NEFT service: ಮೇ 23ರಂದು 14 ಗಂಟೆ ಕಾಲ NEFT ಸೇವೆ ಸಿಗಲ್ಲ; ಎಷ್ಟು ಹೊತ್ತಿಂದ ಎಷ್ಟರ ತನಕ ಇಲ್ಲಿದೆ ಮಾಹಿತಿ

|

Updated on: May 18, 2021 | 8:47 PM

NEFT ಸೇವೆಗೆ ಸಂಬಂಧಿಸಿದಂತೆ ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ಸೇವೆ ದೊರೆಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ತಿಳಿಸಲಾಗಿದೆ.

NEFT service: ಮೇ 23ರಂದು 14 ಗಂಟೆ ಕಾಲ NEFT ಸೇವೆ ಸಿಗಲ್ಲ; ಎಷ್ಟು ಹೊತ್ತಿಂದ ಎಷ್ಟರ ತನಕ ಇಲ್ಲಿದೆ ಮಾಹಿತಿ
ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us on

NEFT ಸೇವೆಯು ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ದೊರಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 17ರಂದು ತಿಳಿಸಿದೆ. NEFT ಸಿಸ್ಟಮ್ ಅಪ್​ಗ್ರೇಡ್ ಆಗಬೇಕಿರುವುದರಿಂದ ಈ ಸೇವೆಯು ದೊರೆಯುವುದಿಲ್ಲ. ಮೇ 23, 2021ರ ಭಾನುವಾರ 00:01 (ರಾತ್ರಿ 12 ಗಂಟೆ 1 ನಿಮಿಷದಿಂದ) 14:00 (ಮಧ್ಯಾಹ್ನ 2 ಗಂಟೆ) ತನಕ ಸೇವೆಯು ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.

“NEFTನ ತಾಂತ್ರಿಕ ಅಪ್​ಗ್ರೇಡ್​ ಮೂಲಕ ಕಾರ್ಯಕ್ಷಮತೆ ಉತ್ತಮಗೊಳಿಸಲು ಹಾಗೂ ಬಳಕೆ ಜಾಸ್ತಿ ಮಾಡುವ ಉದ್ದೇಶದಿಂದ ಮೇ 22, 2021ರ ವ್ಯವಹಾರದ ನಂತರ ನಿಗದಿ ಆಗಿದೆ. NEFT ಸೇವೆಗಳು ಮೇ 23, 2021ರ 00:01ರಿಂದ 14:00ರ ತನಕ ದೊರೆಯುವುದಿಲ್ಲ,” ಎಂದು ಆರ್​ಬಿಐ ಹೇಳಿದೆ. ಈ ಮಧ್ಯೆ ಆರ್​ಟಿಜಿಎಸ್​ ಸೇವೆಗಳು ಮೇ 23ನೇ ತಾರೀಕು ಮಾಮೂಲಿನಂತೆ ದೊರೆಯುತ್ತವೆ. ಇದೇ ರೀತಿಯ ತಾಂತ್ರಿಕ ಅಪ್​ಗ್ರೇಡ್ ಆರ್​ಟಿಜಿಎಸ್​ ಅನ್ನು ಏಪ್ರಿಲ್​ 18, 2021ರಲ್ಲಿ ಪೂರ್ತಿ ಆಗಿದೆ ಎಂದು ಆರ್​ಬಿಐ ಹೇಳಿದೆ.

ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಕೇಂದ್ರಬ್ಯಾಂಕ್​ನಿಂದ ಸದಸ್ಯ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿದೆ. NEFT ನಿರ್ವಹಣೆ ಮಾಡುವ ಅವಧಿಯಲ್ಲಿ ಪಾವತಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೂಡ ಇದೇ ಸಂದರ್ಭದಲ್ಲಿ ತಿಳಿಸಲಾಗಿದೆ. NEFTಗೆ ಸಂಬಂಧಿಸಿದ ಅಪ್​ಡೇಟ್​ಗಳನ್ನು ಅಯಾ ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

(RBI informed that, due to upgrade and maintenance NEFT service not available for 14 hours to customers on May 23, 2021)