Go First: ಗೋಫಸ್ಟ್ ವಿರುದ್ಧ ತಿರುಗಿಬಿದ್ದ ಡೆಲಿವೆರಿ; ನ್ಯಾಯಮಂಡಳಿಯಿಂದ ಐಆರ್​ಪಿಗೆ ನೋಟೀಸ್ ಜಾರಿ

Delhivery Allegations Against Go First: ಗೋಫಸ್ಟ್ ಏರ್​ಲೈನ್ಸ್ ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಬರೇ ನಾಟಕ. ಅಂದು ಇನ್ಸಾಲ್ವೆನ್ಸಿಗೆ ಮೊರೆ ಹೋಗುವ ದಿನವೇ ತನ್ನಿಂದ ಹಣ ಪಡೆದಿತ್ತು. ದುರುದ್ದೇಶಪೂರ್ವಕವಾಗಿ ತನ್ನಿಂದ ಹಣ ಪಡೆದಿದೆ ಎಂದು ಡೆಲಿವರಿ ಸಂಸ್ಥೆ ಆರೋಪ ಮಾಡಿದೆ.

Go First: ಗೋಫಸ್ಟ್ ವಿರುದ್ಧ ತಿರುಗಿಬಿದ್ದ ಡೆಲಿವೆರಿ; ನ್ಯಾಯಮಂಡಳಿಯಿಂದ ಐಆರ್​ಪಿಗೆ ನೋಟೀಸ್ ಜಾರಿ
ಗೋಫಸ್ಟ್ ಏರ್​ಲೈನ್ಸ್
Follow us
|

Updated on: Jun 09, 2023 | 12:16 PM

ನವದೆಹಲಿ: ಸಾಲ ಬಿಕ್ಕಟ್ಟು ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಗೋ ಫಸ್ಟ್ ಏರ್​ಲೈನ್ಸ್ ವಿರುದ್ಧ ಸಪ್ಲೈ ಚೈನ್ ಆಪರೇಟಿಂಗ್ ಕಂಪನಿ ಡೆಲಿವೆರಿ (Delhivery) ವಂಚನೆ ದೂರು ದಾಖಲಿಸಿದೆ. ಈ ದೂರಿನ ಮೇರೆಗೆ ಈ ಪ್ರಕರಣದಲ್ಲಿ ಗೋ ಫಸ್ಟ್ (Go First Airlines) ಪರವಾಗಿ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಐಆರ್​ಪಿ ಅಭಿಷೇಕ್ ಲಾಲ್ ಅವರಿಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ನೋಟೀಸ್ ನೋಡಿದೆ. ಕರ್ನಾಟಕ ಮೂಲದ ಅಭಿಷೇಕ್ ಲಾಲ್ ಈ ಆರೋಪದ ಬಗ್ಗೆ ಎರಡು ವಾರದಲ್ಲಿ ಉತ್ತರಿಸಬೇಕಾಗಿದೆ.

ಗೋಫಸ್ಟ್ ಏರ್​ಲೈನ್ಸ್ ವಿರುದ್ಧ ಡೆಲಿವೆರಿ ಆರೋಪ ಏನು?

ಗೋಫಸ್ಟ್ ಏರ್​ಲೈನ್ಸ್ ತನ್ನ ಹಣಕಾಸು ಬಿಕ್ಕಟ್ಟು ಪರಿಹಾರಕ್ಕಾಗಿ ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಬರೇ ನಾಟಕ. ಅಂದು ಇನ್ಸಾಲ್ವೆನ್ಸಿಗೆ ಮೊರೆ ಹೋಗುವ ದಿನವೇ ತನ್ನಿಂದ ಹಣ ಪಡೆಯಲಾಗಿತ್ತು. ದುರುದ್ದೇಶಪೂರ್ವಕವಾಗಿ ತನ್ನಿಂದ ಹಣ ಪಡೆದಿದೆ ಎಂದು ಸರಕು ಸರಬರಾಜು ಸಂಸ್ಥೆಯಾದ ಡೆಲಿವರಿಯ ಆರೋಪ.

ನ್ಯಾಯಮಂಡಳಿಗೆ ಇನ್ಸಾಲ್ವೆನ್ಸಿ ಅರ್ಜಿ ಸಲ್ಲಿಸುವ ಮುನ್ನ ಸರಕು ವಸ್ತುಗಳನ್ನು ಕಾರ್ಗೊ ವಿಮಾನದಲ್ಲಿ ಸಾಗಿಸುವ ಸಂಬಂಧ ಗೋಫಸ್ಟ್ ತನ್ನಿಂದ ಸುಮಾರು 1.58 ಕೋಟಿ ರೂ ಹಣ ಪಡೆದಿತ್ತು. ಆದರೆ, ಯಾವ ಸರಕನ್ನೂ ಸಾಗಿಸಿಲ್ಲ. ಗೋಫಸ್ಟ್ ಮೇ 2ರಂದು ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತ್ತು. ಅದೇ ದಿನ ಅರ್ಜಿಗೆ ಮುನ್ನ ತನ್ನಿಂದ 57 ಲಕ್ಷ ರೂ ಪಡೆದಿತ್ತು ಎಂದು ಡೆಲಿವರಿ ತನ್ನ ದೂರಿನಲ್ಲಿ ಆರೋಪ ಮಾಡಿದೆ.

ಇದನ್ನೂ ಓದಿED Raid: ಎಸ್​ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್​ಫ್ರಾ ಕಂಪನಿ ಮೇಲೆ ಇಡಿ ರೇಡ್

ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್​ನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಇಬ್ಬರು ನ್ಯಾಯಾಧೀಶರಿರುವ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇನ್ಸಾಲ್ವೆನ್ಸಿ ಸಮಸ್ಯೆಗೆ ಪರಿಹಾರ ಹುಡುಕಲು ಗೋಫಸ್ಟ್ ಪರವಾಗಿ ಐಆರ್​ಪಿಯಾಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಲಾಲ್ ಅವರಿಗೆ ನೋಟೀಸ್ ಕೊಡಲಾಗಿದೆ. ಜುಲೈ 24ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

1 ಕೋಟಿ ರೂವರೆಗೂ ದಂಡ ಸಾಧ್ಯತೆ

ದುರುದ್ದೇಶಪೂರ್ವಕವಾಗಿ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿರುವುದು ಸಾಬೀತಾದರೆ ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್ (ಐಬಿಸಿ) ಕಾಯ್ದೆಯ ಸೆಕ್ಷನ್ 65ರ ಅಡಿಯಲ್ಲಿ 1 ಲಕ್ಷದಿಂದ 1 ಕೋಟಿ ರೂವರೆಗೆ ದಂಡ ವಿಧಿಸಲಾಗುವ ಅವಕಾಶ ಇದೆ.

ಇದನ್ನೂ ಓದಿChatGPT Maker With Modi: ಮೋದಿ ಭೇಟಿ ಮಾಡಿದ ಆಲ್ಟ್​​ಮ್ಯಾನ್; ಪ್ರಧಾನಿಗಳ ಉತ್ತರಕ್ಕೆ ಖುಷಿಗೊಂಡರಾ ಎಐ ಟ್ರೆಂಡ್​ಸೆಟ್ಟರ್?

ಗೋಫಸ್ಟ್ ಸಂಸ್ಥೆ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಲು ಏನು ಕಾರಣ?

ಗೋಫಸ್ಟ್ ಏರ್​ಲೈನ್ಸ್ ಸಂಸ್ಥೆಯ ಅರ್ಧದಷ್ಟು ವಿಮಾನಗಳು ತಾಂತ್ರಿಕ ತೊಂದರೆಯಿಂದಾಗಿ ಹಾರಾಟವಾಗದೇ ನಿಂತಿದ್ದವು. ಇದರಿಂದ ತನ್ನ ಆದಾಯ ನಿಂತುಹೋಗಿ ಸಾಲ ಮರುಪಾವತಿಯೂ ಸಾಧ್ಯವಾಗುತ್ತಿಲ್ಲ. ತನ್ನ ಸಾಲದ ಮರುರಚನೆ ಮಾಡಲಾಗುವಂತೆ ಗೋಫಸ್ಟ್ ಅರ್ಜಿ ಹಾಕಿತ್ತು.

ಗೋಫಸ್ಟ್ ಒಟ್ಟು 11,463 ಕೋಟಿ ರೂ ಸಾಲ ಹೊಂದಿರುವುದು ತಿಳಿದುಬಂದಿದೆ. ಇದರಲ್ಲಿ ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್ ಮತ್ತು ಡ್ಯೂಷೆ ಬ್ಯಾಂಕುಗಳಿಗೆ 6,521 ರೂ ಕೊಡಬೇಕು ಎಂದು ಗೋಫಸ್ಟ್ ತನ್ನ ಇನ್ಸಾಲ್ವೆನ್ಸಿ ಫೈಲಿಂಗ್ ವೇಳೆ ತಿಳಿಸಿದೆ. ಗೋ ಫಸ್ಟ್ ಏರ್​ಲೈನ್ಸ್​ಗೆ ವಿಮಾನಗಳನ್ನು ಗುತ್ತಿಗೆಗೆ ಕೊಟ್ಟಿರುವ ಸಂಸ್ಥೆಗಳು ಇದೀಗ ವಿಮಾನ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸುತ್ತಿವೆ. ಇದನ್ನು ಗೋಫಸ್ಟ್ ವಿರೋಧಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ