GST: ಜುಲೈ ತಿಂಗಳಲ್ಲಿ 1,16,393 ಕೋಟಿ ರೂಪಾಯಿ ಒಟ್ಟು ಜಿಎಸ್​ಟಿ ಸಂಗ್ರಹ

GST Collection: ಕೊವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್​ಟಿ ಸಂಗ್ರಹ 2021ರ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂಪಾಯಿಗೂ ಮೇಲೇರಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್​ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.

GST: ಜುಲೈ ತಿಂಗಳಲ್ಲಿ 1,16,393 ಕೋಟಿ ರೂಪಾಯಿ ಒಟ್ಟು ಜಿಎಸ್​ಟಿ ಸಂಗ್ರಹ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Aug 01, 2021 | 8:04 PM

ದೆಹಲಿ: ಜುಲೈ 2021 ರಲ್ಲಿ ಒಟ್ಟು ಜಿಎಸ್​ಟಿ ಆದಾಯ ಸಂಗ್ರಹ 1,16,393 ಕೋಟಿ ರೂಪಾಯಿ ಆಗಿದ್ದು, ಆ ಪೈಕಿ ಸಿಜಿಎಸ್​ಟಿ 22,197 ಕೋಟಿ ರೂಪಾಯಿ, ಎಸ್​ಜಿಎಸ್​ಟಿ 28,541 ಕೋಟಿ ರೂಪಾಯಿ, ಐಜಿಎಸ್​ಟಿ 57,864 ಕೋಟಿ ರೂಪಾಯಿ (ಇದರಲ್ಲಿ 27,900 ಕೋಟಿ ರೂಪಾಯಿ ಆಮದು ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ) ಮತ್ತು 7,790 ಕೋಟಿ ರೂಪಾಯಿ ಸೆಸ್ ಆಗಿದೆ. (815 ಕೋಟಿ ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ). ಈ ಮೇಲಿನ ಅಂಕಿ ಅಂಶಗಳಲ್ಲಿ, 2021 ಜುಲೈ 1ರಿಂದ ಜುಲೈ 31ರವರೆಗೆ ಫೈಲ್ ಆಗಿರುವ ಜಿಎಸ್ ಟಿಆರ್-3 ಬಿ ಮತ್ತು ಐಜಿಎಸ್​ಟಿ ಮತ್ತು ಇದೇ ಅವಧಿಯಲ್ಲಿ ಆಮದು ವಸ್ತುಗಳಿಂದ ಸಂಗ್ರಹವಾದ ಸೆಸ್ ಸಹ ಸೇರಿದೆ.

2021ರ ಜುಲೈ 1ರಿಂದ 5ರವರೆಗೆ ಜಿಎಸ್​ಟಿ ರಿಟರ್ನ್ 4,937 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದನ್ನು ಜೂನ್ 2021ರ ತಿಂಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದ್ದು, ಕೊವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ಸರಾಸರಿ ವಹಿವಾಟು 5 ಕೋಟಿ ವರೆಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಜೂನ್ ತಿಂಗಳ 21ರವರೆಗೆ, ಅಂದರೆ 15 ದಿನಗಳಲ್ಲಿ ವಿಳಂಬವಾಗಿ ಪಾವತಿ ಮಾಡಿದರು ಸಹ ಬಡ್ಡಿ ಮನ್ನಾ/ವಿನಾಯ್ತಿ ಸೇರಿ ಹಲವು ಪರಿಹಾರ ಕ್ರಮಗಳನ್ನು ಪ್ರಕಟಿಸಲಾಗಿತ್ತು.

ಸರ್ಕಾರ ಮಾಮೂಲಿನಂತೆ 28,087 ಕೋಟಿ ಸಿಜಿಎಸ್​ಟಿ ಮತ್ತು 24,100 ಕೋಟಿ ಎಸ್​ಜಿಎಸ್​ಟಿ ಮೊತ್ತವನ್ನು ಪಾವತಿಸಿದೆ. ಜುಲೈ 2021ರಲ್ಲಿ ಕೇಂದ್ರ ಮತ್ತು ರಾಜ್ಯಗಳು ನಿಗದಿತ ಪಾವತಿಗಳ ನಂತರ 50,284 ಕೋಟಿ ಸಿಜಿಎಸ್​ಟಿ ಮತ್ತು 52,641 ಕೋಟಿ ಎಸ್​ಜಿಎಸ್​ಟಿ ಸಂಗ್ರಹ ಮಾಡಿದೆ.

2021ರ ಜುಲೈನಲ್ಲಿ ಸಂಗ್ರಹಿಸಿರುವ ಜಿಎಸ್​ಟಿ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 33ರಷ್ಟು ಅಧಿಕವಾಗಿದೆ. ತಿಂಗಳ ಅವಧಿಯಲ್ಲಿ ಸರಕುಗಳ ಆಮದಿನ ಆದಾಯವು ಶೇಕಡಾ 36ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಲ್ಲಿ ಬಂದ ಆದಾಯಕ್ಕಿಂತ ಶೇಕಡಾ 32ರಷ್ಟು ಹೆಚ್ಚಾಗಿದೆ.

ಜಿಎಸ್​ಟಿ ಸಂಗ್ರಹ ಸತತ 8 ತಿಂಗಳು 1 ಲಕ್ಷ ಕೋಟಿಗೂ ಅಧಿಕ ಮುಂದುವರಿದಿದೆ. ಆದರೆ ಜೂನ್ 2021ರಲ್ಲಿ 1 ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು. ಜೂನ್ ತಿಂಗಳಲ್ಲಿ ಸಂಗ್ರಹವಾಗಿದ್ದ ಮೊತ್ತ ಬಹುತೇಕ 2021ರ ಮೇ ತಿಂಗಳಿಗೆ ಸೇರಿದ್ದು, ಏಕೆಂದರೆ ಕೊವಿಡ್ ಕಾರಣದಿಂದಾಗಿ ಬಹುತೇಕ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಅಥವಾ ಭಾಗಶಃ ಲಾಕ್​ಡೌನ್ ವಿಧಿಸಿರುವುದು ಕಾರಣವಾಗಿತ್ತು.

ಕೊವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್​ಟಿ ಸಂಗ್ರಹ 2021ರ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂಪಾಯಿಗೂ ಮೇಲೇರಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್​ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ: GST: ರಾಜ್ಯಕ್ಕೆ ಬಾಕಿ ಇರುವ ಜಿಎಸ್​ಟಿ ಪರಿಹಾರ ನೀಡಲು ಕ್ರಮ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಜಿಎಸ್​ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ

(GST Collection in Month of July 2021 Report 1,16,393 Cr Rupees by Finance Ministry)

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್