ಪತಂಜಲಿ ಆದಾಯದಲ್ಲಿ ಶೇ. 24 ಹೆಚ್ಚಳ; ಷೇರುದಾರರಿಗೆ ಶೇ. 100 ಡಿವಿಡೆಂಡ್ ಘೋಷಣೆ
Patanjali Foods revenue increases in Q1: ಪತಂಜಲಿ ಫೂಡ್ಸ್ ಸಂಸ್ಥೆ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ಗನ ರಿಸಲ್ಟ್ಸ್ ಪ್ರಕಟಿಸಿದೆ. ಅದರ ನಿವ್ವಳ ಲಾಭ ಕಡಿಮೆ ಆದರೂ, ಒಟ್ಟಾರೆ ಆದಾಯ ಸಾಕಷ್ಟು ಏರಿಕೆ ಆಗಿದೆ. 2024-25ರ ವರ್ಷಕ್ಕೆ ಅದರ ಷೇರುದಾರರಿಗೆ ನೂರಕ್ಕೆ ನೂರು, ಅಂದರೆ, ಪ್ರತೀ ಷೇರಿಗೆ 2 ರೂ ಡಿವಿಡೆಂಡ್ ಘೋಷಿಸಿದೆ.

ನಗರ ಮಾರುಕಟ್ಟೆಯಲ್ಲಿ ದುರ್ಬಲ ಬೇಡಿಕೆ ಹಾಗೂ ಪ್ರಾದೇಶಿಕ ಮತ್ತು ಹೊಸ D2C ಬ್ರ್ಯಾಂಡ್ಗಳಿಂದ ಹೆಚ್ಚುತ್ತಿರುವ ಸ್ಪರ್ಧೆ, ಇವೇ ಮುಂತಾದ ಸವಾಲುಗಳ ಮಧ್ಯೆ ಪತಂಜಲಿ ಫೂಡ್ಸ್ ಸಂಸ್ಥೆ ಉತ್ತಮ ಆದಾಯ ಹೆಚ್ಚಳ ಕಂಡಿದೆ. ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ, ಜೂನ್ ಅಂತ್ಯದ ತ್ರೈಮಾಸಿಕದ ವರದಿಯನ್ನು ಪತಂಜಲಿ ಫೂಡ್ಸ್ ಲಿಮಿಟೆಡ್ ಸಂಸ್ಥೆ ಮೊನ್ನೆ ಪ್ರಕಟಿಸಿದೆ. ಇದರ ಪ್ರಕಾರ ಸಂಸ್ಥೆಯ ಆದಾಯದಲ್ಲಿ ಶೇ. 24ರಷ್ಟು ಹೆಚ್ಚಳವಾಗಿದೆ. ಲಾಭದಲ್ಲಿ ಇಳಿಮುಖವಾದರೂ ಗ್ರಾಮೀಣ ಭಾಗದಲ್ಲಿ ಸ್ಥಿರ ಬೇಡಿಕೆಯಿಂದಾಗಿ ಆದಾಯ ಹೆಚ್ಚಾಗಿದೆ. ಇದೇ ವೇಳೆ ಸಂಸ್ಥೆಯು ಷೇರುದಾರರಿಗೆ (share holders) ನೂರಕ್ಕೆ ನೂರು ಡಿವಿಡೆಂಡ್ ನೀಡಲು ನಿರ್ಧರಿಸಿದೆ.
ಮೊದಲ ಕ್ವಾರ್ಟರ್ನಲ್ಲಿ ಕಂಪನಿಯ ಆಪರೇಷನ್ಸ್ನಿಂದ 8,899.70 ಕೋಟಿ ರೂ. ಆದಾಯ ಬಂದಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಇದು 7,177.17 ಕೋಟಿ ರೂ ಇತ್ತು. ಈಗ ಆದಾಯ ಶೇ. 24ರಷ್ಟು ಹೆಚ್ಚಾಗಿದೆ. ಕಂಪನಿಯ ಒಟ್ಟು ಲಾಭ 1,259.19 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷದಕ್ಕಿಂತ 23.81% ಹೆಚ್ಚಳವಾಗಿದೆ. ಕಂಪನಿಯ ತೆರಿಗೆ ನಂತರದ ಲಾಭ (ಪಿಎಟಿ) 180.39 ಕೋಟಿ ರೂ.ಗಳಾಗಿದ್ದು, ಇದರ ಮಾರ್ಜಿನ್ 2.02% ಇದೆ.
ಇದನ್ನೂ ಓದಿ: ಎಲ್ಐಸಿಗೆ ಭಾರೀ ನಷ್ಟ ತಂದಿತ್ತ ಟಾಟಾ, ಅಂಬಾನಿ; ಕೈಹಿಡಿದ ಪತಂಜಲಿ
ಪತಂಜಲಿಯ ಕೈಹಿಡಿದ ಸೆಕ್ಟರ್ಗಳು
ಜೂನ್ ತ್ರೈಮಾಸಿಕ ಫಲಿತಾಂಶದಲ್ಲಿ ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯು ಒಟ್ಟು 8,899.70 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಇದರಲ್ಲಿ ಆಹಾರ ಮತ್ತು ಇತರ ಎಫ್‌ಎಂಸಿಜಿ ವಿಭಾಗವು 1660.67 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ, ಗೃಹ ಮತ್ತು ವೈಯಕ್ತಿಕ ಆರೈಕೆ ವಿಭಾಗವು 639.02 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ ಮತ್ತು ಖಾದ್ಯ ತೈಲ ವಿಭಾಗವು 6,685.86 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ.
ಗ್ರಾಹಕರ ಖರೀದಿ ಮನೋಭಾವ
ನಗರ ಗ್ರಾಹಕರಲ್ಲಿ ಅಗ್ಗದ ಅಥವಾ ಚಿಕ್ಕ ಪ್ಯಾಕ್‌ಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚಾಗಿದೆ. ಪ್ರಾದೇಶಿಕ ಬ್ರ್ಯಾಂಡ್‌ಗಳತ್ತ ಒಲವು ಕೂಡ ಇದೆ. ಕಂಪನಿಯು ಸಣ್ಣ ಪ್ಯಾಕ್‌ಗಳು ಮತ್ತು ಮೌಲ್ಯಯುತ ಉತ್ಪನ್ನಗಳ ಮೂಲಕ ಈ ಪ್ರವೃತ್ತಿಯ ಲಾಭ ಮಾಡಿಕೊಂಡಿತು.
ಇದನ್ನೂ ಓದಿ: ರೈತರಿಗೆ ಬಲ ನೀಡುತ್ತಿರುವ ಪತಂಜಲಿ ‘ಕಿಸಾನ್ ಸಮೃದ್ಧಿ ಯೋಜನೆ’
FY25ಕ್ಕೆ ಪತಂಜಲಿ ಷೇರುದಾರರಿಗೆ ಶೇ. 100 ಲಾಭಾಂಶ
ಜೂನ್ 2025 ರ ತ್ರೈಮಾಸಿಕದ ಫಲಿತಾಂಶಗಳನ್ನು ಬಿಡುಗಡೆ ಮಾಡುವುದರ ಜೊತೆಗೆ, ಪತಂಜಲಿ ಫುಡ್ಸ್ 2025 ರ ಹಣಕಾಸು ವರ್ಷಕ್ಕೆ ಡಿವಿಡೆಂಡ್ ಘೋಷಿಸಿದೆ. 2 ರೂ ಫೇಸ್ ವ್ಯಾಲ್ಯೂ ಇರುವ ಪ್ರತೀ ಷೇರಿಗೆ ಶೇ. 100, ಅಂದರೆ 2 ರೂ ಡಿವಿಡೆಂಡ್ ಅನ್ನು ನೀಡುವುದಾಗಿ ಸಂಸ್ಥೆಯು ತನ್ನ ಸೆಕ್ಯೂರಿಟಿ ಫೈಲಿಂಗ್ನಲ್ಲಿ ತಿಳಿಸಿದೆ. ಡಿವಿಡೆಂಡ್ಗೆ ಅರ್ಹರಾಗಿರುವ ಷೇರುದಾರರನ್ನು ಗುರುತಿಸಲು ಸೆಪ್ಟೆಂಬರ್ 3 ಅನ್ನು ರೆಕಾರ್ಡ್ ಡೇಟ್ ಎಂದು ನಗದಿ ಮಾಡಲಾಗಿದೆ. ಪತಂಜಲಿ ಫುಡ್ಸ್ ಜುಲೈ ತಿಂಗಳಲ್ಲಿ 2:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಘೋಷಿಸಿತ್ತು. ಇದರರ್ಥ ಷೇರುದಾರರು ತಾವು ಹೊಂದಿರುವ ಪ್ರತಿ 1 ಷೇರಿಗೆ 2 ಹೊಸ ಷೇರುಗಳನ್ನು ಬೋನಸ್ ಆಗಿ ಪಡೆಯುತ್ತಾರೆ. ಬೋನಸ್ ವಿತರಣೆಗೆ ರೆಕಾರ್ಡ್ ಡೇಟ್ ಇನ್ನೂ ನಿರ್ಧರಿಸಲಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




