BSE ಲಿಸ್ಟೆಡ್ ಕಂಪೆನಿಗಳ ಮೌಲ್ಯ 211 ಲಕ್ಷ ಕೋಟಿ ರೂ ; 3 ದಿನದಲ್ಲಿ ಹೂಡಿಕೆದಾರರ ಸಂಪತ್ತು 23 ಲಕ್ಷ ಕೋಟಿ ಹೆಚ್ಚಳ

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಶುಕ್ರವಾರ ದಾಖಲೆಯ 211 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ.

BSE ಲಿಸ್ಟೆಡ್ ಕಂಪೆನಿಗಳ ಮೌಲ್ಯ 211 ಲಕ್ಷ ಕೋಟಿ ರೂ ; 3 ದಿನದಲ್ಲಿ ಹೂಡಿಕೆದಾರರ ಸಂಪತ್ತು 23 ಲಕ್ಷ ಕೋಟಿ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 07, 2021 | 11:46 PM

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ)- ಲಿಸ್ಟೆಡ್ ಕಂಪೆನಿಗಳು ಶುಕ್ರವಾರ 211 ಲಕ್ಷ ಕೋಟಿ ರೂಪಾಯಿಯ ಹೊಸ ಎತ್ತರಕ್ಕೆ ಏರಿದೆ. ಈಕ್ವಿಟಿ ಮಾರ್ಕೆಟ್​ನಲ್ಲಿ ಲಾಭ ದಾಖಲಿಸಿದ ನಂತರ ಹೀಗೊಂದು ದಾಖಲಾಗಿದೆ. ಕಳೆದ ಮೂರು ದಿನದಲ್ಲಿ ಬಿಎಸ್​ಇ ಲಿಸ್ಟೆಡ್ ಮಾರುಕಟ್ಟೆ ಬಂಡವಾಳ ಮೌಲ್ಯ ಕಳೆದ ಮೂರು ದಿನದಲ್ಲಿ ರೂ. 4.39 ಲಕ್ಷ ಕೋಟಿ ರೂಪಾಯಿ ಏರಿಕೆ ಕಂಡು, 211 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ. ಬೆಂಚ್​ಮಾರ್ಕ್ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 256.71 ಪಾಯಿಂಟ್ಸ್, ನಿಫ್ಟಿ 134.25 ಪಾಯಿಂಟ್ಸ್ ಹೆಚ್ಚಳವಾಗಿದೆ. ದೇಶದ ಅತಿ ಮೌಲ್ಯಯುತ ಮಾರುಕಟ್ಟೆ ಮೌಲ್ಯವು ರೂ. 12,24,336.42 ಕೋಟಿ ಇದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮಾರುಕಟ್ಟೆ ಮೌಲ್ಯವು 11,58,542.89 ಕೋಟಿ ಮುಟ್ಟಿದೆ.

2020ರಲ್ಲಿ ಸೆನ್ಸೆಕ್ಸ್ ಶೇ 15.75ರಷ್ಟು ಏರಿಕೆ ಕಂಡಿದೆ. ಅದೇ ವರ್ಷದಲ್ಲಿ ಭಾರೀ ಮಾರಾಟ ಮತ್ತು ಖರೀದಿ ಎರಡೂ ಕಂಡುಬಂದಿದೆ. ಈ ವರ್ಷದ ಆರಂಭದಿಂದ ಸೆನ್ಸೆಕ್ಸ್ ಶೇ 3.05ರಷ್ಟು ಏರಿಕೆ ಕಂಡಿದ್ದು, ಹೂಡಿಕೆದಾರರ ಸಂಪತ್ತು 23.20 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅಂದಹಾಗೆ ಇಂದಿನ ವಹಿವಾಟಿನಲ್ಲಿ 274 ಕಂಪೆನಿಯ ಷೇರುಗಳು ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದರೆ, 39 ಕಂಪೆನಿಯ ಷೇರುಗಳು ವಾರ್ಷಿಕ ಕನಿಷ್ಠ ಮಟ್ಟವನ್ನು ತಲುಪಿದವು. 349 ಕಂಪೆನಿಯ ಷೇರುಗಳು ಅಪ್ಪರ್ ಸರ್ಕ್ಯೂಟ್ಸ್ (ಒಂದು ದಿನದಲ್ಲಿ ಕಾಣಬಹುದಾದ ಗರಿಷ್ಠ ಏರಿಕೆ ಮಿತಿ) ಮತ್ತು 186 ಕಂಪೆನಿಯ ಷೇರುಗಳು ಲೋಯರ್ ಸರ್ಕ್ಯೂಟ್ (ಒಂದು ದಿನದಲ್ಲಿ ಕಾಣಬಹುದಾದ ಗರಿಷ್ಠ ಇಳಿಕೆ ಮಿತಿ) ಕಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿವ್ವಳ ಖರೀದಿಯಾಗಿ 5.31 ಬಿಲಿಯನ್ ಅಮೆರಿಕನ್ ಡಾಲರ್​ನಷ್ಟು ನಿವ್ವಳ ಖರೀದಿಯನ್ನು ಈಕ್ವಿಟಿಯಲ್ಲಿ ಮಾಡಿದ್ದಾರೆ. ಸಾಲಪತ್ರಗಳಲ್ಲಿ ನಿವ್ವಳ ಮಾರಾಟ 2.30 ಬಿಲಿಯನ್ ಅಮೆರಿಕನ್ ಡಾಲರ್ ಮಾಡಿದ್ದಾರೆ. ಈ ಲೆಕ್ಕಾಚಾರವು ವರ್ಷದ ಆರಂಭದಿಂದ ಇಲ್ಲಿಯ ತನಕದ್ದು. ಇನ್ನು ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳವಾಗಿ ರೂ. 11,368.46 ಕೋಟಿ ರೂಪಾಯಿ ಮೌಲ್ಯದ ಸ್ಟಾಕ್ಸ್​ಗಳ ಮಾರಾಟ ಮಾಡಿದ್ದಾರೆ. ಈ ಅಂಕಿ- ಅಂಶವನ್ನು ಎಕ್ಸ್​ಚೇಂಜ್ ತೆರೆದಿಟ್ಟಿದೆ.

ಇದನ್ನೂ ಓದಿ: Closing bell: ಷೇರುಪೇಟೆ ಸೂಚ್ಯಂಕಗಳಲ್ಲಿ 3ನೇ ದಿನವೂ ಮುಂದುವರಿದ ಏರಿಕೆ

(Bombay Stock Exchange (BSE) listed companies market capitalisation crossed record Rs 211 lakh crore on May 7, 2021)