Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳದ್ದೂ ಸೇರಿ ಲಕ್ಷ ಕೋಟಿ ರೂನಷ್ಟು ಕೆಟ್ಟ ಸಾಲ ಮಾರಲಿರುವ ಎಸ್​ಬಿಐ; ಇದನ್ನು ಖರೀದಿಸುತ್ತಿರುವವರು ಯಾರು?

SBI Selling Bad Loans: ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 331 ಕೆಟ್ಟ ಸಾಲಗಳನ್ನು ಎಆರ್​ಸಿ ಕಂಪನಿಗಳಿಗೆ ಮಾರಲು ಯೋಜಿಸುತ್ತಿದೆ. ಒಟ್ಟು 96,278 ಕೋಟಿ ರೂ ಮೊತ್ತದ ಸಾಲ ಇದಾಗಿರುವುದು ತಿಳಿದುಬಂದಿದೆ.

ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳದ್ದೂ ಸೇರಿ ಲಕ್ಷ ಕೋಟಿ ರೂನಷ್ಟು ಕೆಟ್ಟ ಸಾಲ ಮಾರಲಿರುವ ಎಸ್​ಬಿಐ; ಇದನ್ನು ಖರೀದಿಸುತ್ತಿರುವವರು ಯಾರು?
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2023 | 12:41 PM

ನವದೆಹಲಿ, ಆಗಸ್ಟ್ 7: ಭಾರತದ ಅಗ್ರಗಣ್ಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿದ ಎಸ್​ಬಿಐ ತನ್ನ ನಿರುಪಯುಕ್ತ ಸಾಲಗಳನ್ನು (Bad Loan Accounts) ತ್ಯಜಿಸಲು ಹೊರಟಿದೆ. ವಸೂಲಾತಿ ಆಗದೇ ಉಳಿದಿರುವ ಸಾಲಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರಲು ನಿರ್ಧರಿಸಿದೆ. ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ 96,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕೆಟ್ಟ ಸಾಲಗಳನ್ನು ಎಆರ್​ಸಿ ಕಂಪನಿಗಳಿಗೆ ಎಸ್​ಬಿಐ ಮಾರಲಿರುವುದು ತಿಳಿದುಬಂದಿದೆ. ಈ ಕೆಟ್ಟಸಾಲಗಳು ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳು, ವಿಡಿಯೋಕಾನ್, ಜೇಪೀ ಮೊದಲಾದ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಇವುಗಳ ಸಾಲದ ವಿವರವನ್ನು ಆಸ್ತಿ ಮರುರಚನೆ ಸಂಸ್ಥೆಗಳಿಗೆ (ARC- Asset Reconstruction Company) ಎಸ್​ಬಿಐ ರವಾನಿಸಿದೆ. ಇದನ್ನು ಖರೀದಿಸಲು ಆಸಕ್ತಿ ಇದ್ದರೆ ವ್ಯಕ್ತಪಡಿಸಲು ಆಹ್ವಾನಿಸಲಾಗಿದೆ.

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಎಸ್​ಬಿಐ ಮಾರಲಿರುವ 331 ಲೋನ್ ಅಕೌಂಟ್​ಗಳಲ್ಲಿ 96,278 ಕೋಟಿ ರೂ ಸಾಲ ಬಾಕಿ ಉಳಿದಿರುವುದು ತಿಳಿದುಬಂದಿದೆ. ಈ ಬಗ್ಗೆ ಎಸ್​ಬಿಐನಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇದನ್ನೂ ಓದಿ: Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಎಷ್ಟು ಉಪಯುಕ್ತ? ಭವಿಷ್ಯದ ದಿನಗಳು ಹೇಗಿವೆ?

ಎನ್​ಪಿಎಗಳನ್ನು ಯಾಕೆ ಮಾರಲಾಗುತ್ತದೆ?

ಬ್ಯಾಂಕ್​ನಿಂದ ಪಡೆದ ಸಾಲ ವಸೂಲಾತಿ ಆಗದೇ ಉಳಿದಿದ್ದರೆ ಅದು ಎನ್​ಪಿಎ ಅಥವಾ ನಿರುಪಯುಕ್ತ ಸಾಲ ಎಂದು ವರ್ಗೀಕೃತವಾಗುತ್ತದೆ. ಈ ಸಾಲಗಳನ್ನು ಬ್ಯಾಂಕ್​ನ ಆದಾಯ ಭಾಗದಿಂದ ತೆಗೆದುಹಾಕಿ ಪ್ರತ್ಯೇಕವಾಗಿಡಲಾಗುತ್ತದೆ.

ಬಳಿಕ ಈ ಸಾಲವನ್ನು ಬೇರೆ ಬೇರೆ ಮಾರ್ಗಗಳಿಂದ ವಸೂಲಿ ಮಾಡಲು ಬ್ಯಾಂಕ್ ಪ್ರಯತ್ನಿಸಬಹುದು. ಇದು ಸಾಧ್ಯ ಇಲ್ಲ ಎನಿಸಿದಾಗ ಎಆರ್​ಸಿ ಕಂಪನಿಗಳಿಗೆ ಈ ಸಾಲಗಳನ್ನು ಮಾರಿ ಕೈತೊಳೆದುಕೊಳ್ಳಬಹುದು.

ಇದನ್ನೂ ಓದಿ: ವೆಹಿಕಲ್ ಇನ್ಷೂರೆನ್ಸ್; ಬಹಳ ಸುಲಭವಾದ ಕ್ಯಾಷ್​ಲೆಸ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯ ಬಳಸಿ

ಎಆರ್​ಸಿ ಕಂಪನಿಗಳಿಗೆ ಈ ಸಾಲದಿಂದ ಏನು ಪ್ರಯೋಜನ?

ಎಆರ್​ಸಿ ಅಥವಾ ಅಸೆಟ್ ರೀಕನ್ಸ್​ಟ್ರಕ್ಷನ್ ಕಂಪನಿಗಳು ಬ್ಯಾಂಕ್​ನ ಕೆಟ್ಟ ಸಾಲವನ್ನು ಪಡೆಲು ಕೆಲವಾರು ಕಾರಣಗಳಿವೆ. ರಿಸ್ಕ್ ಇದ್ದರೂ ಈ ಸಾಲವನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಬಹುದು. ತನ್ನ ಸ್ವಂತ ಸಾಮರ್ಥ್ಯದ ಮೇಲೆ ಈ ಸಾಲವನ್ನು ವಸೂಲಿ ಮಾಡಲು ಯಶಸ್ವಿಯಾದರೆ ಒಳ್ಳೆಯ ಲಾಭ ಸಿಗುತ್ತದೆ. ಭಾರತದಲ್ಲಿ ಆರ್​ಬಿಐ ಮಾನ್ಯತೆ ಪಡೆದ 29 ಎಆರ್​ಸಿ ಕಂಪನಿಗಳಿವೆ. ಈ ಪೈಕಿ ಬಹುತೇಕ ಎಆರ್​ಸಿಗಳು ಮುಂಬೈ ಮತ್ತು ದೆಹಲಿಯಲ್ಲಿ ಇವೆ. ಬೆಂಗಳೂರಿನಲ್ಲಿ ಎಎನ್​ಎ ಎಂಬ ಕಂಪನಿ ಇದೆ.

ಎಆರ್​ಸಿ ಕಂಪನಿಗಳು ಏನು ಕ್ರಮ ಕೈಗೊಳ್ಳಬಹುದು?

  • ಸಾಲ ಪಡೆದ ಕಂಪನಿಯ ಆಡಳಿತವನ್ನು ವಹಿಸಿಕೊಳ್ಳಬಹುದು, ಅಥವಾ ಬದಲಿಸಬಹುದು
  • ಸಾಲ ಪಡೆದ ಕಂಪನಿಯನ್ನು ಮಾರಬಹುದು ಅಥವಾ ಲೀಸ್​ಗೆ ಹಾಕಬಹುದು
  • ಸಾಲ ಪಡೆದವರಿಗೆ ಮರುಪಾವತಿಗೆ ಮತ್ತೆ ಅವಕಾಶ ಕೊಡಬಹುದು.
  • ಆಸ್ತಿ ಜಫ್ತಿ ಮಾಡಿಕೊಳ್ಳಬಹುದು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ