
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಪ್ರಾರಂಭಿಸಿದ ಪತಂಜಲಿ ಆಯುರ್ವೇದ ಸಂಸ್ಥೆಯು (Patanjali Ayurved) ಮಾರುಕಟ್ಟೆಯಲ್ಲಿ ತನ್ನ ಗುಲಾಬಿ ಶರಬತ್ (Gulab Sharbat) ಜೊತೆಗೆ ಖುಸ್ ಶರಬತ್ ಮತ್ತು ಬೇಲ್ ಶರಬತ್ (ಸೇಬು ಹಣ್ಣಿನ ರಸ) ಪೂರೈಕೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಬಿಸಿಲಿನ ನಡುವೆಯೂ ಸಾಮಾನ್ಯ ಜನರ ಆರೋಗ್ಯವನ್ನು ಕಾಪಾಡುವ ಕಂಪನಿಯ ಉದ್ದೇಶವೇ ಇದರ ಹಿಂದಿನ ಕಾರಣ. ಪತಂಜಲಿ ಆಯುರ್ವೇದದ ಅತಿದೊಡ್ಡ ಐಡೆಂಟಿಟಿ ಎಂದರೆ ಅದರ ಉತ್ಪನ್ನಗಳು ಆಯುರ್ವೇದ ಪ್ರಯೋಜನಗಳ ಜೊತೆಗೆ ಉತ್ತಮ ಪದಾರ್ಥಗಳಿಂದ ತಯಾರಿಸಲ್ಪಟ್ಟಿವೆ.
ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಪತಂಜಲಿ ಆಯುರ್ವೇದ ಆರಂಭದ ಹಂತದಲ್ಲೇ ಜನರಿಗೆ ಆಯುರ್ವೇದದ ಪ್ರಯೋಜನಗಳನ್ನು ಒದಗಿಸುವ ಉತ್ಪನ್ನಗಳನ್ನು ತಯಾರಿಸಲು ಸಂಕಲ್ಪ ತೊಟ್ಟಿದ್ದರು. ಲಾಭ ಗಳಿಸುವ ಉದ್ದೇಶದ ಬದಲು ಜನರ ಆರೋಗ್ಯ ಕಾಪಾಡುವ ಕಾಳಜಿ ಇತ್ತು.
ಇದನ್ನೂ ಓದಿ: ವಿದೇಶೀ ಹೂಡಿಕೆಗಳಿಲ್ಲ, ಖಾಸಗಿ ಜೆಟ್ಗಳಿಲ್ಲ… ರಾಷ್ಟ್ರೀಯತೆಯ ಮಂತ್ರದೊಂದಿಗೆ ಪತಂಜಲಿ ಕಟ್ಟಿದ ಬಾಬಾ ರಾಮದೇವ್
ಪತಂಜಲಿ ಇಂದು FMCG ಸೆಕ್ಟರ್ನಲ್ಲಿ ಬಹಳ ದೊಡ್ಡ ಕಂಪನಿಯಾಗಿದೆ. ಪತಂಜಲಿ ಬಯಸಿದ್ದಲ್ಲಿ, ಕೋಲಾ, ಕಾರ್ಬೊನೇಟೆಡ್ ಅಥವಾ ಸೋಡಾ ಆಧಾರಿತ ಪಾನೀಯಗಳ ಮಾರುಕಟ್ಟೆಯನ್ನು ಪ್ರವೇಶಿಸಬಹುದಿತ್ತು. ಇನ್ನೂ ಹೆಚ್ಚಿನ ಪಾಲು ಮತ್ತು ಗಳಿಕೆಯನ್ನು ನೀಡಬಹುದಿತ್ತು. ಆದರೆ ಪತಂಜಲಿ ಜನರ ಆರೋಗ್ಯವನ್ನು ಸುರಕ್ಷಿತವಾಗಿಡುವ ಮಾರ್ಗವನ್ನು ಆರಿಸಿಕೊಂಡಿತು. ಕಂಪನಿಯು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಪರಿಣಾಮವನ್ನು ನೀಡುವ ಗುಲಾಬ್ ಶರ್ಬತ್, ಖುಸ್ ಶರ್ಬತ್ ಮತ್ತು ಬೇಲ್ ಶರ್ಬತ್ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿತು.
ಪತಂಜಲಿ ಆಯುರ್ವೇದ ತನ್ನ ಗುಲಾಬಿ ಶರಬತ್ತನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುತ್ತದೆ. ಇದಕ್ಕಾಗಿ ಗುಲಾಬಿಗಳನ್ನು ಮಧ್ಯವರ್ತಿಗಳ ಬದಲು ನೇರವಾಗಿ ರೈತರಿಂದ ಖರೀದಿಸಲಾಗುತ್ತದೆ. ನೇರವಾಗಿ ಖರೀದಿಸುವುದರಿಂದ ಹೂವುಗಳಲ್ಲಿ ಕಲ್ಮಶಗಳ ಅಪಾಯ ಕಡಿಮೆಯಾಗುತ್ತದೆ ಮತ್ತು ಜನರ ಆರೋಗ್ಯಕ್ಕೆ ಉತ್ಕೃಷ್ಟ ಶರಬತ್ತು ತಯಾರಾಗುತ್ತದೆ.
ಇದನ್ನೂ ಓದಿ: ಶಿಕ್ಷಣ, ಆರೋಗ್ಯ ಮಾತ್ರವಲ್ಲ, ಪತಂಜಲಿ ಗುಲಾಬ್ ಸಿರಪ್ನ ಪ್ರತಿ ಹನಿಯಲ್ಲೂ ‘ರಾಷ್ಟ್ರಸೇವೆ’
ಇಷ್ಟೇ ಅಲ್ಲ, ಪತಂಜಲಿ ಆಯುರ್ವೇದವು ಗುಲಾಬಿ ಶರಬತ್ತನ್ನು ನೈಸರ್ಗಿಕವಾಗಿ ತಯಾರಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಇದರಲ್ಲಿ ಬಳಸಲಾಗುವ ಹೆಚ್ಚಿನ ಹೂವುಗಳು ಸಾವಯವ ಕೃಷಿಯಿಂದ ಚಿಗುರಿದಂಥವು. ಈ ಶರಬತ್‌ನಲ್ಲಿ ಗುಲಾಬಿಯೊಂದಿಗೆ ಇತರ ಔಷಧೀಯ ಗಿಡಮೂಲಿಕೆಗಳನ್ನು ಬೆರೆಸಲಾಗಿದೆ. ಇವು ಬೇಸಿಗೆಯಲ್ಲಿ ನಿಮಗೆ ತಂಪನ್ನು ನೀಡುವುದರ ಜೊತೆಗೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Mon, 21 April 25