ರಫ್ತು ಸಜ್ಜಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ನಂ. 1; ಕರ್ನಾಟಕದ ಸ್ಥಾನವೆಷ್ಟು?

NITI Aayog's 4th Export Preparedness Index 2024: ನೀತಿ ಆಯೋಗ್ ತನ್ನ 4ನೇ ಇಪಿಐ ಅಥವಾ ಎಕ್ಸ್​ಪೋರ್ಟ್ ಪ್ರಿಪೇರ್ಟ್ನೆಸ್ ಇಂಡೆಕ್ಸ್ ಬಿಡುಗಡೆ ಮಾಡಿದೆ. 2024ರ ಈ ಇಪಿಐ ಇಂಡೆಕ್ಸ್​ನಲ್ಲಿ ತಮಿಳುನಾಡನ್ನು ಹಿಂದಿಕ್ಕಿ ಮಹಾರಾಷ್ಟ್ರ ನಂಬರ್ 1 ರಾಜ್ಯ ಎನಿಸಿದೆ. ಉತ್ತಮ ರಫ್ತು ನೀತಿ ಮತ್ತು ಉದ್ಯಮ ವಾತಾವರಣದ ಆಧಾರದ ಮೇಲೆ ಈ ಇಂಡೆಕ್ಸ್ ರೂಪಿಸಲಾಗಿದೆ ಎನ್ನಲಾಗಿದೆ.

ರಫ್ತು ಸಜ್ಜಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ನಂ. 1; ಕರ್ನಾಟಕದ ಸ್ಥಾನವೆಷ್ಟು?
ನೀತಿ ಆಯೋಗ್

Updated on: Jan 14, 2026 | 3:34 PM

ನವದೆಹಲಿ, ಜನವರಿ 14: ರಫ್ತು ಸಜ್ಜಿತವಾಗಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ನಂಬರ್ ಒನ್ ಸ್ಥಾನಕ್ಕೆ ಏರಿದೆ. ರಫ್ತು ಪೂರಕ ನೀತಿ ಇತ್ಯಾದಿ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಂಬರ್ ಒನ್ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಿದೆ. ಇದು 2024ರ ನೀತಿ ಆಯೋಗ್​ನ ಎಕ್ಸ್​ಪೋರ್ಟ್ ಪ್ರಿಪೇರ್ಡ್​ನೆಸ್ ಇಂಡೆಕ್ಸ್​ನ (2024) ಪಟ್ಟಿಯಲ್ಲಿ (EPI- Export Preparedness Index) ಕಂಡಂತಹ ಬದಲಾವಣೆ. ಕರ್ನಾಟಕ ಈ ಇಂಡೆಕ್ಸ್​ನಲ್ಲಿ ಟಾಪ್-5ನಿಂದ ಹೊರಗಿದೆ.

ಅತಿಹೆಚ್ಚು ರಫ್ತು ಮಾಡಬಲ್ಲ ಶಕ್ತಿ ಹಾಗೂ ಸಾಧನೆಯ ಆಧಾರದ ಮೇಲೆ ನೀತಿ ಆಯೋಗ್ ಕೆಲ ವರ್ಷಗಳಿಂದ ಇಪಿಐ ಇಂಡೆಕ್ಸ್ ತಯಾರಿಸುತ್ತಿದೆ. ಆರ್ಥಿಕ ಪ್ರಗತಿಯಲ್ಲಿ ರಫ್ತು ಬಹಳ ಮುಖ್ಯ ಪಾತ್ರ ಹೊಂದಿರುತ್ತದೆ.

ಜಾಗತಿಕ ಮೌಲ್ಯ ಸರಪಳಿಯಲ್ಲಿ ದೇಶಕ್ಕೆ ಆದ್ಯತೆಯ ಸ್ಥಾನ ನೀಡಲು, ವಿದೇಶೀ ವಿನಿಮಯ ಗಳಿಸಲು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ರಫ್ತು ಬಹಳ ದೊಡ್ಡ ರೀತಿಯಲ್ಲಿ ನೆರವಾಗಬಲ್ಲುದು. ಈ ಕಾರಣಕ್ಕೆ ಸರ್ಕಾರವು ಎಲ್ಲಾ ರಾಜ್ಯಗಳನ್ನು ರಫ್ತು ಸಜ್ಜಿತಗೊಳಿಸಲು ಪ್ರಯತ್ನಗಳನ್ನು ಹಾಕುತ್ತಿದೆ. ಅದರ ಭಾಗವಾಗಿ ಎಕ್ಸ್​ಪೋರ್ಟ್ ಪ್ರಿಪೇರ್ಡ್ನೆಸ್ ಇಂಡೆಕ್ಸ್ ಕೂಡ ಇದೆ.

ಇದನ್ನೂ ಓದಿ: ಇನ್ನು 10-20 ವರ್ಷ ಮಾತ್ರ ಮನುಷ್ಯರು ಕೆಲಸ ಮಾಡಬೇಕಾಗಬಹುದು: ಇಲಾನ್ ಮಸ್ಕ್ ಹೀಗ್ಯಾಕಂದ್ರು ಗೊತ್ತಾ?

ನೀತಿ ಆಯೋಗ್​ನ ರಫ್ತು ಸಜ್ಜಿತ ರಾಜ್ಯಗಳ ಪಟ್ಟಿ 2024

  1. ಮಹಾರಾಷ್ಟ್ರ
  2. ತಮಿಳುನಾಡು
  3. ಗುಜರಾತ್
  4. ಉತ್ತರಪ್ರದೇಶ
  5. ಆಂಧ್ರಪ್ರದೇಶ
  6. ಕರ್ನಾಟಕ
  7. ಪಂಜಾಬ್

ಈ ಮೇಲಿನ ಪಟ್ಟಿಯು ದೊಡ್ಡ ರಾಜ್ಯಗಳದ್ದು. ಸಣ್ಣ ರಾಜ್ಯಗಳದ್ದೇ ಪ್ರತ್ಯೇಕ ಪಟ್ಟಿ ಮಾಡಿದಾಗ ಉತ್ತರಾಖಂಡ್ ನಂಬರ್ ಒನ್ ರಫ್ತು ಸಜ್ಜಿತ ರಾಜ್ಯವೆನಿಸುತ್ತದೆ. ಜಮ್ಮು ಕಾಶ್ಮೀರ, ನಾಗಾಲ್ಯಾಂಡ್, ದಾದ್ರಾ ನಾಗರ್ ಹವೇಲಿ, ದಾಮನ್ ಡಿಯು, ಗೋವಾ ಮತ್ತು ತ್ರಿಪುರಾ ರಾಜ್ಯಗಳು ನಂತರದ ಸ್ಥಾನ ಪಡೆಯುತ್ತವೆ.

ಇದನ್ನೂ ಓದಿ: ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ

ಇಪಿಐ ಇಂಡೆಕ್ಸ್ ರೂಪಿಸಲು ಏನು ಮಾನದಂಡ?

ರಾಜ್ಯಗಳ ರಫ್ತು ನೀತಿ, ಬ್ಯುಸಿನೆಸ್ ವಾತಾವರಣ, ಇನ್​ಫ್ರಾಸ್ಟ್ರಕ್ಚರ್ ಗುಣಮಟ್ಟ, ರಫ್ತು ಮೊತ್ತ ಇತ್ಯಾದಿ ಹಲವು ಅಂಶಗಳನ್ನು ಕೂಲಂಕಷವಾಗಿ ಪರಿಶೋಲಿಸಿ ಎಕ್ಸ್ಪೋರ್ಟ್ ಪ್ರಿಪೇರ್ಡ್ನೆಸ್ ಇಂಡೆಕ್ಸ್ ಅನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಮೂಲಗಳಿಂದ ದತ್ತಾಂಶವನ್ನು ಕಲೆ ಹಾಕಲಾಗಿದೆ. ವಿವಿಧ ಸೂಚ್ಯಂಕಗಳಿಗೆ ವಿವಿಧ ವೈಟೇಜ್ ಕೊಟ್ಟು ಅಂತಿಮವಾಗಿ ಇಪಿಐ ಅನ್ನು ರಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ