ಇಸ್ಲಾಮಾಬಾದ್, ಆಗಸ್ಟ್ 13: ಪಾಕಿಸ್ತಾನದ ಹಣದುಬ್ಬರ (Inflation) ಮತ್ತೆ ಏರಿಕೆಯಾಗಿದೆ. ಆಗಸ್ಟ್ 10ರಂದು ಕೊನೆಗೊಂಡ ವಾರದಲ್ಲಿ ಅದರ ಹಣದುಬ್ಬರ ದರ ಶೇ. 30ರ ಗಡಿ ದಾಟಿ ಹೋಗಿದೆ. ಅಲ್ಲೀಗ ಹಣದುಬ್ಬರ ಶೇ. 30.82ರಷ್ಟಿದೆ. ಹಲವು ಅಗತ್ಯವಸ್ತುಗಳ ಬೆಲೆ ಏರಿದ್ದರಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿಲ್ಲ. ಮೇ ತಿಂಗಳಲ್ಲಿ ಅಲ್ಲಿನ ಇನ್ಫ್ಲೇಷನ್ ದರ ಶೇ. 38ಕ್ಕಿಂತ ಮೇಲೇರಿತ್ತು. ಅದು ಪಾಕಿಸ್ತಾನದಲ್ಲಿ ದಾಖಲಾದ ಗರಿಷ್ಠ ಬೆಲೆ ಏರಿಕೆ ಪ್ರಮಾಣ.
ಪಾಕಿಸ್ತಾನದ ಅಂಕಿಅಂಶಗಳ ಸಂಸ್ಥೆ (PBS) ಆಗಸ್ಟ್ 12ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಹಣದುಬ್ಬರ ಸೂಚಕವೆನಿಸಿದ ಸೆನ್ಸಿಟಿವ್ ಪ್ರೈಸ್ ಇಂಡೆಕ್ಸ್ ವಿವರ ಬಹಿರಂಗಪಡಿಸಿದೆ. ಈ ಎಸ್ಪಿಐ ಗುಂಪಿನಲ್ಲಿರುವ ಆಯ್ದ 51 ಅಗತ್ಯ ವಸ್ತುಗಳ ಪೈಕಿ 29 ವಸ್ತುಗಳ ಬೆಲೆ ಏರಿದೆ. ಐದು ಸರಕುಗಳ ಬೆಲೆ ಕಡಿಮೆಯಾಗಿದೆರುವುದು ತಿಳಿದುಬಂದಿದೆ. ಕಳೆದ ವರ್ಷದ ಇದೇ ವಾರಕ್ಕೆ ಹೋಲಿಸಿ ಬೆಲೆ ಹೆಚ್ಚಳವನ್ನು ಹೋಲಿಸಲಾಗಿದೆ.
ಗೋದಿಹಿಟ್ಟು, ಸಿಗರೇಟು, ಬಾಸ್ಮತಿ ಅಕ್ಕಿ, ಮೆಣಸಿನಕಾಯಿಪುಡಿ, ಸಕ್ಕರೆ, ಕೋಳಿ, ಆಲೂಗಡ್ಡೆ, ಟೊಮೆಟೋ ಮೊದಲಾದ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ಏರಿಕೆಯಾಗಿದೆ.
ವೆನಿಜುವೆಲಾ: ಶೇ. 1198
ಸೂಡಾನ್: ಶೇ. 340
ಲೆಬನಾನ್: ಶೇ. 201
ಸಿರಿಯಾ: ಶೇ. 139
ಸುರಿನಾಮ್: ಶೇ. 63.3
ಜಿಂಬಾಬ್ವೆ: ಶೇ. 60.7
ಅರ್ಜೆಂಟೀನಾ: ಶೇ. 51.2
ಟರ್ಕಿ: ಶೇ. 36.1
ಇರಾನ್: ಶೇ. 35.2
ಇಥಿಯೋಪಿಯಾ: ಶೇ. 33
ಭಾರತದಲ್ಲಿ ಹಣದುಬ್ಬರ ಸದ್ಯ ಶೇ. 4.7ರಷ್ಟಿದೆ. ಇಲ್ಲಿಯೂ ಸಾಕಷ್ಟು ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿರುವ ಪರಿಣಾಮ ಹಣದುಬ್ಬರ ಶೇ. 5ರ ಗಡಿದಾಟಿ ಹೋಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ