AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಲ್ ಎನ್‌ಫೀಲ್ಡ್​ಗೆ ಪೈಪೋಟಿ ನೀಡಲು ಬರುತ್ತಿದೆ ನಾರ್ಟನ್‌ನ ಈ ಎರಡು ಹೊಸ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಮತ್ತು ಟ್ರಯಂಫ್‌ಗೆ ಪೈಪೋಟಿ ನೀಡಲು ಟಿವಿಎಸ್ ಒಡೆತನದ ನಾರ್ಟನ್ ಕಂಪನಿ ಸಿದ್ಧತೆ ನಡೆಸಿದೆಯೇ? ನಾರ್ಟನ್ ಅಟ್ಲಾಸ್ ಜಿಟಿ ಮತ್ತು ಮ್ಯಾಂಕ್ಸ್ ಆರ್ ಬೈಕ್‌ಗಳ ವಿನ್ಯಾಸಕ್ಕೆ ಭಾರತದಲ್ಲಿ ಪೇಟೆಂಟ್ ಪಡೆದಿದೆ. 585 ಸಿಸಿ ಎಂಜಿನ್, 1,200 ಸಿಸಿ ವಿ4 ಎಂಜಿನ್ ಸೇರಿದಂತೆ ಈ ಎರಡು ಬೈಕ್‌ಗಳ ವಿಶೇಷತೆಗಳೇನು?.

ರಾಯಲ್ ಎನ್‌ಫೀಲ್ಡ್​ಗೆ ಪೈಪೋಟಿ ನೀಡಲು ಬರುತ್ತಿದೆ ನಾರ್ಟನ್‌ನ ಈ ಎರಡು ಹೊಸ ಬೈಕ್‌ಗಳು
Norton Bike
ಮಾಲಾಶ್ರೀ ಅಂಚನ್​
| Edited By: |

Updated on: Nov 16, 2026 | 3:33 PM

Share

ಬ್ರಿಟಿಷ್ ಮೋಟಾರ್‌ಸೈಕಲ್ ಬ್ರ್ಯಾಂಡ್ ನಾರ್ಟನ್ (Norton) ಭಾರತ ಪ್ರವೇಶಿಸುವ ಕುರಿತು ಚರ್ಚೆಗಳು ಮತ್ತೆ ಚುರುಕುಗೊಂಡಿವೆ. ಟಿವಿಎಸ್ ಒಡೆತನದ ಈ ಕಂಪನಿಯು ತನ್ನ ಎರಡು ಆಕರ್ಷಕ ಬೈಕ್‌ಗಳಾದ Atlas GT ಟೂರರ್ ಮತ್ತು Manx R ಸೂಪರ್‌ಸ್ಪೋರ್ಟ್ ಮಾದರಿಗಳ ವಿನ್ಯಾಸಕ್ಕೆ ಭಾರತದಲ್ಲಿ ಪೇಟೆಂಟ್ ನೋಂದಾಯಿಸಿದೆ. ಇದರಿಂದ ಮುಂದಿನ ವರ್ಷದ ವೇಳೆಗೆ ಈ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ ಎಂಬ ಸೂಚನೆ ದೊರೆತಿದೆ.

2020ರಲ್ಲಿ ನಾರ್ಟನ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಟಿವಿಎಸ್ ಈ ಬ್ರ್ಯಾಂಡ್‌ಗೆ ಮರುಜೀವ ನೀಡಲು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದೆ. ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಈ ಬೈಕ್‌ಗಳ ಜತೆಗೆ ಕಂಪನಿಯು 450 ಸಿಸಿ ರೋಡ್‌ಸ್ಟರ್ ಮಾದರಿಯನ್ನೂ ಹೊಂದಿದೆ. ಇವು ಭಾರತದಲ್ಲಿ ಪ್ರೀಮಿಯಂ ಬೈಕ್‌ಗಳನ್ನು ಬಯಸುವ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ನಾರ್ಟನ್ ಅಟ್ಲಾಸ್ ಜಿಟಿ: ಎಂಜಿನ್ ಮತ್ತು ವೈಶಿಷ್ಟ್ಯಗಳು

ಅಟ್ಲಾಸ್ ಜಿಟಿ ಕಂಪನಿಯ 585 ಸಿಸಿ ಅಡ್ವೆಂಚರ್ ಪ್ಲಾಟ್‌ಫಾರ್ಮ್ ಆಧಾರಿತ ಮಾದರಿಯಾಗಿದೆ. ವಿಶೇಷವಾಗಿ ಸುಸಜ್ಜಿತ ರಸ್ತೆಗಳಲ್ಲಿ ದೂರದ ಪ್ರಯಾಣ ಮಾಡುವವರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಮಾದರಿಯಲ್ಲಿರುವ ಸ್ಪೋಕ್ ವೀಲ್‌ಗಳ ಬದಲಿಗೆ ಈ ಬೈಕ್‌ನಲ್ಲಿ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ 19 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಚಕ್ರಗಳಿವೆ.

ಇದರಲ್ಲಿ 585 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 69 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 57.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆರು ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಈ ಬೈಕ್‌ನಲ್ಲಿ ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, 15.4 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್, 220 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಮತ್ತು ಹೊಂದಾಣಿಕೆ ಮಾಡಬಹುದಾದ KYB ಸಸ್ಪೆನ್ಷನ್ ನೀಡಲಾಗಿದೆ.

ಇದರ ಉನ್ನತ ಶ್ರೇಣಿಯ Apex ವೇರಿಯಂಟ್‌ನಲ್ಲಿ ಹೀಟೆಡ್ ಗ್ರಿಪ್‌ಗಳು, ಕಾರ್ನರಿಂಗ್ ಲೈಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ನ್ಯಾವಿಗೇಷನ್ ಹಾಗೂ ಗೋಪ್ರೊ ನಿಯಂತ್ರಣ ಸೌಲಭ್ಯ ಹೊಂದಿರುವ 8 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌ನಂತಹ ಆಧುನಿಕ ಫೀಚರ್ಸ್‌ಗಳಿವೆ.

Tech Tips: ಗೂಗಲ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್ ತೆಗೆದುಹಾಕುವುದು ಹೇಗೆ?

ನಾರ್ಟನ್ ಮ್ಯಾಂಕ್ಸ್ ಆರ್: ಯಾರಿಗೆ ಪೈಪೋಟಿ?

ಇನ್ನೊಂದೆಡೆ, ಮ್ಯಾಂಕ್ಸ್ ಆರ್ ಶಕ್ತಿಶಾಲಿ 1,200 ಸಿಸಿ ವಿ4 ಸೂಪರ್‌ಸ್ಪೋರ್ಟ್ ಬೈಕ್ ಆಗಿದೆ. ಇದು 200 ಬಿಎಚ್‌ಪಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಸೂಪರ್‌ಬೈಕ್‌ಗಳಿಗೆ ನೇರ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಎಂಜಿನ್ 206 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 130 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ರೇಸ್ ಟ್ರ್ಯಾಕ್‌ನಲ್ಲಿ ಉತ್ತಮ ನಿಯಂತ್ರಣ ಮತ್ತು ಸ್ಥಿರತೆ ಒದಗಿಸಲು ಈ ಬೈಕ್‌ನಲ್ಲಿ ಸಿಕ್ಸ್ ಆಕ್ಸಿಸ್ ಐಎಂಯು, ಟ್ರ್ಯಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್, ಬ್ರೆಂಬೊ ಬ್ರೇಕ್‌ಗಳು ಮತ್ತು ಪಿರೆಲ್ಲಿ ಟೈರ್‌ಗಳನ್ನು ಅಳವಡಿಸಲಾಗಿದೆ. ಕಂಪನಿಯು ಈ ಬೈಕ್ ಅನ್ನು ಸ್ಟ್ಯಾಂಡರ್ಡ್, ಅಪೆಕ್ಸ್, ಸಿಗ್ನೇಚರ್ ಮತ್ತು ಫಸ್ಟ್ ಎಡಿಷನ್ ಎಂಬ ನಾಲ್ಕು ವೇರಿಯಂಟ್‌ಗಳಲ್ಲಿ ಮಾರಾಟ ಮಾಡುತ್ತದೆ.

ಇದರ ಟಾಪ್ ಮಾದರಿಗಳಲ್ಲಿ ಕಾರ್ಬನ್ ಫೈಬರ್ ಬಾಡಿ ಮತ್ತು ಹಗುರವಾದ ಟೈಟಾನಿಯಂ ಬಿಡಿಭಾಗಗಳನ್ನು ಬಳಸಲಾಗಿದೆ. ಇದರಿಂದ ಬೈಕ್‌ನ ತೂಕವನ್ನು 201 ಕೆ.ಜಿ.ಗೆ ಇಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
ಮುಂದಿನ ಸಿನಿಮಾ ಬಗ್ಗೆ ಅಪ್​​ಡೇಟ್ ಕೊಟ್ಟ ರಮಿಕಾ ಶಿವು
ಮುಂದಿನ ಸಿನಿಮಾ ಬಗ್ಗೆ ಅಪ್​​ಡೇಟ್ ಕೊಟ್ಟ ರಮಿಕಾ ಶಿವು
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ