ನವದೆಹಲಿ, ಅಕ್ಟೋಬರ್ 23: ಭಾರತದಲ್ಲಿ ಅತಿ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ದೀಪಾವಳಿ ಪ್ರಮುಖವಾದುದು. ಈ ಹಬ್ಬದ ಸಂದರ್ಭದಲ್ಲಿ ಬ್ಯಾಂಕುಗಳು ಸತತ ನಾಲ್ಕು ದಿನ ಬಂದ್ ಆಗಿರುತ್ತವೆ. ಇದರಲ್ಲಿ ಭಾನುವಾರವೂ ಒಂದು ಒಳಗೊಂಡಿದೆ. ಅಕ್ಟೋಬರ್ 31ರಂದು ಆರಂಭವಾಗಿ ನವೆಂಬರ್ 3ರವರೆಗೂ ಸತತ ರಜೆಗಳಿವೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ 15 ರಜೆಗಳಿದ್ದವು. ಮುಂಬರುವ ನವೆಂಬರ್ ತಿಂಗಳಲ್ಲಿ ರಜಾ ದಿನಗಳ ಸಂಖ್ಯೆ 13 ಇದೆ. ಕರ್ನಾಟಕದಲ್ಲಿ ಒಟ್ಟು 9 ದಿನ ಬ್ಯಾಂಕುಗಳಿಗೆ ರಜೆ ಇದೆ. ಈ ಪಟ್ಟಿಯಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರದ ರಜೆಗಳು ಸೇರಿವೆ.
ಇದನ್ನೂ ಓದಿ: ಈ ಒಂದು ಡೀಲ್ಗಾಗಿ ಕನ್ನಡದ ಕಲರ್ಸ್ ಸೂಪರ್ ಸೇರಿ ಏಳು ಚಾನಲ್ಗಳನ್ನು ಮಾರಬೇಕಿರುವ ಅಂಬಾನಿ
ನವೆಂಬರ್ 1ರಂದು ಷೇರು ಮಾರುಕಟ್ಟೆಗೂ ರಜೆ ಇರುತ್ತದೆ. ಆದರೆ ಅಂದು ಸಂಜೆ ಆರರಿಂದ ಏಳರವರೆಗೆ ಒಂದು ಗಂಟೆ ಅವಧಿ ಮುಹೂರ್ತ ವ್ಯಾಪಾರ ನಡೆಯುತ್ತದೆ. ಅದು ಬಿಟ್ಟರೆ ಉಳಿದಂತೆ ಷೇರು ವ್ಯವಹಾರಗಳು ಅಂದು ಬೆಳಗ್ಗೆಯಿಂದ ಇರುವುದಿಲ್ಲ.
ಇದನ್ನೂ ಓದಿ: 2024-26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7ರಿಂದ 8; ಡಲಾಯ್ಟ್, ಐಎಂಎಫ್, ಆರ್ಬಿಐ ಅಂದಾಜು
ಇನ್ನು, ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ತೊಂದರೆ ಇರುವುದಿಲ್ಲ. ಆನ್ಲೈನ್ನಲ್ಲಿ ಬ್ಯಾಂಕಿಂಗ್ ಲಭ್ಯ ಇರುತ್ತದೆ. ಎಟಿಎಂ ತೆರೆದಿರುತ್ತವೆ. ಯುಪಿಐ ಪಾವತಿಯೂ ಇದ್ದೇ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Wed, 23 October 24