Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ

|

Updated on: May 07, 2021 | 1:45 PM

Tata passenger vehicles: ಟಾಟಾ ಕಂಪೆನಿಯಿಂದ ಮೇ 8ರಿಂದ ಅನ್ವಯ ಆಗುವಂತೆ ಪ್ರಯಾಣಿಕರ ವಾಹನಗಳ ಬೆಲೆ ಏರಿಕೆಯನ್ನು ಘೋಷಣೆ ಮಾಡಲಾಗಿದೆ.

Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಟಾಟಾ ಮೋಟಾರ್ಸ್​ನಿಂದ ಮೇ 8, 2021ರಿಂದ ಅನ್ವಯ ಆಗುವಂತೆ ಪ್ರಯಾಣಿಕರ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡಲಿದೆ. ಕಂಪೆನಿಯಿಂದ ಈ ಬಗ್ಗೆ ಶುಕ್ರವಾರ ಘೋಷಣೆ ಮಾಡಲಾಗಿದೆ. ಮೇ 8ರಿಂದ ಜಾರಿಗೆ ಬರುವಂತೆ, ಪ್ರಯಾಣಿಕರ ವಾಹನಗಳ ಬೆಲೆ ಏರಿಕೆ ಮಾಡಲಾಗುವುದು. ಸರಾಸರಿ ಶೇ 1.8ರಷ್ಟು ಹೆಚ್ಚಳ ಆಗಲಿದೆ; ಅದು ಮಾಡೆಲ್ ಮತ್ತು ವೇರಿಯೆಂಟ್ ಮೇಲೆ ಅವಲಂಬಿಸಿರುತ್ತದೆ. ಯಾರು ಟಾಟಾ ವಾಹನಗಳನ್ನು ಮೇ 7 ಮತ್ತು ಅದಕ್ಕಿಂತ ಮುಂಚೆ ಬುಕ್ ಮಾಡಿರುತ್ತಾರೋ ಅವರಿಗೆ ಈ ಬೆಲೆ ಏರಿಕೆಯು ಅನ್ವಯ ಆಗುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ. ಉಕ್ಕು ಮತ್ತು ಇತರ ಬೆಲೆಬಾಳುವ ಲೋಹಗಳ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಈಗ ಬೆಲೆ ಏರಿಕೆ ಮಾಡುವಂತಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ಪ್ರಯಾಣಿಕರ ವಾಹನಗಳ ಉದ್ಯಮದ ಅಧ್ಯಕ್ಷರಾದ ಶೈಲೇಶ್ ಚಂದ್ರ ಈ ಬಗ್ಗೆ ಮಾತನಾಡಿ, ಉಕ್ಕು ಮತ್ತಿತರ ಬೆಲೆಬಾಳುವ ಲೋಹಗಳು, ಪದಾರ್ಥಗಳ ಬೆಲೆಯಲ್ಲಿ ಏರಿಕೆ ಆಗಿದ್ದರಿಂದಾಗಿ ಅದರಲ್ಲಿ ಸ್ವಲ್ಪ ಭಾಗವನ್ನು ಬೆಲೆ ಏರಿಸುವ ಮೂಲಕ ವರ್ಗಾವಣೆ ಮಾಡಬೇಕಿದೆ. ಗ್ರಾಹಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು, ಈಗಾಗಲೇ ಕಾರು ಬುಕ್ ಮಾಡಿದವರಿಗೆ ಬೆಲೆ ಸುರಕ್ಷತೆಯನ್ನು ಒದಗಿಸುತ್ತಿದ್ದೇವೆ. ಯಾರು ಮೇ 7, 2021ರೊಳಗೆ ಕಾರು ಬುಕ್ ಮಾಡಿರುತ್ತಾರೋ ಅವರಿಗೆ ಹಳೆ ದರವೇ ಅನ್ವಯ ಆಗುತ್ತದೆ.

ಹೊಸ ದರವು ಆ ನಂತರದ (ಮೇ 8, 2021) ಬುಕ್ಕಿಂಗ್​ಗೆ ಅನ್ವಯ ಆಗುತ್ತದೆ. ನಮ್ಮ “New Forever” ರೇಂಜ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಪ್ರಬಲವಾದ ಸ್ವೀಕೃತಿ ಇದೆ. ನಮ್ಮ ಬ್ರ್ಯಾಂಡ್​ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಗ್ರಾಹಕರಿಗೆ ಅಭಾರಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಟಾಟಾ ಕಂಪೆನಿಯ ಎಲ್ಲ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಜನವರಿಯಲ್ಲೇ ಬೆಲೆ ಏರಿಕೆ ಘೋಷಣೆ ಮಾಡಿದೆ.

ಇದನ್ನೂ ಓದಿ: Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು

(Tata Motors company announced price increase of passenger vehicles from May 8, 2021. Who have booked car on or May 7th have protection against price hike)