
ದೇಶೀಯ ಎಫ್ ಎಮ್ ಸಿ ಜಿ (FMCG) ಕಂಪನಿ ಪತಂಜಲಿ (Patanjali) ಫುಡ್ಸ್ ಆದಾಯ ಮತ್ತು ಲಾಭದಲ್ಲಿ (Profit and Revenue) ನಿರಂತರ ಹೆಚ್ಚಳ ಕಾಣುತ್ತಿದೆ. ಈ ಕಾರಣದಿಂದಲೇ ಬಾಬಾ ರಾಮದೇವ್ ಅವರ ಕಂಪನಿಯು ವಿಶ್ವದ ಕೆಲವು ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಿದೆ. ಇನ್ನು ನಾಲ್ಕನೇ ತ್ರೈಮಾಸಿಕದ ಅಂಕಿ ಅಂಶಗಳನ್ನು ನೋಡಿದರೆ, ಕಂಪನಿಯ ಲಾಭದಲ್ಲಿ ಶೇಕಡಾ 74 ರಷ್ಟು ಏರಿಕೆ ಕಂಡುಬಂದಿದೆ. ಹೆಚ್ಚುವರಿಯಾಗಿ, ಕಂಪನಿಯ ಆದಾಯದಲ್ಲೂ ಹೆಚ್ಚಳ ಕಂಡು ಬಂದಿದೆ. ಕುತೂಹಲಕಾರಿ ವಿಷಯವೇನೆಂದರೆ ಕಂಪನಿಯು ನಾಲ್ಕನೇ ತ್ರೈಮಾಸಿಕದ ಅಂಕಿ ಅಂಶಗಳಜೊತೆಗೆ ಇಡೀ ಹಣಕಾಸು ವರ್ಷದ ಡೇಟಾವನ್ನು ಸಹ ಪ್ರಸ್ತುತಪಡಿಸಿದ್ದು ಇದರಲ್ಲಿಯೂ ಹೆಚ್ಚಳ ಕಂಡುಬಂದಿದೆ. ಈ ಹಿಂದೆ, ಕಂಪನಿಯ ಷೇರುಗಳು ಸುಮಾರು ಒಂದೂವರೆ ಪ್ರತಿಶತದಷ್ಟು ಏರಿಕೆಯನ್ನು ಕಂಡಿದ್ದವು.
ಕಳೆದ ಹಣಕಾಸು ವರ್ಷದ ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಪತಂಜಲಿ ಫುಡ್ಸ್ ಲಿಮಿಟೆಡ್‌ನ ನಿವ್ವಳ ಲಾಭವು ಶೇ. 74 ರಷ್ಟು ಏರಿಕೆಯಾಗಿ 358.53 ಕೋಟಿ ರೂಪಾಯಿಗಳಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ 2023- 24 ರ ಇದೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 206.31 ಕೋಟಿ ರೂಪಾಯಿಗಳಷ್ಟಿತ್ತು. ಈಗ ಪತಂಜಲಿ ಫುಡ್ಸ್ ಲಿಮಿಟೆಡ್ ಗುರುವಾರ ಷೇರು ಮಾರುಕಟ್ಟೆಗೆ ನೀಡಿದ ಅಧಿಸೂಚನೆಯಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಒಟ್ಟು ಆದಾಯ 9,744.73 ಕೋಟಿ ರೂಪಾಯಿಗಳಾಗಿದ್ದು, 2023-24 ರ ಇದೇ ತ್ರೈಮಾಸಿಕದಲ್ಲಿ ಇದು 8,348.02 ಕೋಟಿ ರೂಪಾಯಿಗಳಷ್ಟಿತ್ತು ಎಂದು ತಿಳಿಸಿದೆ.
ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಬರದಂತೆ ತಡೆಯಲು ಪತಂಜಲಿಯ ಈ ಔಷಧಿಗಳನ್ನು ತೆಗೆದುಕೊಳ್ಳಿ
2024- 25ರ ಸಂಪೂರ್ಣ ಹಣಕಾಸು ವರ್ಷದ ಬಗ್ಗೆ ಮಾತನಾಡುವುದಾದರೆ ಕಂಪನಿಯ ಲಾಭದಲ್ಲಿ ಅಗಾಧವಾದ ಏರಿಕೆ ಕಂಡುಬಂದಿದೆ. ಅಂಕಿ ಅಂಶಗಳನ್ನು ನೋಡಿದರೆ, ಕಂಪನಿಯ ನಿವ್ವಳ ಲಾಭವು 1,301.34 ಕೋಟಿಗಳಿಗೆ ಏರಿದೆ, ಇದು 2023- 24ರ ಹಣಕಾಸು ವರ್ಷದಲ್ಲಿ 765.15 ಕೋಟಿಗಳಷ್ಟಿತ್ತು. ಆದಾಯದ ಬಗ್ಗೆ ಮಾತನಾಡಿದರೆ, ಕಂಪನಿಯ ಒಟ್ಟು ಆದಾಯವು 2023- 24ರ ಹಣಕಾಸು ವರ್ಷದಲ್ಲಿ 31,961.62 ಕೋಟಿಗಳಿಗೆ ಹೋಲಿಸಿದರೆ 2024- 25ರ ಹಣಕಾಸು ವರ್ಷದಲ್ಲಿ 34,289.40 ಕೋಟಿಗಳಿಗೆ ಏರಿದೆ.
ಗುರುವಾರ ಷೇರು ಮಾರುಕಟ್ಟೆಯಲ್ಲಿ ಪತಂಜಲಿ ಷೇರುಗಳಲ್ಲಿ ಏರಿಕೆ ಕಂಡು ಬಂದಿದೆ. ಅಂಕಿ ಅಂಶಗಳನ್ನು ನೋಡಿದರೆ, ಕಂಪನಿಯ ಷೇರು 1.41 ಪ್ರತಿಶತ ಅಥವಾ ಪ್ರತಿ ಷೇರಿಗೆ 25.20 ರೂಪಾಯಿಗಳಷ್ಟು ಏರಿಕೆಯಾಗಿ 1811.35 ರೂಪಾಯಿಯಾಗಿತ್ತು. ಏತನ್ಮಧ್ಯೆ, ಕಂಪನಿಯ ಷೇರು 1795.95 ರೂಪಾಯಿಗಳಲ್ಲಿ ಪ್ರಾರಂಭವಾಗಿ ಒಂದು ದಿನದಲ್ಲಿ ಗರಿಷ್ಠ 1824 ರೂಪಾಯಿಗಳನ್ನು ತಲುಪಿತ್ತು. ಪತಂಜಲಿ ಫುಡ್ಸ್ ಷೇರುಗಳು 52 ವಾರಗಳಲ್ಲಿ ಗರಿಷ್ಠ 2,030 ಆಗಿದೆ. ಪ್ರಸ್ತುತ, ಕಂಪನಿಯ ಮೌಲ್ಯ 65,603.03 ಕೋಟಿ ರೂಪಾಯಿಗಳು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ