ಜವಾಬ್ದಾರಿ ಮುಗಿಯಿತು.. ನಟನೆಗೆ ಮರಳಲು ರೆಡಿ ಆದ ರಂಭಾ
ಹಲವು ವರ್ಷಗಳ ನಂತರ ಪ್ರಸಿದ್ಧ ನಟಿ ರಂಭಾ ಅವರು ಚಿತ್ರರಂಗಕ್ಕೆ ಮರಳಲು ನಿರ್ಧರಿಸಿದ್ದಾರೆ. ತಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ನಿಭಾಯಿಸಿದ ನಂತರ, ಅವರು ತಮ್ಮ ನಟನಾ ವೃತ್ತಿಗೆ ಮರಳುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತೋಷದ ಸುದ್ದಿಯಾಗಿದೆ. ಅವರು ತಮ್ಮ ಕುಟುಂಬದ ಬೆಂಬಲದೊಂದಿಗೆ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ನಟಿ ರಂಭಾ (Rambha) ಅವರು ಚಿತ್ರರಂಗದಿಂದ ದೂರ ಸರಿದು ಹಲವು ವರ್ಷಗಳು ಕಳೆದಿವೆ. ಅವರು ಬಣ್ಣದ ಲೋಕಕ್ಕೆ ಮರಳಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದರು. ಆದರೆ ಅದು ಸಾಧ್ಯವೇ ಆಗಿರಲಿಲ್ಲ. ಕೊನೆಗು ಅಭಿಮಾನಿಗಳ ಆಸೆ ಈಡೇರುವಂತಾಗಿದೆ. ಅವರು ಈಗ ಬಣ್ಣದ ಲೋಕಕ್ಕೆ ಮರಳಲು ನಿರ್ಧರಿಸಿದ್ದಾರೆ. ಅಲ್ಲದೆ ಚಿತ್ರರಂಗದಿಂದ ದೂರ ಇರಲು ಕಾರಣವೇನು ಎಂಬುದನ್ನು ಅವರು ವಿವರಿಸಿದ್ದಾರೆ. ಈ ವಿಚಾರ ತಿಳಿದು ರಂಭಾ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ರಂಭಾ ಚಿತ್ರರಂಗಕ್ಕೆ ಬಂದಾಗ ಅವರಿಗೆ ಕೇವಲ 15 ವರ್ಷ. ಅವರು ಸಣ್ಣ ವಯಸ್ಸಿನಲ್ಲೇ ಖ್ಯಾತಿ ಪಡೆದುಕೊಂಡರು. ನಟಿಯಾಗಿ ಗುರುತಿಸಿಕೊಂಡ ಬಳಿಕ ಅವರ ಜನಪ್ರಿಯತೆಗೆ ಪಾರವೇ ಇಲ್ಲದಂತೆ ಆಯಿತು. 1993ರಲ್ಲಿ ‘ಸರ್ವರ್ ಸೋಮಣ್ಣ’ ಸಿನಿಮಾ ರಿಲೀಸ್ ಆಯಿತು. ಇದು ಅವರ ನಟನೆಯ ಮೊದಲನೇ ಕನ್ನಡ ಸಿನಿಮಾ. ಆ ಬಳಿಕ ಅವರು 8 ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ತಮಿಳಿನಲ್ಲಿ ರಂಭಾ ಬೇಡಿಕೆಯ ನಟಿಯಾದ ಹೊರತಾಗಿಯೂ ಅವರು ನಟನೆಯಿಂದ ದೂರ ಆಗುವ ನಿರ್ಧಾರಕ್ಕೆ ಬಂದರು.
2010ರಲ್ಲಿ ರಂಭಾ ಅವರು ಕೆನಡಾದಲ್ಲಿ ಸೆಟಲ್ ಆಗಿರೋ ಇಂದ್ರಕುಮಾರ್ ಪದ್ಮನಾಥನ್ ಜೊತೆ ವಿವಾಹ ಆದರು. ಅವರು ನೇರವಾಗಿ ಕೆನಡಾಗೆ ತೆರಳಿದರು. ಆ ಬಳಿಕ ಚಿತ್ರರಂಗಕ್ಕೆ ಅವರು ಮರಳಿದ್ದು ಕಡಿಮೆ. ರಂಭಾಗೆ ಮೂವರು ಮಕ್ಕಳು. ಎಲ್ಲರೂ ಶಾಲೆಗಳಿಗೆ ತೆರಳುತ್ತಿದ್ದು, ರಂಭಾಗೆ ನಟನೆಗೆ ಮರಳುವ ಆಸೆ ಆಗಿದೆ.
ಮಕ್ಕಳು ಬೆಳೆದು ಒಂದು ಹಂತದವರೆಗೆ ಹೋಗುವವರೆಗೆ ಅವರನ್ನು ಸಂಪೂರ್ಣ ವಾಗಿ ನೋಡಿಕೊಳ್ಳಬೇಕು, ತಾಯಿ ಆಗಿ ಜವಾಬ್ದಾರಿ ನೋಡಿಕೊಳ್ಳಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆ ಉದ್ದೇಶ ಈಗ ಈಡೇರಿದೆ. ಹೀಗಾಗಿ, ರಂಭಾ ಅವರು ಈಗ ಮತ್ತೆ ಚಿತ್ರ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.
‘ನನ್ನ ಮಗನಿಗೆ ಈಗ ಆರು ವರ್ಷ. ಹೆಣ್ಣುಮಕ್ಕಳು 14 ಮತ್ತು 10 ವರ್ಷ ವಯಸ್ಸಿನವರು. ಅವರ ಕೆಲಸವನ್ನು ಅವರೇ ಮಾಡಬಲ್ಲರು. ಅವರನ್ನು ನೋಡಿಕೊಳ್ಳುವುದಕ್ಕಾಗಿಯೇ ನಾನು ಇಷ್ಟು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದೆ. ನನ್ನ ಗಂಡನಿಗೆ ಸಿನಿಮಾಗಳಲ್ಲಿ ನನಗಿರುವ ಆಸಕ್ತಿ ತಿಳಿದಿದೆ. ಅವರ ಪ್ರೋತ್ಸಾಹದಿಂದಲೇ ನಾನು ಟಿವಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶನಾಗಲು ಒಪ್ಪಿಕೊಂಡೆ. ಕುಟುಂಬ ನನನ್ನ ಬೆಂಬಲಕ್ಕಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ನನ್ನ ಪತ್ನಿಗೊಂದು ಚಾನ್ಸ್ ಕೊಡಿ’; ‘ಮ್ಯಾಕ್ಸ್’ ನಿರ್ಮಾಪಕನ ಬಳಿ ಕೋರಿಕೆ ಇಟ್ಟ ರಂಭಾ ಗಂಡ
ರಂಭಾ ಅವರಿಗೆ ಈಗ 48 ವರ್ಷ ವಯಸ್ಸು. ಈ ಸಮಯದಲ್ಲಿ ಅವರಿಗೆ ನಾಯಕಿ ಪಾತ್ರಗಳು ಸಿಗೋದು ಅನುಮಾನವೇ. ಪೋಷಕ ಪಾತ್ರಗಳಮೂಲಕ ಅವರು ಕಂಬ್ಯಾಕ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.