ಇನ್ನುಮುಂದೆ ಎಟಿಎಮ್ನಲ್ಲಿ ಹಣ ವಿತ್ಡ್ರಾ ಮಾಡಬೇಕಾದರೆ ಡೆಬಿಟ್ ಕಾರ್ಡ್ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಫೋನ್ ಜೊತೆಗಿರಬೇಕು!
ಒಟಿಪಿಯು ಸಿಸ್ಟಮ್ ಮೂಲಕ ಸೃಷ್ಟಿಯಾಗುವ 4 ಅಂಕಿಗಳ ಸಂಖ್ಯೆಯಾಗಿದ್ದು ಅದನ್ನು ಗ್ರಾಹಕನ ನೋಂದಾಯಿತ ಮೊಬೈಲ್ ನಂಬರ್ ಗೆ ಕಳಿಸಲಾಗುತ್ತದೆ. ಒಟಿಪಿ ಗ್ರಾಹಕನ ಕ್ಯಾಶ್ ವಿತ್ಡ್ರಾವಲ್ ಅನ್ನು ಅನುಮೋದಿಸುತ್ತದೆ ಮತ್ತು ಇದು ಕೇವಲ ಒಂದು ವ್ಯವಹಾರಕ್ಕೆ (ಟ್ರಾನ್ಸ್ಯಾಕ್ಷನ್) ಮಾತ್ರ ಸೀಮಿತವಾಗಿರುತ್ತದೆ.
ಎಟಿಎಮ್ ಗಳಿಂದ ಕ್ಯಾಶ್ ವಿತ್ಡ್ರಾ ಮಾಡುವ ಸಂದರ್ಭಗಳಲ್ಲಿ ಜರಗುವ ವಂಚನೆಗಳಿಂದ (fraudulent) ತನ್ನ ಗ್ರಾಹಕರು ಸಮಸ್ಯೆಗೆ ಈಡಾಗದಿರಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) (SBI) ವನ್-ಟೈಮ್ ಪಾಸ್ ವರ್ಡ್ (ಒಟಿಪಿ) (OTP) ಪದ್ಧತಿಯನ್ನು ಜಾರಿಗೆ ತಂದಿದೆ.
ಇಷ್ಟರಲ್ಲೇ ಮಿಕ್ಕಿದ ಎಲ್ಲ ಬ್ಯಾಂಕ್ಗಳು ಕ್ಯಾಶ್ ವಿತ್ ಡ್ರಾ ಮಾಡಲು ಈಗಿರುವ ಪದ್ಧತಿಗೆ ವಿದಾಯ ಹೇಳಿ ಎಸ್ ಬಿ ಜಾರಿಗೆ ತಂದಿರುವ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ.
ಗ್ರಾಹಕರು ಬ್ಯಾಂಕ್ ವ್ಯವಹಾರದಲ್ಲಿ ತೊಡಗಿರುವಾಗ ವಂಚನೆಯಾಗದಂತೆ ಹೆಚ್ಚುವರಿ ಭದ್ರತೆಯನ್ನು ಹೊಸಪದ್ಧತಿ ಒದಗಿಸುತ್ತದೆ ಎಂದು ಹೇಳಲಾಗಿದೆ. ಎಸ್ ಬಿ ಐ ಹೊರಡಿಸಿರುವ ಪ್ರಕಟಣೆಯೊಂದರ ಪ್ರಕಾರ ಗ್ರಾಹಕರು ಕ್ಯಾಶ್ ವಿತ್ ಡ್ರಾ ಮಾಡಲು ಎಟಿಎಮ್ ಕಿಯಾಸ್ಕ್ ಪ್ರವೇಶಿಸಿ ವ್ಯವಹಾರವನ್ನು ಪೂರ್ತಿಗೊಳಿಸಬೇಕಾಗುತ್ತದೆ.
ಒಟಿಪಿಯು ಸಿಸ್ಟಮ್ ಮೂಲಕ ಸೃಷ್ಟಿಯಾಗುವ 4 ಅಂಕಿಗಳ ಸಂಖ್ಯೆಯಾಗಿದ್ದು ಅದನ್ನು ಗ್ರಾಹಕನ ನೋಂದಾಯಿತ ಮೊಬೈಲ್ ನಂಬರ್ ಗೆ ಕಳಿಸಲಾಗುತ್ತದೆ. ಒಟಿಪಿ ಗ್ರಾಹಕನ ಕ್ಯಾಶ್ ವಿತ್ಡ್ರಾವಲ್ ಅನ್ನು ಅನುಮೋದಿಸುತ್ತದೆ ಮತ್ತು ಇದು ಕೇವಲ ಒಂದು ವ್ಯವಹಾರಕ್ಕೆ (ಟ್ರಾನ್ಸ್ಯಾಕ್ಷನ್) ಮಾತ್ರ ಸೀಮಿತವಾಗಿರುತ್ತದೆ.
ಸಾಲ ನೀಡುವ ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಎಸ್ ಬಿ ಐ ಒಟಿಪಿ-ಆಧಾರಿತ ಕ್ಯಾಶ್ ವಿತ್ಡ್ರಾವಲ್ ಸೇವೆಯನ್ನು ಜನೆವರಿ 1, 2020 ರಂದು ಆರಂಭಿಸಿತ್ತು. ಸಾಮಾಜಿಕ ಜಾಲತಾಣ ಮತ್ತು ಇತರ ವೇದಿಕೆಗಳ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಎಸ್ ಬಿ ಐ ಆಗಾಗ್ಗೆ ಮಾಡುತ್ತಿದೆ. ಈ ಸೇವೆಯನ್ನು ಬಳಸಿಕೊಳ್ಳಲು ಅದು ಗ್ರಾಹಕರನ್ನು ಆಗ್ರಹಿಸುತ್ತಲೇ ಇದೆ.
ಎಟಿಎಮ್ ಮೂಲಕ ರೂ. 10,000 ಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದೇ ಸಲಕ್ಕೆ ವಿತ್ ಡ್ರಾ ಮಾಡಿಕೊಳ್ಳಲು ಬಯಸುವ ಗ್ರಾಹಕರು ಒಟಿಪಿ ಮೂಲಕ ತಮ್ಮ ವ್ಯವಹಾರವನ್ನು ಪೂರ್ತಿಗೊಳಿಸಿಕೊಳ್ಳುವ ಅವಶ್ಯಕತೆಯಿದೆ.
ಒಟಿಪಿ-ಆಧಾರಿತ ಕ್ಯಾಶ್ ವಿತ್ಡ್ರಾ ಮಾಡುವ ಬಗೆ ಹೇಗೆ?
-ಎಸ್ ಬಿ ಐ ಎಟಿಎಮ್ ಒಂದರಿಂದ ಕ್ಯಾಶ್ ಮಾಡಬೇಕಾದರೆ ಡೆಬಿಟ್ ಕಾರ್ಡ್ನೊಂದಿಗೆ ಮೊಬೈಲ್ ಫೋನ್ ಕೂಡ ನಿಮ್ಮೊಂದಿಗಿರಬೇಕು.
-ನಿಮ್ ಡೆಬಿಟ್ ಕಾರ್ಡನ್ನು ಕಿಯಾಸ್ಕ್ ನಲ್ಲಿ ಇನ್ಸರ್ಟ್ ಮಾಡಿದ ಬಳಿಕ ನಿಮ್ಮ ಎಟಿಎಮ್ ಪಿನ್ ಮತ್ತು ವಿತ್ ಡ್ರಾ ಮಾಡಲಿಚ್ಛಿಸುವ ಮೊತ್ತವನ್ನು ಎಂಟರ್ ಮಾಡಬೇಕು.
– ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಎಸ್ ಎಮ್ ಎಸ್ ಮೂಲಕ ಒಟಿಪಿ ರವಾನೆಯಾಗುತ್ತದೆ.
-ಎಟಿಎಮ್ ಸ್ಕ್ರೀನ್ ಮೇಲೆ ಆ ಒಟಿಪಿ ನಂಬರನ್ನು ನಮೂದಿಸಿ.
-ಪ್ರಮಾಣಿತ ಒಟಿಪಿಯನ್ನು ನೀವು ಎಂಟರ್ ಮಾಡಿದ ಬಳಿಕ ಟ್ರಾನ್ಸ್ಯಾಕ್ಷನ್ ಪೂರ್ತಿಯಾಗುತ್ತದೆ.
Published On - 11:56 am, Mon, 25 July 22