19: ಎಕ್ಸ್ ಸದ್ಯ ವಿಶ್ವದ ಅತಿ ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯ ಕಿರು ಸಾಮಾಜಿಕ ಮಾಧ್ಯಮ ಎನಿಸಿದೆ. ಬಹಳ ಸುದ್ದಿಗಳು ಈ ಪ್ಲಾಟ್ಫಾರ್ಮ್ನಲ್ಲೇ ಸ್ಫೋಟಗೊಳ್ಳುತ್ತವೆ. ವಿಶ್ವದ ಬಹುತೇಕ ಸೆಲಬ್ರಿಟಿಗಳು ಎಕ್ಸ್ನಲ್ಲಿ ಉಪಸ್ಥಿತಿ ಹೊಂದಿದ್ದಾರೆ. ಎಕ್ಸ್ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ರಾಜಕಾರಣಿಗಳಲ್ಲಿ ನರೇಂದ್ರ ಮೋದಿಯೂ (Narendra Modi) ಒಬ್ಬರು. ಇವರು ಹಾಕುವ ಪೋಸ್ಟ್ಗಳಿಗೆ ಸಿಗುವ ಲೈಕ್ಗಳೇ ಇವರ ಜನಪ್ರಿಯತೆಗೆ ಅಳತೆಗೋಲೆನಿಸುತ್ತವೆ.
ಕಳೆದ ಒಂದು ತಿಂಗಳಲ್ಲಿ ಎಕ್ಸ್ನಲ್ಲಿ ಅತಿಹೆಚ್ಚು ಲೈಕ್ ಪಡೆದ ಪೋಸ್ಟ್ಗಳಲ್ಲಿ ಹೆಚ್ಚಿನವು ನರೇಂದ್ರ ಮೋದಿ ಅವರದ್ದೇ ಆಗಿದೆ. ಒಂದು ತಿಂಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಭಾರತೀಯರ ಟಾಪ್-10 ಪೋಸ್ಟ್ಗಳಲ್ಲಿ ನರೇಂದ್ರ ಮೋದಿ ಅವರ 8 ಪೋಸ್ಟ್ಗಳಿವೆ. ಪ್ರಧಾನಿಗಳ ಜನಪ್ರಿಯತೆಗೆ ಇದು ದ್ಯೋತಕ ಎನಿಸಿದೆ.
ಇದನ್ನೂ ಓದಿ: ಹುರೂನ್ ವೆಲ್ತ್ ರಿಪೋರ್ಟ್: ಮುಂಬೈಯನ್ನು ಹಿಂದಿಕ್ಕಿದ ಬೆಂಗಳೂರು ನಂ. 1
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದನ್ನು ಡಿಸೆಂಬರ್ 4ರಂದು ಪ್ರಧಾನಿಗಳು ಎಕ್ಸ್ನಲ್ಲಿ ಹಂಚಿಕೊಂಡಿದ್ದರ. ಆ ಪೋಸ್ಟ್ಗೆ 2.31 ಲಕ್ಷ ಜನರು ಲೈಕ್ ಮಾಡಿದ್ದಾರೆ. 67 ಲಕ್ಷ ಜನರು ಗಮನಿಸಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ. ಆ ಮಟ್ಟದ ಸ್ಪಂದನೆ ಮೋದಿ ಅವರ ಆ ಪೋಸ್ಟ್ಗೆ ಸಿಕ್ಕಿದೆ.
ಪುಟಿನ್ ಭೇಟಿ ಕುರಿತ ನರೇಂದ್ರ ಮೋದಿ ಅವರ ಮತ್ತಷ್ಟು ಎಕ್ಸ್ ಪೋಸ್ಟ್ಗಳಿಗೆ ಒಂದು ಲಕ್ಷಕ್ಕೂ ಅಧಿಕ ಲೈಕ್ಗಳು ಸಿಕ್ಕಿವೆ. ಭಾರತ ಮತ್ತು ರಷ್ಯಾ ಸ್ನೇಹದ ಮಹತ್ವದ ಬಗ್ಗೆ ತಿಳಿಸಿದ ಒಂದು ಪೋಸ್ಟ್ಗೆ ಎಂಟು ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ.
ಕಳೆದ ಒಂದು ತಿಂಗಳಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪ್ರಧಾನಿಗಳ ಪೋಸ್ಟ್ಗಳಲ್ಲಿ 19 ವರ್ಷದ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ, ರಾಮಜನ್ಮಭೂಮಿ ಮಂದಿರದ ಧರ್ಮ ಧ್ವಜಾರೋಹಣ್ ಉತ್ಸವ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ವಿವಾಹ ಶುಭಾಶಯ, ಅಂಧ ಮಹಿಳಾ ಕ್ರಿಕೆಟ್ ತಂಡದ ವರ್ಲ್ಡ್ ಕಪ್ ಗೆಲುವಿನ ಕುರಿತ ಬರೆದ ಪೋಸ್ಟ್ಗಳು ಒಳಗೊಂಡಿವೆ.
ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ
ಡಿಡಿ ನ್ಯೂಸ್ನಲ್ಲಿ ಈ ಕುರಿತ ಒಂದು ಪೋಸ್ಟ್
X (Twitter) now shows the most liked Tweets in a country over the past month. In India, PM @narendramodi rules the list — 8 of the top 10 most liked Tweets are his. No other politician features in the top 10, highlighting his unmatched digital reach and influence.@PMOIndia… pic.twitter.com/9ZxXlYc5TX
— DD News (@DDNewslive) December 19, 2025
ಎಕ್ಸ್ನಲ್ಲಿ ಇತ್ತೀಚೆಗಷ್ಟೇ ಈ ಹೊಸ ಫೀಚರ್ ಪರಿಚಯಿಸಲಾಗಿದೆ. ಆದರೆ, ಪ್ರೀಮಿಯಮ್ ಸಬ್ಸ್ಕ್ರಿಪ್ಷನ್ ಪಡೆದಿರುವವರಿಗೆ ಸದ್ಯ ಈ ಫೀಚರ್ ಲಭ್ಯ ಇದ್ದಂತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




