
ದೇಶದ ಪ್ರಸಿದ್ಧ FMCG ಕಂಪನಿ ಪತಂಜಲಿ ದೀಪಾವಳಿಗೂ ಮುನ್ನ ಷೇರುದಾರರಿಗೆ ಬಂಪರ್ ಉಡುಗೊರೆ ನೀಡಲಿದೆ. ಕಂಪನಿಯು ಹೂಡಿಕೆದಾರರಿಗೆ (Patanjali shareholders) 1 ಷೇರಿನ ಮೇಲೆ 2 ಷೇರುಗಳ ಬೋನಸ್ ನೀಡಲಿದೆ. ಇದಕ್ಕಾಗಿ ರೆಕಾರ್ಡ್ ಡೇಟ್ ಸಹ ಘೋಷಿಸಲಾಗಿದೆ. ಬಾಬಾ ರಾಮದೇವ್ ನೇತೃತ್ವದ ಕಂಪನಿಯಾದ ಪತಂಜಲಿ ಫುಡ್ಸ್ ಲಿಮಿಟೆಡ್ ಸಂಸ್ಥೆ ಬೋನಸ್ ಷೇರುಗಳಿಗಾಗಿ ರೆಕಾರ್ಡ್ ದಿನವನ್ನು 2025ರ ಸೆಪ್ಟೆಂಬರ್ 11ರ ದಿನಾಂಕವನ್ನು ಆಯ್ಕೆ ಮಾಡಿದೆ.
ಪತಂಜಲಿ ಫುಡ್ಸ್ ಲಿಮಿಟೆಡ್ ಪ್ರಸ್ತುತ ಬಿಎಸ್‌ಇಯಲ್ಲಿ ಲಿಸ್ಟ್ ಆಗಿದೆ. ಹೂಡಿಕೆದಾರರಿಗೆ ರೂ. 2 ಮುಖಬೆಲೆಯ ಒಂದು ಷೇರು ಮೇಲೆ 2 ಷೇರುಗಳನ್ನು ಬೋನಸ್ ಆಗಿ ನೀಡಲಾಗುವುದು ಎಂದು ಕಂಪನಿಯು ಇತ್ತೀಚೆಗೆ ಸಲ್ಲಿಸಿದ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ಇದಕ್ಕಾಗಿ ಕಂಪನಿಯು ಮುಂದಿನ ತಿಂಗಳು, ಅಂದರೆ ಸೆಪ್ಟೆಂಬರ್ 11, 2025 ರಂದು ದಾಖಲು ದಿನವಾಗಿ (ರೆಕಾರ್ಡ್ ಡೇಟ್) ನಿಗದಿಪಡಿಸಿದೆ.
ಇದೇ ವೇಳೆ, ಬೋನಸ್ ಷೇರುಗಳನ್ನು ನೀಡುವ ಮೊದಲು ಕಂಪನಿಯು ಲಾಭಾಂಶವನ್ನು (ಡಿವಿಡೆಂಡ್) ಸಹ ನೀಡುತ್ತಿದೆ. ಪತಂಜಲಿ ಇದಕ್ಕಾಗಿ ಸೆಪ್ಟೆಂಬರ್ 3ರ ದಿನಾಂಕವನ್ನು ನಿಗದಿಪಡಿಸಿದೆ. ಬಾಬಾ ರಾಮದೇವ್ ನೇತೃತ್ವದ ಈ ಕಂಪನಿಯು 1 ಷೇರಿಗೆ 2 ರೂ.ಗಳ ಲಾಭಾಂಶವನ್ನು ಸಹ ನೀಡುತ್ತಿದೆ. ಒಂದು ಷೇರಿನ ಅದರ ಮುಖಬೆಲೆ ಶೇ. 100ರಷ್ಟು ಹಣವನ್ನು ಡಿವಿಡೆಂಡ್ ಆಗಿ ನೀಡುತ್ತಿದೆ. ಈ ಹಿಂದೆ, 2024ರಲ್ಲಿ ಈ ಸಂಸ್ಥೆಯು ತನ್ನ ಹೂಡಿಕೆದಾರರಿಗೆ ಎರಡು ಬಾರಿ ಡಿವಿಡೆಂಡ್ ಬಿಡುಗಡೆ ಮಾಡಿತ್ತು. ಮೊದಲು 8 ರೂ.ಗಳ ಲಾಭಾಂಶ ಮತ್ತು ಎರಡನೇ ಬಾರಿಗೆ 14 ರೂ.ಗಳ ಲಾಭಾಂಶವನ್ನು ನೀಡಲಾಯಿತು.
ಇದನ್ನೂ ಓದಿ: ಜುಲೈನಲ್ಲಿ ಷೇರು ಧಮಾಕ ಸೃಷ್ಟಿಸಿರುವ ಪತಂಜಲಿ ಫೂಡ್ಸ್; ಅದರ ತ್ರೈಮಾಸಿಕ ವರದಿ ಎಲ್ಲರ ಚಿತ್ತ
ಪತಂಜಲಿ ಫುಡ್ಸ್ ಲಿಮಿಟೆಡ್ ಜೂನ್ ತ್ರೈಮಾಸಿಕದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ತೋರಿಸಿದೆ. ಕಂಪನಿಯು ಒಟ್ಟು 8,899.70 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 7,177.17 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಕಂಪನಿಯ ಒಟ್ಟು ಲಾಭ 1,259.19 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷಕ್ಕಿಂತ 23.81% ಹೆಚ್ಚಾಗಿದೆ. ತೆರಿಗೆ ನಂತರದ ಲಾಭ (ಪಿಎಟಿ) 180.39 ಕೋಟಿ ರೂ.ಗಳಾಗಿದೆ.
ಇದನ್ನೂ ಓದಿ: Patanjali-LIC: ಎಲ್ಐಸಿಗೆ ಭಾರೀ ನಷ್ಟ ತಂದಿತ್ತ ಟಾಟಾ, ಅಂಬಾನಿ; ಕೈಹಿಡಿದ ಪತಂಜಲಿ
ಕೊನೆಯ ವಹಿವಾಟಿನ ದಿನವಾದ ಶುಕ್ರವಾರ, ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಂಡಿತು. ಮಾರುಕಟ್ಟೆಯ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್ 693.86 ಅಂಕಗಳ ಕುಸಿತದೊಂದಿಗೆ 81,306.85 ಕ್ಕೆ ಮುಕ್ತಾಯವಾಯಿತು. ಸೆನ್ಸೆಕ್ಸ್‌ನ ದೊಡ್ಡ ಷೇರುಗಳೂ ಕೂಡ ಸಾಕಷ್ಟು ಮಾರಾಟ ಕಂಡವು. ಈ ಕುಸಿತದ ಪರಿಣಾಮವು ಪತಂಜಲಿ ಫುಡ್ಸ್ ಮೇಲೂ ಬೀರಿತು. ಶುಕ್ರವಾರ ಅದರ ಷೇರುಬೆಲೆ ಶೇ. 0.47ರಷ್ಟು ಇಳಿಕೆ ಕಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ