ನವದೆಹಲಿ: ಒಟಿಟಿ ಕಾರ್ಯಕ್ರಮಗಳಿಗೆ ಅಡಿಕ್ಟ್ ಆಗಿರುವ ಜನರಿಗೆ ಆಘಾತದ ಸುದ್ದಿ ಇದು. ವಿಶ್ವದ ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಒಂದೆನಿಸಿದ ಅಮೇಜಾನ್ ಪ್ರೈಮ್ (Amazon Prime) ಇದೀಗ ತನ್ನ ಕೆಲ ಸಬ್ಸ್ಕ್ರಿಪ್ಷನ್ ದರಗಳನ್ನು ಏರಿಸಿದೆ. ಮುಂದಿನ ದಿನಗಳಲ್ಲಿ ಬೇರೆ ಒಟಿಟಿ ಕಂಪನಿಗಳೂ ತಮ್ಮ ಸದಸ್ಯತ್ವ ದರಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಒಟಿಟಿ ಪ್ಲಾಟ್ಫಾರ್ಮ್ಗಳಾಗಲೀ, ಟೆಲಿಕಾಂ ಕಂಪನಿಗಳಾಗಲೀ ದೊಡ್ಡ ಮಟ್ಟದಲ್ಲಿ ಬೆಲೆ ಹೆಚ್ಚಳದ ಶಾಕ್ ಅನ್ನು ಗ್ರಾಹಕರಿಗೆ ನೀಡುವುದಿಲ್ಲ. ಆದರೆ, ಅಮೇಜಾನ್ ಪ್ರೈಮ್ ತನ್ನ ಮಾಸಿಕ ಸಬ್ಸ್ಕ್ರಿಪ್ಷನ್ (Monthly subscription price) ದರವನ್ನು 120 ರೂಗಳಷ್ಟು ಹೆಚ್ಚಿಸಿದೆ. ಹಾಗೆಯೇ, 3 ತಿಂಗಳ ಸಬ್ಸ್ಕ್ರಿಪ್ಷನ್ ರೇಟ್ 140 ರೂನಷ್ಟು ಹೆಚ್ಚು ಮಾಡಿದೆ. ಅಂದರೆ ಅದರ ಮಾಸಿಕ ದರ 179 ರೂನಿಂದ 299 ರುಪಾಯಿಗೆ ಹೆಚ್ಚಾಗಿದೆ. 3 ತಿಂಗಳ ದರ 459 ರುಪಾಯಿಯಿಂದ 599 ರುಪಾಯಿಗೆ ಹೆಚ್ಚಾಗಿದೆ.
ಅಮೇಜಾನ್ ಪ್ರೈಮ್ನಲ್ಲಿ ಕೇವಲ ಸಿನಿಮಾ, ಸೀರಿಯಲ್ಗಳು ಮಾತ್ರ ಇಲ್ಲ. ಪ್ರೈಮ್ ಮ್ಯೂಸಿಕ್ ಸೇರಿದಂತೆ ನಾನಾ ರೀತಿಯ ಸರ್ವಿಸ್ ಮತ್ತು ಆ್ಯಪ್ಗಳು ಅಮೆಜಾನ್ ಪ್ರೈಮ್ಗೆ ಜೋಡಿತಗೊಂಡಿವೆ. ಹೀಗಾಗಿ, ಅಮೇಜಾನ್ ಪ್ರೈಮ್ಗೆ ಹೊಂದಿಕೊಂಡಿರುವ ಜನರು ಅಷ್ಟು ಸುಲಭಕ್ಕೆ ಸಬ್ಸ್ಕ್ರಿಪ್ಚನ್ ಬಿಡುವುದಿಲ್ಲ.
ಇಲ್ಲಿ ಅಮೇಜಾನ್ ದರ ಏರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ಇಲ್ಲಿ ಹೆಚ್ಚಾಗಿರುವುದು ಮಾಸಿಕ ಮತ್ತು ತ್ರೈಮಾಸಿಕ ಸಬ್ಸ್ಕ್ರಿಪ್ಚನ್ ದರಗಳು ಮಾತ್ರ. ಅದರ ವಾರ್ಷಿಕ ಸಬ್ಸ್ಕ್ರಿಪ್ಚನ್ 1,400ರೂನಲ್ಲೇ ಮುಂದುವರಿದಿದೆ. ಇದು ಅಮೇಜಾನ್ ಪ್ರೈಮ್ ವೀಕ್ಷಕರನ್ನು ವಾರ್ಷಿಕ ಸಬ್ಸ್ಕ್ರಿಪ್ಷನ್ಗೆ ಸೇರುವಂತೆ ಪ್ರೇರೇಪಿಸಬಹುದು ಎಂಬುದು ಸಂಸ್ಥೆಯ ಆಲೋಚನೆ ಇದ್ದಿರಬಹುದು.
ಅಮೇಜಾನ್ ಪ್ರೈಮ್ ಇಲ್ಲಿ ದೀರ್ಘಾವಧಿ ಸಬ್ಸ್ಕ್ರಿಪ್ಷನ್ ಪ್ಲಾನ್ಗಳ ಮೇಲೆ ಗಮನ ಹರಿಸುತ್ತಿದೆ. ಅದರ ಅಮೇಜಾನ್ ಪ್ರೈಮ್ ಲೈಟ್ನ ಒಂದು ವರ್ಷದ ಸಬ್ಸ್ಕ್ರಿಪ್ಷನ್ ದರ 999 ರೂ ಇದೆ. ತಿಂಗಳಿಗೆ 300 ರೂ ನೀಡುವ ಬದಲು ವರ್ಷಕ್ಕೆ 1,000 ಅಥವಾ 1,500 ರೂ ನೀಡಿದರೆ ಒಂದಿಡೀ ವರ್ಷ ಪ್ರೈಮ್ ಒಟಿಟಿ ನೋಡಬಹುದು.
ಈಗಂತೂ ಬಹಳಷ್ಟು ಒಟಿಟಿ ಪ್ಲಾಟ್ಫಾರ್ಮ್ಗಳಿವೆ. ಅದರಲ್ಲಿ ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನೀ ಹಾಟ್ಸ್ಟಾರ್ ಪ್ರಮುಖವಾದವು. ಅತಿಹೆಚ್ಚು ಸಬ್ಸ್ಕ್ರೈಬರ್ಸ್ ಹೊಂದಿರುವ ನೆಟ್ಫ್ಲಿಕ್ಸ್ ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಿಸಬಹುದು ಎನ್ನಲಾಗಿದೆ. ನೆಟ್ಫ್ಲಿಕ್ಸ್ 23 ಕೋಟಿ ವೀಕ್ಷಕರ ಬಳಗ ಹೊಂದಿದೆ. ಅಮೇಜಾನ್ ಪ್ರೈಮ್ ಬಳಿ 20 ಕೋಟಿ ವೀಕ್ಷಕರಿದ್ದಾರೆ. ಡಿಸ್ನಿ ಹಾಟ್ಸ್ಟಾರ್ ಇಎಸ್ಪಿಎನ್ ಎರಡೂ ಸೇರಿ 18 ಕೋಟಿ ವೀಕ್ಷಕರಿದ್ದಾರೆ.
ಇದನ್ನೂ ಓದಿ: Dasara: ನೆಟ್ಫ್ಲಿಕ್ಸ್ನಲ್ಲಿ ಏಪ್ರಿಲ್ 27ಕ್ಕೆ ‘ದಸರಾ’; ನಾನಿ, ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಹಬ್ಬ
ಏರ್ಟೆಲ್ನ ಕೆಲ ಪ್ಲಾನ್ಗಳನ್ನು ಬಳಸಿದರೆ ಅಮೇಜಾನ್ ಪ್ರೈಮ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಕ್ಕುತ್ತದೆ. ಈ ನಿಟ್ಟಿನಲ್ಲಿ ಏರ್ಟೆಲ್ ಮತ್ತು ಅಮೇಜಾನ್ ಮಧ್ಯೆ ಒಪ್ಪಂದ ಕೂಡ ಇದೆ. ಏರ್ಟೆಲ್ನ ಕೆಲ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ಗಳಲ್ಲಿ ಅದರ ವ್ಯಾಲಿಟಿ ಅವಧಿಯವರೆಗೂ ಅಮೇಜಾನ್ ಪ್ರೈಮ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಏರ್ಟೆಲ್ನ ಬ್ರಾಡ್ಬ್ಯಾಂಡ್ ಕನೆಕ್ಷನ್ ಪಡೆದರೆ ಮೊದಲ 12 ತಿಂಗಳು ಅಮೇಜಾನ್ ಪ್ರೈಮ್ ಮೆಂಬರ್ಶಿಪ್ ಉಚಿತವಾಗಿ ಸಿಗುತ್ತದೆ.