ಮೋದಿಯ ಆ ಮಾತು ಸರಿ ಅನಿಸಿತು… ಭಾರತದೊಂದಿಗೆ ಸೇರಿ ಚಿಪ್ ತಯಾರಿಸಲು ಸಜ್ಜಾದ ವಿಶ್ವ ದೈತ್ಯ ನಿವಿಡಿಯಾ

Nvidia CEO Jensen Huang speaks: ವಿಶ್ವದ ಎರಡನೇ ಅತಿಹೆಚ್ಚು ಮೌಲ್ಯದ ಕಂಪನಿ ಎನಿಸಿದ ನಿವಿಡಿಯಾ ಇದೀಗ ಭಾರತದೊಂದಿಗೆ ಜಂಟಿಯಾಗಿ ಚಿಪ್ ಡಿಸೈನ್ ಮಾಡಲು ಯೋಜಿಸಿದೆ. ಕೆಲ ತಿಂಗಳ ಹಿಂದೆ ಜೆನ್ಸೆನ್ ಅವರು ಮೋದಿ ಭೇಟಿ ಮಾಡಿದ ಸಂದರ್ಭದಲ್ಲೇ ಈ ಪ್ರಸ್ತಾಪ ಮಾಡಿದ್ದರೆನ್ನಲಾಗಿದೆ. ಆ ಭೇಟಿ ವೇಳೆ ನರೇಂದ್ರ ಮೋದಿ ಹೇಳಿದ ಕೆಲ ಮಾತುಗಳನ್ನು ಜೆನ್ಸೆನ್ ನೆನಪಿಸಿಕೊಂಡಿದ್ದಾರೆ.

ಮೋದಿಯ ಆ ಮಾತು ಸರಿ ಅನಿಸಿತು... ಭಾರತದೊಂದಿಗೆ ಸೇರಿ ಚಿಪ್ ತಯಾರಿಸಲು ಸಜ್ಜಾದ ವಿಶ್ವ ದೈತ್ಯ ನಿವಿಡಿಯಾ
ಜೆನ್ಸೆನ್ ಹುವಾಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2024 | 6:00 PM

ನವದೆಹಲಿ, ಅಕ್ಟೋಬರ್ 23: ವಿಶ್ವದ ಅತಿದೊಡ್ಡ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾದ ನಿವಿಡಿಯಾ ಇದೀಗ ಭಾರತದಲ್ಲಿ ಫ್ಯಾಕ್ಟರಿ ತೆರೆಯಲು ಆಸಕ್ತಿ ತೋರಿದೆ. ಭಾರತದೊಂದಿಗೆ ಸೇರಿ ಜಂಟಿಯಾಗಿ ಚಿಪ್ ತಯಾರಿಸುತ್ತೇವೆ ಎಂದು ನಿವಿಡಿಯಾ ಸಂಸ್ಥೆ ಆಫರ್ ಮುಂದಿಟ್ಟಿದೆ. ನಿವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಅವರೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಮುಂದೆ ಈ ಪ್ರಸ್ತಾಪ ಇಟ್ಟಿದ್ದರೆನ್ನಲಾಗಿದೆ. ಕೆಲ ತಿಂಗಳ ಹಿಂದೆ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರನ್ನು ಜೆನ್ಸೆನ್ ಭೇಟಿಯಾಗಿ ಮಾತನಾಡಿದ್ದರು. ಆ ವೇಳೆ ಅವರು ಭಾರತದಲ್ಲಿ ಚಿಪ್ ತಯಾರಿಕೆಯ ಪ್ರಸ್ತಾಪ ಮಾಡಿದ್ದಾರೆ.

ನಿವಿಡಿಯಾ ಸಂಸ್ಥೆ ಉತ್ಕೃಷ್ಟ ಮಟ್ಟದ ಪ್ರಬಲ ಜಿಪಿಯು ಚಿಪ್​ಗಳನ್ನು ತಯಾರಿಸುತ್ತದೆ. ಈಗ ಟ್ರೆಂಡಿಂಗ್​ನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ಮತ್ತು ಸೂಪರ್ ಕಂಪ್ಯೂಟರುಗಳಿಗೆ ಈ ಜಿಪಿಯುಗಳ ಬಹಳ ಅಗತ್ಯ. ಅಂತೆಯೇ, ಈ ಚಿಪ್​ಗಳಿಗೆ ಜಾಗತಿಕವಾಗಿ ಬಹಳವೇ ಬೇಡಿಕೆ ಇದೆ.

ಮೋದಿ ಅವರ ಆ ಒಂದು ಸರಿ ಎನಿಸಿತು ಎಂದ ಹುವಾಂಗ್

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಜೆನ್ಸೆನ್ ಹುವಾಂಗ್ ಭಾರತಕ್ಕೆ ಬಂದಿದ್ದರು. ಆಗ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದರು. ಆಗ ಮೋದಿ ಹೇಳಿದ ಕೆಲ ಮಾತನ್ನು ಜೆನ್ಸೆನ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಈ ಒಂದು ಡೀಲ್​ಗಾಗಿ ಕನ್ನಡದ ಕಲರ್ಸ್ ಸೂಪರ್ ಸೇರಿ ಏಳು ಚಾನಲ್​ಗಳನ್ನು ಮಾರಬೇಕಿರುವ ಅಂಬಾನಿ

‘ಜೆನ್ಸನ್ ಅವರೆ, ಭಾರತ ಹಿಟ್ಟನ್ನು ಮಾರಿ ರೊಟ್ಟಿ ಕೊಳ್ಳುವಂತಾಗಬಾರದು ಅಂತ ನನಗೆ ಮೋದಿ ಹೇಳಿದರು. ಅವರ ಮಾತು ಬಹಳ ಸರಿ ಎನಿಸಿತು. ಕಚ್ಛಾ ವಸ್ತು ರಫ್ತು ಮಾಡಿ, ಅದರಿಂದಾಗುವ ಉತ್ಪನ್ನವನ್ನು ಯಾಕೆ ಆಮದು ಮಾಡಿಕೊಳ್ಳಬೇಕು? ಭಾರತದ ಡಾಟಾ ರಫ್ತು ಮಾಡಿ ಎಐ ಅನ್ನು ಆಮದು ಮಾಡಿಕೊಳ್ಳುವುದು ಯಾಕೆ?’ ಎಂದು ನಿವಿಡಿಯಾ ಸಿಇಒ ಮಾಹಿತಿ ನೀಡಿದ್ದಾರೆ.

ಭಾರತ ಮತ್ತು ಜರ್ಮನಿಗೆ ಮಾತ್ರ ಸಾಧ್ಯ

ನಿವಿಡಿಯಾ ಸಂಸ್ಥೆಯೇನಾದರೂ ಭಾರತದ ಜೊತೆ ಜಂಟಿಯಾಗಿ ಚಿಪ್ ಡೆವಲಪ್ ಮಾಡುತ್ತದೆ ಎಂದಾದಲ್ಲಿ, ಚಿಪ್​ನ ಮುಖ್ಯಭಾಗವನ್ನು ಅದರ ಡಿಸೈನ್ ಪಾರ್ಟ್ನರ್​ಗಳಾದ ಎಎಂಡಿ ಅಥವಾ ಆರ್ಮ್ ಇತ್ಯಾದಿ ಸಂಸ್ಥೆಗಳ ಮೂಲಕ ಡಿಸೈನ್ ಮಾಡಿಸಬಹುದು. ಮೇಲಿನ ಶೇ. 10ರಿಂದ 20 ಲೇಯರ್ ಅನ್ನು ಭಾರತದ ಸರ್ಕಾರಿ ಸ್ವಾಮ್ಯದ ಸಿಡಾಕ್ ಅಥವಾ ಖಾಸಗಿ ಚಿಪ್ ಡಿಸೈನ್ ಕಂಪನಿಯಿಂದ ಮಾಡಿಸಬಹುದು ಎಂದು ಭಾರತದ ಅಧಿಕಾರಿಗಳು ವಿವರಿಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ನಿವಿಡಿಯಾ ಜೊತೆ ಚಿಪ್ ಅನ್ನು ಕೋ-ಡೆವಲಪ್ ಮಾಡಬಲ್ಲಂತಹ ಸಾಮರ್ಥ್ಯ ಭಾರತ ಮತ್ತು ಜರ್ಮನಿ ಈ ಎರಡು ದೇಶಗಳಿಗೆ ಮಾತ್ರವೇ ಇರುವುದು. ಭಾರತದಲ್ಲಿ ಚಿಪ್ ಡಿಸೈನ್ ಮಾಡಬಲ್ಲಂತಹ ಪ್ರತಿಭಾ ಸಂಪನ್ಮೂಲ ಸಾಕಷ್ಟಿದ್ದಾರೆ. ಹೀಗಾಗಿ, ನಿವಿಡಿಯಾಗೆ ಭಾರತವೇ ಮೊದಲ ಆಯ್ಕೆ ಆಗಬಹುದು ಎನ್ನುವುದು ಅಧಿಕಾರಿಗಳ ಅನಿಸಿಕೆ.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ರೈತರಿಗೆ ಕಾರ್ಬನ್ ಕ್ರೆಡಿಟ್; ಎಂಟು ರಾಜ್ಯಗಳ ರೈತರಿಗೆ ಅವಕಾಶ

ಸದ್ಯ, ಭಾರತದಲ್ಲಿ ನಿವಿಡಿಯಾ ಜೊತೆ ಸೇರಿ ಚಿಪ್ ಡಿಸೈನ್ ಮಾಡಿದರೆ ಭಾರತಕ್ಕೆ ಏನು ಲಾಭ ಎನ್ನುವುದನ್ನು ಅವಲೋಕಿಸಲಾಗುತ್ತಿದೆ. ಚಿಪ್ ತಯಾರಿಕೆಗೆ ಆಗುವ ವೆಚ್ಚ ಎಷ್ಟು, ಅದರ ನೈಜ ಬಳಕೆ ಎಲ್ಲೆಲ್ಲಿ ಆಗುತ್ತದೆ, ಆ ಚಿಪ್​ನ ಉಪಯೋಗಗಳು ಎಲ್ಲೆಲ್ಲಿ ಇತ್ಯಾದಿಯನ್ನು ಪಟ್ಟಿ ಮಾಡಲಾಗುತ್ತಿದೆ. ಭಾರತಕ್ಕೆ ಈ ಯೋಜನೆಯಿಂದ ಉಪಯೋಗ ಹೆಚ್ಚು ಇರುತ್ತದೆ ಎನಿಸಿದಲ್ಲಿ ಸರ್ಕಾರವು ಮುಂದಡಿ ಇಡಬಹುದು ಎನ್ನನಲಾಗಿದೆ.

ನಿವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಮುಂದಿನ ವಾರ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಆ ಸಂದರ್ಭದಲ್ಲಿ ಸರ್ಕಾರದ ಮಟ್ಟದಲ್ಲಿ ಒಂದು ಸ್ಪಷ್ಟತೆಗೆ ಬಂದಿರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ