2024-26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7ರಿಂದ 8; ಡಲಾಯ್ಟ್, ಐಎಂಎಫ್, ಆರ್​ಬಿಐ ಅಂದಾಜು

Indian economic growth projection: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7-7.2ರಷ್ಟು ಬೆಳೆಯಬಹುದು ಎಂದು ಡಲಾಯ್ಟ್ ಇಂಡಿಯಾ ಸಂಸ್ಥೆ ಅಂದಾಜು ಮಾಡಿದೆ. ಐಎಂಎಫ್ ಪ್ರಕಾರ ಜಿಡಿಪಿ ಶೇ. 7ರಷ್ಟು ಹೆಚ್ಚಬಹುದು. ಆರ್​ಬಿಐ ಮತ್ತು ವಿಶ್ವಬ್ಯಾಂಕ್ ಕೂಡ ಬಹುತೇಕ ಇದೇ ದರದ ಬೆಳವಣಿಗೆಯನ್ನು ನಿರೀಕ್ಷಿಸಿವೆ.

2024-26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7ರಿಂದ 8; ಡಲಾಯ್ಟ್, ಐಎಂಎಫ್, ಆರ್​ಬಿಐ ಅಂದಾಜು
ಭಾರತದ ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2024 | 12:01 PM

ನವದೆಹಲಿ, ಅಕ್ಟೋಬರ್ 23: ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಭಾರತದ ಆರ್ಥಿಕತೆ ಶೇ. 7ರಿಂದ 7.20ರಷ್ಟು ಬೆಳವಣಿಗೆ ಹೊಂದಬಹುದು ಎಂದು ಡಲಾಯ್ಟ್ ಇಂಡಿಯಾ ಸಂಸ್ಥೆ ಅಂದಾಜು ಮಾಡಿದೆ. ಸರ್ಕಾರದಿಂದ ಆಗುತ್ತಿರುವ ಬಂಡವಾಳ ವೆಚ್ಚ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಆಗುತ್ತಿರುವ ಅಧಿಕ ಹೂಡಿಕೆಗಳಿಂದಾಗಿ ಜಿಡಿಪಿ ಹೆಚ್ಚಳ ಉತ್ತಮವಾಗಿರಬಹುದು ಎಂದು ಅದು ಹೇಳಿದೆ. ಆದರೆ, ಜಾಗತಿಕ ಆರ್ಥಿಕತೆ ಮಂದವಾಗಿರುವದರಿಂದ ಮುಂದಿನ ಹಣಕಾಸು ವರ್ಷದಲ್ಲಿ (2025-26) ಭಾರತದ ಬೆಳವಣಿಗೆಯೂ ತುಸು ಮಂದಗೊಳ್ಳಬಹುದು ಎಂದು ಡಲಾಯ್ಟ್ ನಿರೀಕ್ಷಿಸಿದೆ. ಅದರ ಪ್ರಕಾರ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.5ರಿಂದ ಶೇ. 6.8ರ ಶ್ರೇಣಿಯಲ್ಲಿ ಇರಬಹುದು.

ಆರ್​ಬಿಐ ಡೆಪ್ಯುಟಿ ಗವರ್ನರ್ ಹೆಚ್ಚು ಆಶಾದಾಯಕ

2025-26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆರ್​ಬಿಐ ಉಪ ಗವರ್ನರ್ ದೇಬಬ್ರತಾ ಪಾತ್ರ ಹೆಚ್ಚು ಆಶಾದಾಯಕವಾಗದ್ದಾರೆ. ಅಮೆರಿಕದ ನ್ಯೂಯಾರ್ಕ್​ನಲ್ಲಿ ಮೊನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಪಾತ್ರ, 2025-26ರ ಬಳಿಕ ಭಾರತದ ಆರ್ಥಿಕತೆ ಶೇ. 8ಕ್ಕಿಂತಲೂ ಹೆಚ್ಚಿನ ದರದಲ್ಲಿ ಬೆಳೆಯಬಹುದು ಎಂದಿದ್ದಾರೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಬಸ್, ಸೈಕ್ಲಿಂಗ್ ಟ್ರ್ಯಾಕ್, ವಾಕಿಂಗ್… ಹೇಗಿದೆ ನೋಡಿ ಕೇಂದ್ರದ ಅರ್ಬನ್ ಮೊಬಿಲಿಟಿ ಮಿಷನ್

ಆದರೆ, 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.2, ಮತ್ತು 2025-26ರಲ್ಲಿ ಶೇ. 7ರಷ್ಟು ಬೆಳೆಯಬಹುದು ಎಂಬುದು ಆರ್​ಬಿಐ ಡೆಪ್ಯುಟಿ ಗವರ್ನರ್ ಅನಿಸಿಕೆ.

ಈ ವರ್ಷ ಭಾರತದ ಜಿಡಿಪಿ ಹೆಚ್ಚಳ ಶೇ. 7: ಐಎಂಎಫ್ ಅಂದಾಜು

ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 7ರಷ್ಟು ಇರಲಿದೆ ಎಂದು ಐಎಂಎಫ್ ಜುಲೈನಲ್ಲಿ ಮಾಡಿದ್ದ ತನ್ನ ಅಂದಾಜನ್ನು ಈಗಲೂ ಪುನರುಚ್ಚರಿಸಿದೆ. ಆದರೆ, 2025-26ರ ಹಣಕಾಸು ವರ್ಷಕ್ಕೆ ಅದು ಶೇ. 6.5ರಷ್ಟು ಬೆಳವಣಿಗೆಯನ್ನು ಮಾತ್ರ ನಿರೀಕ್ಷಿಸಿದೆ.

ಇದನ್ನೂ ಓದಿ: ದೇಶಾದ್ಯಂತ ಜನೌಷಧ ಕೇಂದ್ರಗಳಲ್ಲಿ ಆದ ಒಟ್ಟು ಬಿಸಿನೆಸ್ ಈ ವರ್ಷ 1,000 ಕೋಟಿ ರೂಗಿಂತಲೂ ಹೆಚ್ಚು

ಆರ್​ಬಿಐನ ಅಧಿಕೃತ ಅಂದಾಜಿನ ಪ್ರಕಾರ 2024-25ರಲ್ಲಿ ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು. ಇನ್ನು, ವಿಶ್ವಬ್ಯಾಂಕ್ ಶೇ. 7ರ ದರವನ್ನು ಅಂದಾಜು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ