Petrol Diesel Rate Today: ಏರಿಕೆಯತ್ತ ಸಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯ ಹಿಂದಿರುವ ಕಾರಣವೇನು? ಇಂದು ತೈಲ ದರ ಎಷ್ಟಿದೆ ಎಂಬುದನ್ನು ಗಮನಿಸಿ
Petrol Diesel Price Today: ಇಂದು ಬುಧವಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮೇ ತಿಂಗಳಿನಲ್ಲಿ ಒಟ್ಟು 10 ಬಾರಿ ತೈಲವನ್ನು ಏರಿಸಲಾಗಿದೆ. ಹಾಗಿದ್ದರೆ ಇದಕ್ಕೆ ಕಾರಣಗಳೇನು? ಈ ಬಗ್ಗೆ ತಿಳಿಯೋಣ.
ದೆಹಲಿ: ಇಂದು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ತೈಲ ಬೆಲೆ ಸ್ಥಿರವಾಗಿದೆ ಎಂದು ವಿಶ್ಲೇಷಿಸಬಹುದು. ಮೇ ತಿಂಗಳಿನಲ್ಲಿ 4ನೇ ತಾರೀಕಿಗೆ ಮೊದಲ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಸಲಾಗಿತ್ತು. ತದ ನಂತರ ಇಲ್ಲಿಯವರೆಗೆ ಒಟ್ಟು ಹತ್ತು ಬಾರಿ ತೈಲ ದರ ಏರಿಕೆ ಕಂಡಿದೆ. ಕೇವಲ 15 ದಿನಗಳಲ್ಲಿ 10 ಬಾರಿ ಏರಿಕೆ ಕಂಡ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ನಿನ್ನೆ ಮಂಗಳವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಲಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 27 ಪೈಸೆ ಹಾಗೂ ಲೀಟರ್ ಡೀಸೆಲ್ ದರದಲ್ಲಿ 29 ಪೈಸೆಯಷ್ಟು ಏರಿಸಲಾಗಿತ್ತು. ಒಟ್ಟು ಮೇ ತಿಂಗಳಿನ ಪ್ರಾರಂಭದಿಂದ ಇಲ್ಲಿಯವರೆಗೆ ಲೀಟರ್ ಪೆಟ್ರೋಲ್ ದರದಲ್ಲಿ 2.45 ರೂಪಾಯಿ ಅದೇ ರೀತಿ ಲೀಟರ್ ಡೀಸೆಲ್ ದರದಲ್ಲಿ 2.78 ರೂಪಾಯಿ ಹೆಚ್ಚಳವಾಗಿದೆ. ದರ ಏರಿಕೆಯ ಬಳಿಕ ಪ್ರಮುಖ ಮೆಟ್ರೋ ನಗರಗಳಾದ ಸಿಲಿಕಾನ್ ಸಿಟಿ, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ಚೆನ್ನೈ ಜತೆಗೆ ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಹಾಗೆಯೇ ಗರಿಷ್ಠ ಮಟ್ಟ ತಲುಪಿದ ನಗರ ಯಾವುದು? ಎಂಬೆಲ್ಲಾ ಕುರಿತು ನೋಡೋಣ.
ಹಾಗದರೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಲು ಕಾರಣವೇನು ಎಂಬುದರ ಕುರಿತಾಗಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಆ ಕುರಿತು ನೋಡುವುದಾದರೆ, ಪ್ರಮುಖ ಎರಡು ಕಾರಣಗಳೆಂದರೆ ವಾಹನ ಇಂಧನ ಮೇಲಿನ ತೆರಿಗೆ ಮತ್ತು ಅಂತರಾಷ್ಟ್ರೀಯ ತೈಲ ಬೆಲೆ ಏರಿಕೆ. ಉದಾಹರಣೆಗೆ, ದೆಹಲಿಯಲ್ಲಿ ಮೇ 16ರಂದು ಪೆಟ್ರೋಲ್ ಬೆಲೆಯ ಮೇಲಿನ ಕೇಂದ್ರ ತೆರಿಗೆ ಶೇ. 35.5ರಷ್ಟಿದೆ. ಹಾಗೆಯೇ ರಾಜ್ಯ ತೆರಿಗೆ ಸುಮಾರು ಶೇ. 14.6ರಷ್ಟಿದೆ. 2020ರ ಸಂದರ್ಭದಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರವು ತನ್ನ ಹಣಕಾಸನ್ನು ಹೆಚ್ಚಿಸಲು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದವು. ಅದಾಗಿಯೂ ಸಾಂಕ್ಯಾಮಿಕ ರೋಗದ ಕಾರಣದಿಂದಾಗಿ ಆರ್ಥಿಕ ಹೊಡೆತ ಉಂಟಾದ್ದರಿಂದ ರಾಜ್ಯಗಳು ಈ ಯೋಚನೆಗೆ ಮುಂದಿನ ಹೆಜ್ಜೆ ಇಟ್ಟವು.
ಮುಂಬೈನಗರದಲ್ಲಿ ಇನ್ನೇನು ಶತಕ ಬಾರಿಸುವ ಅಂಚಿನಲ್ಲಿ ಪೆಟ್ರೋಲ್ ದರವಿದೆ. ನಿನ್ನೆ ಮಂಗಳವಾರ, ಸೋಮವಾದರ ದರಕ್ಕಿಂತ 26 ಪೈಸೆ ಜಿಗಿತ ಕಂಡಿದ್ದು, ಲೀಟರ್ ಪೆಟ್ರೋಲ್ ಬೆಲೆ 99.14 ರೂಪಾಯಿ ಆಗಿದೆ. ಲೀಟರ್ ಡೀಸೆಲ್ದಲ್ಲಿ 31 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಪ್ರತಿ ಲೀಟರ್ಗೆ 90.71 ರೂಪಾಯಿ ಆಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರಾಜಸ್ಥಾನ, ಮಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಸೃಷ್ಟಿಸಿದೆ.
ರಾಜಸ್ಥಾನದ ಶ್ರೀಗಂಗನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.80 ರೂಪಾಯಿ ತಲುಪಿದ್ದು, ಪ್ರತಿ ಲೀಟರ್ ಡೀಸೆಲ್ ದರ 96.30 ರೂಪಾಯಿ ಆಗಿದೆ. ಸ್ಥಳೀಯ ತೆರಿಗೆಗಳು ಮತ್ತು ವಿಧಿಸಿದ ವ್ಯಾಟ್ಗಳಿಗೆ ಅನುಸಾರವಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
ನಗರ ಪೆಟ್ರೋಲ್ ದರ (ಲೀ.) ಡೀಸೆಲ್ ದರ (ಲೀ) ದೆಹಲಿ 92.85 83.51 ಕೋಲ್ಕತಾ 92.92 86.35 ಮುಂಬೈ 99.14 90.71 ಚೆನ್ನೈ 94.54 88.34 ಬೆಂಗಳೂರು 95.94 88.53 ಹೈದರಾಬಾದ್ 96.50 91.04 ಶ್ರೀ ಗಂಗನಗರ 103.80 96.30 ಜೈಪುರ 99.30 92.18 ಪಾಟ್ನಾ 95.05 88.75 ಲಕ್ನೋ 90.57 83.89
ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html