Nirmala Sitharaman: ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್​ಟಿ ಸಂಗ್ರಹ; ಚೇತರಿಕೆಯತ್ತ ಆರ್ಥಿಕತೆ ಎಂದ ನಿರ್ಮಲಾ

| Updated By: Srinivas Mata

Updated on: Aug 02, 2021 | 11:45 AM

ಜುಲೈ ತಿಂಗಳಲ್ಲಿ ಜಿಎಸ್​ಟಿ ಆದಾಯ ಸಂಗ್ರಹ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿದ ಮೇಲೆ ಭಾರತದ ಆರ್ಥಿಕತೆಯ ಚೇತರಿಕೆ ವೇಗವನ್ನು ಪಡೆದುಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Nirmala Sitharaman: ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್​ಟಿ ಸಂಗ್ರಹ; ಚೇತರಿಕೆಯತ್ತ ಆರ್ಥಿಕತೆ ಎಂದ ನಿರ್ಮಲಾ
ಸಾಂದರ್ಭಿಕ ಚಿತ್ರ
Follow us on

ಕೊವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆ 2021ರ ಜುಲೈ ತಿಂಗಳಲ್ಲಿ ಮತ್ತೆ ಜಿಎಸ್​ಟಿ (GST) ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಆರ್ಥಿಕತೆಯು ತುಂಬ ವೇಗವಾಗಿ ಚೇತರಿಕೆ ಕಾಣುತ್ತಿರುವ ಸೂಚನೆ ಇದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ. ಜಿಎಸ್​ಟಿ ಸಂಗ್ರಹ ಪ್ರಮಾಣವು ಮುಂಬರುವ ತಿಂಗಳುಗಳಲ್ಲಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ. ಜುಲೈ ತಿಂಗಳಲ್ಲಿ 1.16 ಲಕ್ಷ ಕೋಟಿ ರೂಪಾಯಿಯಷ್ಟು ಗ್ರಾಸ್ ಜಿಎಸ್​ಟಿ ಆದಾಯ ಸಂಗ್ರಹ ಆಗಿದೆ. ಅದರಲ್ಲಿ ಸಿಜಿಎಸ್ಟಿ 22,197 ಕೋಟಿ ರೂಪಾಯಿ, ಎಸ್​ಜಿಎಸ್​ಟಿ ರೂ. 28,541 ಕೋಟಿ ರೂಪಾಯಿ, ಐಜಿಎಸ್​ಟಿ 57,864 ಕೋಟಿ ರೂ. ಮತ್ತು ಸೆಸ್ 7,790 ಕೋಟಿ ರೂ. (815 ಕೋಟಿ ರೂ. ಆಮದು ವಸ್ತುಗಳ ಮೇಲೆ ಸಂಗ್ರಹವಾದದ್ದು ಒಳಗೊಂಡಿದೆ) ಎಂದು ಹಣಕಾಸು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.

ಈ ಅಂಕಿ-ಅಂಶಗಳು ಜುಲೈ 1ರಿಂದ 31ರ ಮಧ್ಯೆ ಫೈಕ್​ ಆದ GSTR-3B ರಿಟರ್ನ್ಸ್​ನಿಂದ ಸಂಗ್ರಹವಾದದ್ದನ್ನೂ ಒಳಗೊಂಡಿದೆ. ಜತೆಗೆ ಇದೇ ಅವಧಿಯಲ್ಲಿ ಆಮದಿನ ಮೇಲೆ ಸಂಗ್ರಹವಾದ ಐಜಿಎಸ್​ಟಿ ಮತ್ತು ಸೆಸ್​ ಸಹ ಇದೆ. ಜುಲೈ 1ರಿಂದ 5ನೇ ತಾರೀಕಿನ ಮಧ್ಯೆ ರಿಟರ್ನ್ಸ್ ಫೈಲ್ ಆದ 2021ರ ಜೂನ್ ತಿಂಗಳ ಜಿಎಸ್​ಟಿ ಸಂಗ್ರಹವಾದ 4,937 ಕೋಟಿ ರೂಪಾಯಿ ಕೂಡ ಒಳಗೊಂಡಿದೆ.

ಕೊವಿಡ್ ನಿರ್ಬಂಧಗಳು ಸಡಿಲ ಆಗುತ್ತಿದ್ದಂತೆಯೇ 2021ರ ಜುಲೈ ತಿಂಗಳ ಜಿಎಸ್​ಟಿ ಸಂಗ್ರಹ ಮತ್ತೊಮ್ಮೆ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ. ಆರ್ಥಿಕತೆಯು ಬಹಳ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದು ಸೂಚನೆ ಇದು. ಜಿಎಸ್​ಟಿ ಆದಾಯದ ಹೆಚ್ಚಳ ಮುಂಬರುವ ತಿಂಗಳುಗಳಲ್ಲೂ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. ಅಂದಹಾಗೆ ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಲಾಕ್​ಡೌನ್ ಹೇರಲಾಗಿತ್ತು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ತಡೆ ಬಿದ್ದು, ಜಿಎಸ್​ಟಿ ಆದಾಯ ಸಂಗ್ರಹಕ್ಕೆ ಹಿನ್ನಡೆ ಆಗಿತ್ತು. ಈಗ ಜುಲೈ ತಿಂಗಳಲ್ಲಿ ಚೇತರಿಕೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.​

ಇದನ್ನೂ ಓದಿ: GST: ಜುಲೈ ತಿಂಗಳಲ್ಲಿ 1,16,393 ಕೋಟಿ ರೂಪಾಯಿ ಒಟ್ಟು ಜಿಎಸ್​ಟಿ ಸಂಗ್ರಹ

(Nirmala Sitharaman Said Indian Economy In Fast Pace Of Recovery After Crossing Rs 1 Lakh Crore GST In July)