AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಾದ್ಯಂತ ಜನೌಷಧ ಕೇಂದ್ರಗಳಲ್ಲಿ ಆದ ಒಟ್ಟು ಬಿಸಿನೆಸ್ ಈ ವರ್ಷ 1,000 ಕೋಟಿ ರೂಗಿಂತಲೂ ಹೆಚ್ಚು

Jan Aushadhi outlets total business this year: ಈ ವರ್ಷ ಅಕ್ಟೋಬರ್​ವರೆಗೂ ದೇಶಾದ್ಯಂತ ಜನೌಷಧಿ ಕೇಂದ್ರಗಳಲ್ಲಿ ನಡೆದಿರುವ ಒಟ್ಟಾರೆ ಬಿಸಿನೆಸ್ 1,000 ಕೋಟಿ ರೂ ದಾಟಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 200 ಕೋಟಿ ರೂ ಬಿಸಿನೆಸ್ ನಡೆದಿತ್ತು. ದೇಶಾದ್ಯಂತ ಜನೌಷಧಿ ಮಳಿಗೆಗಳ ಸಂಖ್ಯೆ 14,000 ಇದೆ. ಮುಂದಿನ ಎರಡು ವರ್ಷದಲ್ಲಿ ಇನ್ನೂ 10,000ಕ್ಕೂ ಹೆಚ್ಚು ಮಳಿಗೆಗಳ ಸ್ಥಾಪನೆಯಾಗುವ ಸಾಧ್ಯತೆ ಇದೆ.

ದೇಶಾದ್ಯಂತ ಜನೌಷಧ ಕೇಂದ್ರಗಳಲ್ಲಿ ಆದ ಒಟ್ಟು ಬಿಸಿನೆಸ್ ಈ ವರ್ಷ 1,000 ಕೋಟಿ ರೂಗಿಂತಲೂ ಹೆಚ್ಚು
ಜನೌಷಧಿ ಕೇಂದ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2024 | 3:45 PM

Share

ನವದೆಹಲಿ, ಅಕ್ಟೋಬರ್ 22: ದೇಶಾದ್ಯಂತ ಇರುವ ಜನೌಷಧಿ ಕೇಂದ್ರಗಳ ಒಟ್ಟಾರೆ ಬಿಸಿನೆಸ್ ಈ ವರ್ಷ 1,000 ಕೋಟಿ ರೂ ಗಡಿದಾಟಿದೆ. ಅಕ್ಟೋಬರ್ ತಿಂಗಳಲ್ಲೇ ಸಾವಿರ ಕೋಟಿ ರೂ ಗಡಿ ದಾಟಿರುವುದು ಇದೇ ಮೊದಲು. 2023ರಲ್ಲಿ ಜನೌಷಧಿ ಕೇಂದ್ರಗಳು ಸಾವಿರ ಕೋಟಿ ರೂ ಬಿಸಿನೆಸ್ ಕಾಣಲು ಡಿಸೆಂಬರ್​ವರೆಗೂ ಕಾಯಬೇಕಾಗಿತ್ತು. ಈ ವರ್ಷ (2024) ಅಕ್ಟೋಬರ್ ತಿಂಗಳಲ್ಲೇ 1,000 ಕೋಟಿ ರೂ ಮೊತ್ತದ ಔಷಧಗಳ ಮಾರಾಟ ಮಾಡಿವೆ ಜನೌಷಧಿ ಸೆಂಟರ್​ಗಳು.

ದೇಶಾದ್ಯಂತ 14,000 ಜನೌಷಧಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಫಾರ್ಮಾಸ್ಯೂಟಿಕಲ್ಸ್ ಅಂಡ್ ಮೆಡಿಕಲ್ ಡಿವೈಸಸ್ ಬ್ಯೂರೋ (ಪಿಎಂಬಿಐ) ಈ ಮಳಿಗೆಗಳಿಗೆ ಔಷಧ ಪೂರೈಸುತ್ತದೆ. 2024ರಲ್ಲಿ ಜನೌಷಧಿ ಕೇಂದ್ರಗಳು ಅತಿ ಹೆಚ್ಚು ಬಿಸಿನೆಸ್ ಕಾಣುತ್ತಿವೆ. ಸೆಪ್ಟಂಬರ್​ನ ಒಂದೇ ತಿಂಗಳಲ್ಲಿ 200 ಕೋಟಿ ರೂ ಮೊತ್ತದ ಔಷಧಗಳ ಸೇಲ್ಸ್ ನಡೆದಿತ್ತು. 2023-24ರ ಹಣಕಾಸು ವರ್ಷದಲ್ಲಿ 1,235 ಕೋಟಿ ರೂ ವ್ಯಾಪಾರ ನಡೆದಿತ್ತು. ಈ ಹಣಕಾಸು ವರ್ಷದಲ್ಲಿ ಆ ದಾಖಲೆಯನ್ನು ಮುರಿಯುವ ನಿರೀಕ್ಷೆ ಇದೆ.

‘ಗುಣಮಟ್ಟದ ಮತ್ತು ಅಗ್ಗದ ದರ ಔಷಧಗಳನ್ನು ನೀಡುವ ಜನೌಷಧಿ ಕೇಂದ್ರಗಳ ಬಗ್ಗೆ ಜನರಿಗೆ ಇರುವ ನಂಬಿಕೆ ಮತ್ತು ಭರವಸೆಯನ್ನು ಇದು ತೋರಿಸುತ್ತದೆ. ಸಾರ್ವಜನಿಕರ ಈ ವಿಶ್ವಾಸದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ,’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಉಡಾನ್ ಸ್ಕೀಮ್ ಮತ್ತಷ್ಟು 10 ವರ್ಷ ವಿಸ್ತರಿಸಿದ ಸರ್ಕಾರ; ಏನಿದು ಯೋಜನೆ?

ಏನಿದು ಜನೌಷಧಿ ಕೇಂದ್ರ ಯೋಜನೆ?

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಮೂಲತಃ ಆರಂಭವಾಗಿದ್ದು 2008ರಲ್ಲಿ. ಆದರೆ, 2015ರಲ್ಲಿ ಇದನ್ನು ಹೊಸ ರೂಪುರೇಖೆಯೊಂದಿಗೆ ಪುನಾರಂಭಗೊಳಿಸಲಾಯಿತು. 2014ರಲ್ಲಿ ದೇಶಾದ್ಯಂತ ಇದ್ದ ಜನೌಷಧಿ ಮಳಿಗೆಗಳ ಸಂಖ್ಯೆ 80 ಮಾತ್ರವೇ. ಈಗ ಅವುಗಳ ಸಂಖ್ಯೆ 14,000 ದಾಟಿದೆ. ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಮಳಿಗೆಗಳಿವೆ. ಮುಂದಿನ ಎರಡು ವರ್ಷದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 25,000ಕ್ಕೆ ಹೆಚ್ಚಿಸಲು ಸರ್ಕಾರ ಗುರಿ ಇಟ್ಟಿದೆ.

ಹೆಚ್ಚಿನ ಔಷಧಿಗಳ ತಯಾರಿಕೆಯ ವೇಳೆ ಪೇಟೆಂಟ್ ಮತ್ತು ರಾಯಲ್ಟಿ ನೀಡಲೇ ಹೆಚ್ಚಿನ ಖರ್ಚಾಗುತ್ತದೆ. ಹೀಗಾಗಿ, ಔಷಧಗಳ ರೀಟೇಲ್ ಬೆಲೆ ನೈಜ ಮೌಲ್ಯಕ್ಕಿಂತ ಹೆಚ್ಚೇ ಇರುತ್ತದೆ. ಆದರೆ, ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಮೆಡಿಸಿನ್​ಗಳನ್ನು ಅಗ್ಗದ ಬೆಲೆಗೆ ಮಾರಲಾಗುತ್ತದೆ. ಜೆನೆರಿಕ್ ಎಂದರೆ ಪೇಟೆಂಟ್ ಇಲ್ಲದ ಮತ್ತು ರಾಯಲ್ಟಿ ಕೊಡುವ ಅಗತ್ಯ ಇಲ್ಲದ ಔಷಧವಾಗಿರುತ್ತದೆ. ಇದರಿಂದಾಗಿ, ಜೆನೆರಿಕ್ ಔಷಧಗಳ ಬೆಲೆ ಕಡಿಮೆ ಇರುತ್ತದೆ. ಸರ್ಕಾರ ಕೂಡ ಇಂಥ ಆಯ್ದ ಜೆನೆರಿಕ್ ಔಷಧಗಳನ್ನು ನಿಗದಿತ ದರದೊಳಗೆ ತಯಾರಿಸಿಕೊಡಬೇಕೆಂದು ಫಾರ್ಮಾ ಕಂಪನಿಗಳಿಗೆ ಸೂಚಿಸುತ್ತದೆ.

ಇದನ್ನೂ ಓದಿ: ‘ಮಹತ್ವದ ಜಾಗತಿಕ ಪಾತ್ರಕ್ಕೆ ಭಾರತ ಸಿದ್ಧ’: ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ

ಸದ್ಯ, ಪಿಎಂ ಭಾರತೀಯ ಜನೌಷಧಿ ಪರಿಯೋಜನಾ ಸ್ಕೀಮ್​ನಲ್ಲಿ 2,047 ಜೆನೆರಿಕ್ ಮೆಡಿಸಿನ್​ಗಳು ಹಾಗೂ 300 ಸರ್ಜಿಕಲ್ ಸಾಧನಗಳು ಒಳಗೊಂಡಿವೆ. ಬಹುತೇಕ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಈ ಔಷಧಗಳು ಬಳಕೆ ಆಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್