Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing bell: ಷೇರುಪೇಟೆ ಸೂಚ್ಯಂಕಗಳಲ್ಲಿ 3ನೇ ದಿನವೂ ಮುಂದುವರಿದ ಏರಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶುಕ್ರವಾರದಂದು ಏರಿಕೆ ದಾಖಲಿಸಿವೆ. ಯಾವ ಪ್ರಮುಖ ಷೇರು ಏರಿಕೆ ಕಂಡಿವೆ ಹಾಗೂ ಇಳಿಕೆ ದಾಖಲಿಸಿವೆ ಎಂಬ ವಿವರ ಇಲ್ಲಿದೆ.

Closing bell: ಷೇರುಪೇಟೆ ಸೂಚ್ಯಂಕಗಳಲ್ಲಿ 3ನೇ ದಿನವೂ ಮುಂದುವರಿದ ಏರಿಕೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 07, 2021 | 5:33 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತವಾಗಿ ಮೂರನೇ ದಿನ, ಶುಕ್ರವಾರ (ಮೇ 7, 2021) ಕೂಡ ಏರಿಕೆಯೊಂದಿಗೆ ವಹಿವಾಟು ಮುಗಿದಿದೆ. ನಿಫ್ಟಿ 50 ಸೂಚ್ಯಂಕವು 98.40 ಪಾಯಿಂಟ್ ಹೆಚ್ಚಳವಾಗಿ 14,823.20 ಪಾಯಿಂಟ್​ ಮುಟ್ಟಿದೆ. ಇನ್ನು ಬಿಎಸ್​ಇ ಸೆನ್ಸೆಕ್ಸ್​ 256.71 ಪಾಯಿಂಟ್ಸ್ ಮೇಲೇರಿ 49,206.47 ಪಾಯಿಂಟ್​ನೊಂದಿಗೆ ಈ ವಾರದ ವ್ಯವಹಾರವನ್ನು ಮುಗಿಸಿದೆ. ಇಂದಿನ ಗಳಿಕೆಗೆ ಬಲವಾಗಿ ನಿಂತಿದ್ದು ಲೋಹದ ಷೇರುಗಳು. ವಲಯಗಳ ಪೈಕಿ ಹೇಳುವುದಾದರೆ ನಿಫ್ಟಿ ಲೋಹದ ಸೂಚ್ಯಂಕ ಶೇ 4.7ರಷ್ಟು ಮೇಲೇರಿದೆ. ಇನ್ನು ಪಿಎಸ್​ಯು ಬ್ಯಾಂಕ್​ ಸೂಚ್ಯಂಕ ಮಾತ್ರ ಕುಸಿತ ಕಂಡಿದೆ.

ನಿಫ್ಟಿ ಮಿಡ್​ಕ್ಯಾಪ್ ಸೂಚ್ಯಂಕ ಶೇ 0.4 ಇಳಿದಿದ್ದರೆ, ನಿಫ್ಟಿ ಸ್ಮಾಲ್​ಕ್ಯಾಪ್ ಶೇ 0.7ರಷ್ಟು ಗಳಿಕೆ ಕಂಡಿದೆ. ಇನ್ನು ದಿನದ ಕೊನೆಗೆ ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 73.458ಕ್ಕೆ ಕೊನೆಯಾಗಿದೆ. ಸ್ಪಾಟ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 24 ಪೈಸೆ ಇಳಿಕೆ ಕಂಡು, 73.51ಕ್ಕೆ ದಿನದ ಕೊನೆಗೆ ವಹಿವಾಟು ಮುಗಿದಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್ ಟಾಟಾ ಸ್ಟೀಲ್ ಶೇ 7.40 ಹಿಂಡಾಲ್ಕೋ ಶೇ 3.93 ಜೆಎಸ್​ಡಬ್ಲ್ಯೂ ಸ್ಟೀಲ್ ಶೇ 3.72 ಅದಾನಿ ಪೋರ್ಟ್ಸ್ ಶೇ 3.64 ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ 3.18

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಶೇ -3.69 ಬಜಾಜ್ ಆಟೋ ಶೇ -1.89 ಹೀರೋ ಮೋಟೋಕಾರ್ಪ್ ಶೇ -1.80 ಐಷರ್ ಮೋಟಾರ್ಸ್ ಶೇ -1.07 ಡಿವೀಸ್ ಲ್ಯಾಬ್ಸ್ ಶೇ -0.84

ಇದನ್ನೂ ಓದಿ: Penny Stocks: ಕೊರೊನಾ ಆತಂಕವಿದ್ದರೂ ಬಂಗಾರದ ಫಸಲು ನೀಡಿದ ಚಿಲ್ಲರೆ ಬೆಲೆಯ ಷೇರುಗಳು ಇವು..

(Stock market index sensex and nifty surge consecutive 3rd day, on Friday May 7, 2021. Here is the nifty top gainers and losers details in Kannada)