UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಪ್ರಯಾಗ್ರಾಜ್ನ ಶಕ್ತಿ ದುಬೆ ದೇಶಕ್ಕೆ ನಂ.1
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಶಕ್ತಿ ದುಬೆ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. upsc.gov.in ವೆಬ್‌ಸೈಟ್‌ನಲ್ಲಿ ರೋಲ್ ನಂಬರ್ ಅಥವಾ ಹೆಸರಿನ ಮೂಲಕ ಫಲಿತಾಂಶ ಪರಿಶೀಲಿಸಬಹುದು. ಒಟ್ಟು 1009 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗಿದೆ.

ಕೇಂದ್ರ ಲೋಕಸೇವಾ ಆಯೋಗ (UPSC) 2024 ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಶಕ್ತಿ ದುಬೆ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ದೇಶದಲ್ಲೇ ಅಗ್ರಸ್ಥಾನ ಪಡೆದಿದ್ದಾರೆ. ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡುವ ಮೂಲಕ ರೋಲ್ ನಂಬರ್ ಮತ್ತು ಹೆಸರಿನ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಘೋಷಿಸಲಾಗಿದೆ.
ಆಯೋಗವು ಒಟ್ಟು 1009 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ, ಇದರಲ್ಲಿ ಸಾಮಾನ್ಯ ವರ್ಗದಿಂದ 335, ಇಡಬ್ಲ್ಯೂಎಸ್ ನಿಂದ 109, ಒಬಿಸಿಯಿಂದ 318, ಎಸ್‌ಸಿಯಿಂದ 160 ಮತ್ತು ಎಸ್‌ಸಿ ವರ್ಗದಿಂದ 87 ಅಭ್ಯರ್ಥಿಗಳು ಸೇರಿದ್ದಾರೆ. ಸಂದರ್ಶನವನ್ನು ಜನವರಿ 7, ರಿಂದ ಏಪ್ರಿಲ್ 17 ರವರೆಗೆ ನಡೆಸಲಾಯಿತು. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 2024 ರಲ್ಲಿ ನಡೆಸಲಾಯಿತು. ಯಶಸ್ವಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಯಿತು. ಸಂದರ್ಶನದಲ್ಲಿ ಒಟ್ಟು 2845 ಅಭ್ಯರ್ಥಿಗಳು ಭಾಗವಹಿಸಿದ್ದರು. ಆಯ್ಕೆಯಾದ ಅಭ್ಯರ್ಥಿಗಳಲ್ಲಿ, ಯುಪಿಎಸ್‌ಸಿ 241 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಮುಂದಿನ ಪರಿಶೀಲನೆಯವರೆಗೆ ತಾತ್ಕಾಲಿಕವಾಗಿ ಇರಿಸಿದೆ.
ಕ್ರಮವಾಗಿ 10 ಟಾಫರ್ಗಳ ಹೆಸರು ಇಲ್ಲಿದೆ:
- ಶಕ್ತಿ ದುಬೆ
- ಹರ್ಷಿತಾ ಗೋಯೆಲ್
- ಡೋಂಗ್ರೆ ಅರ್ಚಿತ್ ಪರಾಗ್
- ಶಾ ಮಾರ್ಗಿ ಚಿರಾಗ್
- ಆಕಾಶ್ ಗರ್ಗ್
- ಕೊಮ್ಮಲ್ ಪುನಿಯಾ
- ಆಯುಷಿ ಬನ್ಸಾಲ್
- ರಾಜ್ ಕೃಷ್ಣ ಝಾ
- ಆದಿತ್ಯ ವಿಕ್ರಮ್ ಅಗರ್ವಾಲ್
- ಮಾಯಾಂಕ್ ತ್ರಿಪಾಠಿ
ಇದನ್ನೂ ಓದಿ: ಕಸದ ಬುಟ್ಟಿಯಲ್ಲಿ ಸಿಕ್ಕಿದ್ದ ಅಂಧ ಮಗು ಇಂದು ಅಸಿಸ್ಟಂಟ್ ಕಲೆಕ್ಟರ್
UPSC CSE ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ?
- UPSC ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ನೀಡಲಾದ CSE 2024 ಅಂತಿಮ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಸ್ಕ್ರೀನ್ ಮೇಲೆ ಒಂದು PDF ಕಾಣಿಸುತ್ತದೆ.
- ಈಗ ಹೆಸರು ಮತ್ತು ರೋಲ್ ಸಂಖ್ಯೆಯ ಸಹಾಯದಿಂದ ಫಲಿತಾಂಶವನ್ನು ಪರಿಶೀಲಿಸಿ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ