AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಐಐಟಿ ಕಾರ್ಖಾನೆ’ ಎಂದೇ ಪ್ರಸಿದ್ಧಿಯಾಗಿರುವ ಭಾರತದ ಈ ಪುಟ್ಟ ಹಳ್ಳಿ; ಕಾರಣವೇನು ಗೊತ್ತಾ?

ಬಿಹಾರದ ಗಯಾ ಜಿಲ್ಲೆಯ ಪಟ್ವಾ ಟೋಲಿ ಗ್ರಾಮದಲ್ಲಿ ಪ್ರತೀ ವರ್ಷ ನೂರಾರು ಎಂಜಿನಿಯರ್‌ಗಳು ಹೊರಬರುವುದರಿಂದ "ಐಐಟಿ ಕಾರ್ಖಾನೆ" ಎಂದು ಪ್ರಸಿದ್ಧವಾಗಿದೆ. ಪ್ರತಿ ವರ್ಷ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಈ ಗ್ರಾಮದ ಅನೇಕ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ವೃಕ್ಷ ಎಂಬ ಸಂಸ್ಥೆಯ ಸಹಾಯದಿಂದ ಈ ಗ್ರಾಮದ ಶಿಕ್ಷಣ ವ್ಯವಸ್ಥೆ ಸುಧಾರಿಸಿದೆ. 1991ರಿಂದಲೂ ಈ ಸಾಧನೆ ಮುಂದುವರಿದಿದೆ.

'ಐಐಟಿ ಕಾರ್ಖಾನೆ' ಎಂದೇ ಪ್ರಸಿದ್ಧಿಯಾಗಿರುವ ಭಾರತದ ಈ ಪುಟ್ಟ ಹಳ್ಳಿ; ಕಾರಣವೇನು ಗೊತ್ತಾ?
Patwa Toli
ಅಕ್ಷತಾ ವರ್ಕಾಡಿ
|

Updated on:Apr 22, 2025 | 2:44 PM

Share

ಬಿಹಾರದ ಒಂದು ಹಳ್ಳಿಯು ‘ಐಐಟಿ ಕಾರ್ಖಾನೆ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಏಕೆಂದರೆ ಇಲ್ಲಿಯವರೆಗೆ, ಈ ಹಳ್ಳಿಯಿಂದ ನೂರಾರು ಎಂಜಿನಿಯರ್‌ಗಳು ಹೊರಬಂದಿದ್ದಾರೆ. ಪ್ರತಿ ವರ್ಷ ಇಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಈ ಹಳ್ಳಿಯ ಸಾವಿರಾರು ಮಕ್ಕಳು ಉತ್ತೀರ್ಣರಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ವರ್ಷ ಈ ಹಳ್ಳಿಯ 40 ಮಕ್ಕಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟಕ್ಕೂ ಈ ಗ್ರಾಮದ ಹೆಸರು ‘ಪಟ್ವಾ ಟೋಲಿ’.

ಬಿಹಾರದ ಗಯಾ ಜಿಲ್ಲೆಯಲ್ಲಿ ಪಟ್ವಾ ಟೋಲಿ ಎಂದು ಕರೆಯಲ್ಪಡುವ ನೇಕಾರರ ವಸಾಹತು ಇದೆ. 1991 ರಿಂದ ಈ ಪ್ರದೇಶದಿಂದ ನೂರಾರು ಎಂಜಿನಿಯರ್‌ಗಳು ಹೊರಹೊಮ್ಮಿದ್ದಾರೆ. ಹೌದು, ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನು ಏಪ್ರಿಲ್ 19 ರಂದು ಘೋಷಿಸಲಾಗಿದೆ. ಜೆಇಇ ಮೇನ್ಸ್‌ನಲ್ಲಿ ಅರ್ಹತೆ ಪಡೆದ ಮಕ್ಕಳನ್ನು ಗ್ರಾಮದ ಜನರು ಒಟ್ಟುಗೂಡಿಸಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ಈ ಗ್ರಾಮ ಕಳೆದ 25 ವರ್ಷಗಳಲ್ಲಿ ದೇಶಕ್ಕೆ ಅನೇಕ ಐಐಟಿ ತಜ್ಞರನ್ನು ನೀಡಿದೆ.

ಎಲ್ಲಿಂದ ಆರಂಭವಾಯಿತು?

1991 ರಲ್ಲಿ ಐಐಟಿ ಪಾಸ್ ಮಾಡಿದ ಪಟ್ವಾ ಗ್ಯಾಂಗ್‌ನಲ್ಲಿ ಜಿತೇಂದ್ರ ಪಟ್ವಾ ಮೊದಲಿಗರು. ಅವರು ಐಐಟಿಯಲ್ಲಿ ಪ್ರವೇಶ ಪಡೆದ ಹಳ್ಳಿಯ ಮೊದಲ ವಿದ್ಯಾರ್ಥಿಯಾದರು. ಅವರ ಈ ಸಾಧನೆಯ ನಂತರ, ಇಡೀ ಪ್ರದೇಶದ ಜನರು ಅವರಿಂದ ಪ್ರೇರಿತರಾದರು ಮತ್ತು ಕ್ರಮೇಣ ಇಡೀ ಗ್ರಾಮದಲ್ಲಿ ಎಂಜಿನಿಯರಿಂಗ್ ವಾತಾವರಣ ಸೃಷ್ಟಿಯಾಯಿತು. ಈಗ ಈ ಹಳ್ಳಿಯ ಹೆಚ್ಚಿನ ಮಕ್ಕಳ ಕನಸು ಯಶಸ್ವಿ ಎಂಜಿನಿಯರ್ ಆಗುವುದು. ಪ್ರತಿ ವರ್ಷ ಈ ಗ್ರಾಮದ ಅನೇಕ ವಿದ್ಯಾರ್ಥಿಗಳು ಜೆಇಇ ಉತ್ತೀರ್ಣರಾಗುತ್ತಾರೆ. ಈ ಹಳ್ಳಿಯಲ್ಲಿ ಬಹುತೇಕ ಪ್ರತಿಯೊಂದು ಮನೆಯಲ್ಲೂ ಒಬ್ಬ ಎಂಜಿನಿಯರ್ ಇರುತ್ತಾನೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ದಿನಗೂಲಿ ಮಾಡುತ್ತಿದ್ದ ವ್ಯಕ್ತಿ ಇಂದು ನ್ಯಾಯಾಧೀಶ; ಮೊದಲ ಪ್ರಯತ್ನದಲ್ಲೇ 26 ನೇ ರ‍್ಯಾಂಕ್

‘ವೃಕ್ಷ’ ಎಂಬ ಸರ್ಕಾರೇತರ ಸಂಸ್ಥೆ ಈ ಗ್ರಾಮದಲ್ಲಿ ಶಿಕ್ಷಣದ ಚಿತ್ರಣವನ್ನು ಬದಲಾಯಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ. 2013 ರಲ್ಲಿ, ಈ ಸಂಸ್ಥೆಯು ಈ ಪ್ರದೇಶದ ಮಕ್ಕಳನ್ನು ಐಐಟಿಗೆ ಉಚಿತವಾಗಿ ಸಿದ್ಧಪಡಿಸುವ ಕೆಲಸವನ್ನು ಪ್ರಾರಂಭಿಸಿತು. ಇದರಿಂದಾಗಿ, ದುಬಾರಿ ಶುಲ್ಕವನ್ನು ಭರಿಸಲಾಗದ ಈ ಪ್ರದೇಶದ ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಕನಸನ್ನು ನನಸು ಮಾಡಲು ಶುರು ಮಾಡಿದರು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Tue, 22 April 25

ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು