Success Story: ಕಸದ ಬುಟ್ಟಿಯಲ್ಲಿ ಸಿಕ್ಕಿದ್ದ ಅಂಧ ಮಗು ಇಂದು ಅಸಿಸ್ಟಂಟ್ ಕಲೆಕ್ಟರ್
ಜಲಗಾಂವ್ ರೈಲು ನಿಲ್ದಾಣದಲ್ಲಿ 25 ವರ್ಷಗಳ ಹಿಂದೆ ಕಸದ ಬುಟ್ಟಿಯಲ್ಲಿ ಪತ್ತೆಯಾಗಿದ್ದ ಅಂಧ ಬಾಲಕಿ ಮಾಲಾ ಪಾಪಲ್ಕರ್, ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ನಾಗ್ಪುರ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಪಡೆದಿದ್ದಾಳೆ. ಅವಳ ಹೋರಾಟ ಮತ್ತು ಧೈರ್ಯ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಮಾಲಾ ಹುಟ್ಟಿನಿಂದಲೇ ಕುರುಡಳಾಗಿದ್ದರೂ, ಅನಾಥಾಶ್ರಮದ ಬೆಂಬಲದಿಂದ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾಳೆ.

25 ವರ್ಷಗಳ ಹಿಂದೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದಲ್ಲಿ ಅಂಧ ಮಗುವೊಂದು ಕಸದ ಬುಟ್ಟಿಯಲ್ಲಿ ಪತ್ತೆಯಾಗಿತ್ತು. ನಂತರ ಪೊಲೀಸರು ಮಗುವನ್ನು ರಕ್ಷಿಸಿ ಸುಧಾರಣಾ ಗೃಹಕ್ಕೆ ಕರೆದ್ಯೊಯಿದಿದ್ದಾರೆ. ಈಗ ಇದೇ ಮಗು ಬೆಳೆದು ದೊಡ್ಡವಳಾಗಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ನಾಗ್ಪುರ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡಿದ್ದಾಳೆ. ಇತ್ತೀಚೆಗೆ ಅವರಿಗೆ ನೇಮಕಾತಿ ಪತ್ರ ಸಿಕ್ಕಿದೆ. ಆ ಯುವತಿಯ ಹೆಸರೇ ಮಾಲಾ ಪಾಪಲ್ಕರ್.
ಮಾಲಾ ನಾಗ್ಪುರ ಕಲೆಕ್ಟರೇಟ್‌ನಲ್ಲಿ ತನ್ನ ಮೊದಲ ಹುದ್ದೆಯನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾಳೆ. ಕಳೆದ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ (ಎಂಪಿಎಸ್‌ಸಿ) ಕ್ಲರ್ಕ್-ಕಮ್-ಟೈಪಿಸ್ಟ್ ಪರೀಕ್ಷೆಯಲ್ಲಿ (ಗ್ರೂಪ್ ಸಿ) ಉತ್ತೀರ್ಣರಾಗುವ ಮೂಲಕ ಮಾಲಾ ಪಾಪಲ್ಕರ್ ಸುದ್ದಿಯಾಗಿದ್ದರು. ಮೂರು ದಿನಗಳ ಹಿಂದೆ, 26 ವರ್ಷದ ಮಾಲಾ ಅವರಿಗೆ ನಾಗ್ಪುರ ಕಲೆಕ್ಟರೇಟ್‌ನಲ್ಲಿ ಕಂದಾಯ ಸಹಾಯಕಿಯಾಗಿ ನೇಮಕಗೊಂಡಿರುವ ಬಗ್ಗೆ ಮಾಹಿತಿ ನೀಡುವ ಪತ್ರ ಬಂದಿದೆ. ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ 8-10 ದಿನಗಳಲ್ಲಿ ಮಾಲಾ ಕೆಲಸಕ್ಕೆ ವರದಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ದಿನಗೂಲಿ ಮಾಡುತ್ತಿದ್ದ ವ್ಯಕ್ತಿ ಇಂದು ನ್ಯಾಯಾಧೀಶ; ಮೊದಲ ಪ್ರಯತ್ನದಲ್ಲೇ 26 ನೇ ರ‍್ಯಾಂಕ್
25 ವರ್ಷಗಳ ಹಿಂದೆ ಜಲಗಾಂವ್ ರೈಲು ನಿಲ್ದಾಣದಲ್ಲಿ ಕಸದ ಬುಟ್ಟಿಯಲ್ಲಿ ಶಿಶುವಾಗಿ ತ್ಯಜಿಸಲ್ಪಟ್ಟಿದ್ದ ಕುರುಡು ಮಾಲಾಗೆ ಈಗ ನಾಗ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ. ಮಾಲಾ ಹುಟ್ಟಿನಿಂದಲೇ ಕುರುಡಳಾಗಿದ್ದರೂ, ಅನಾಥಾಶ್ರಮದ ಬೆಂಬಲ ಮತ್ತು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣದ ಪ್ರವೇಶದೊಂದಿಗೆ, ಅವರು ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಮಾಲಾ ಅವರ ಹೋರಾಟದ ಕಥೆ ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Tue, 22 April 25