AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಒಂದು ಡೀಲ್​ಗಾಗಿ ಕನ್ನಡದ ಕಲರ್ಸ್ ಸೂಪರ್ ಸೇರಿ ಏಳು ಚಾನಲ್​ಗಳನ್ನು ಮಾರಬೇಕಿರುವ ಅಂಬಾನಿ

CCI condition for Reliance-Disney deal: ಡಿಸ್ನಿ ಸಂಸ್ಥೆಯ ಸ್ಟಾರ್ ಇಂಡಿಯಾದ ಬಿಸಿನೆಸ್ ಖರೀದಿಸಲು ಪ್ರಯತ್ನಿಸುತ್ತಿರುವ ರಿಲಾಯನ್ಸ್ ಗ್ರೂಪ್​ಗೆ ಕಾಂಪಿಟೀಶನ್ ಕಮಿಷನ್ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಮಾಧ್ಯಮಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಉಳಿಸುವ ಉದ್ದೇಶದಿಂದ ಸಿಸಿಐ ಒಂದು ಷರತ್ತು ಹಾಕಿದೆ. ತನ್ನ ಏಳು ವಾಹಿನಿಗಳನ್ನು ಮಾರುವಂತೆ ರಿಲಾಯನ್ಸ್ ಗ್ರೂಪ್​ಗೆ ಸಿಸಿಐ ಸೂಚಿಸಿದೆ.

ಈ ಒಂದು ಡೀಲ್​ಗಾಗಿ ಕನ್ನಡದ ಕಲರ್ಸ್ ಸೂಪರ್ ಸೇರಿ ಏಳು ಚಾನಲ್​ಗಳನ್ನು ಮಾರಬೇಕಿರುವ ಅಂಬಾನಿ
ಮುಕೇಶ್ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2024 | 2:49 PM

Share

ಮುಂಬೈ, ಅಕ್ಟೋಬರ್ 23: ಸ್ಟಾರ್ ಇಂಡಿಯಾದ ಬಿಸಿನೆಸ್ ಅನ್ನು ಖರೀದಿಸಲು ರಿಲಾಯನ್ಸ್ ಗ್ರೂಪ್ ಸಂಸ್ಥೆ ಡಿಸ್ನಿ ಜೊತೆ ನಡೆಸುತ್ತಿರುವ ಮಾತುಕತೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಇದೇ ವೇಳೆ, ಭಾರತೀಯ ಸ್ಪರ್ಧಾ ಆಯೋಗವು ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿದೆಯಾದರೂ, ಒಂದು ಪ್ರಮುಖ ಷರತ್ತನ್ನೂ ಮುಂದಿಟ್ಟಿದೆ. ರಿಲಾಯನ್ಸ್ ಗ್ರೂಪ್ ತನ್ನ ಕೆಲ ಟಿವಿ ಚಾನಲ್​ಗಳನ್ನು ಮಾರಬೇಕು ಎಂಬುದು ಆ ಷರತ್ತು.

ರಿಲಾಯನ್ಸ್ ಗ್ರೂಪ್ ತನ್ನ ಹಂಗಾಮ, ಸೂಪರ್ ಹಂಗಾಮ, ಸ್ಟಾರ್ ಜಲ್ಷಾ ಮೂವೀಸ್, ಕಲರ್ಸ್ ಮರಾಠಿ ಸೇರಿದಂತೆ ಏಳು ಚಾನಲ್​ಗಳನ್ನು ರಿಲಾಯನ್ಸ್ ಮಾರಬೇಕಾಗುತ್ತದೆ. ಇದರಲ್ಲಿ ಕನ್ನಡದ ಕಲರ್ಸ್ ಸೂಪರ್ ಕೂಡ ಒಳಗೊಂಡಿದೆ.

ಇದನ್ನೂ ಓದಿ: ಹೊಸ ಯುಪಿಐ ಬಳಕೆದಾರರನ್ನು ಹೊಂದಲು ಪೇಟಿಎಂಗೆ ಎನ್​ಪಿಸಿಐ ಅನುಮತಿ; ಷರತ್ತುಗಳು ಅನ್ವಯ

ಚಾನಲ್​ಗಳನ್ನು ಮಾರಲು ರಿಲಾಯನ್ಸ್​ಗೆ ಷರತ್ತು ಹಾಕಿರುವುದು ಯಾಕೆ?

ಸ್ಟಾರ್ ಇಂಡಿಯಾ ಮತ್ತು ರಿಲಾಯನ್ಸ್ ಎರಡೂ ಸೇರಿದರೆ ಮಾಧ್ಯಮ ಲೋಕದಲ್ಲಿ ಸೂಪರ್ ಜೇಂಟ್ ಸೃಷ್ಟಿಯಾಗುತ್ತದೆ. ಮನರಂಜನೆ ಮತ್ತು ಕ್ರೀಡೆಯ ಬ್ರಾಡ್​ಕ್ಯಾಸ್ಟಿಂಗ್ ಕ್ಷೇತ್ರದಲ್ಲಿ ಇದರದ್ದೇ ಪಾರಮ್ಯ ಇರಲಿದೆ. ಈ ಕಂಪನಿಗೆ ಹೆಚ್ಚಿನ ಪ್ರತಿಸ್ಪರ್ಧೆಯೇ ಇಲ್ಲದಂತಾಗುತ್ತದೆ. ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಕಂಪನಿಗಳನ್ನು ಮಾರುವಂತೆ ರಿಲಾಯನ್ಸ್​ಗೆ ಸಿಸಿಐ ಸೂಚಿಸಿದೆ.

ಉದ್ಯಮದಲ್ಲಿ ಸ್ಪರ್ಧಾತ್ಮಕತೆ ನೆಲಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಪಿಟೀಶನ್ ಕಮಿಷನ್​ನ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ, ಗೂಗಲ್ ಮೊದಲಾದ ಸಂಸ್ಥೆಗಳಿಗೆ ಸಿಸಿಐ ಆಗಾಗ್ಗೆ ಮೂಗುದಾರ ಹಾಕಲು ನೋಡುತ್ತಿರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ರೈತರಿಗೆ ಕಾರ್ಬನ್ ಕ್ರೆಡಿಟ್; ಎಂಟು ರಾಜ್ಯಗಳ ರೈತರಿಗೆ ಅವಕಾಶ

ರಿಲಾಯನ್ಸ್, ಡಿಸ್ನಿ ಒಟ್ಟು ಸೇರಿದರೆ ಸೂಪರ್ ಜೈಂಟ್…

ಐಪಿಎಲ್, ಐಸಿಸಿ ಕ್ರಿಕೆಟ್ ಟೂರ್ನಿಗಳು, ಬಿಸಿಸಿಐ ಕ್ರಿಕೆಟ್, ವಿಂಬಲ್ಡನ್, ಪ್ರೋಕಬಡ್ಡಿ ಇತ್ಯಾದಿ ಕ್ರೀಡಾ ಪ್ರಸಾರದ ಹಕ್ಕುಗಳು ಸ್ಟಾರ್-ರಿಲಾಯನ್ಸ್ ಗುಂಪಿಗೆ ಹೋಗುತ್ತವೆ. ಹೀಗಾದರೆ, ಜಾಹೀರಾತಿ ದರಕ್ಕೆ ಕಡಿವಾಣ ಇಲ್ಲದಂತಾಗುತ್ತದೆ. ಕೇಳಿದಷ್ಟು ದರಕ್ಕೆ ಜಾಹೀರಾತು ನೀಡಬೇಕಾಗುತ್ತದೆ ಎಂಬುದು ಅಡ್ವರ್ಟೈಸ್ಮೆಂಟ್ ಉದ್ಯಮದ ಅಳಲಾಗಿದೆ. ಆದರೆ, ರಿಲಾಯನ್ಸ್ ಗ್ರೂಪ್ ಮತ್ತು ಡಿಸ್ನಿ ಎರಡೂ ಸಂಸ್ಥೆಗಳು ತಾವು ಜಾಹೀರಾತು ದರಗಳನ್ನು ಅಸಹಜವಾಗಿ ಏರಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ