ಇದಕ್ಕಿಂತ ಕಡಿಮೆಗೆ ಸಿಕ್ಕರೆ ಎರಡು ಪಟ್ಟು ಹಣ ರೀಫಂಡ್; ಪೇಟಿಎಂನಲ್ಲಿ ಪ್ರೈಸ್ ಗ್ಯಾರಂಟಿ ಆಫರ್

|

Updated on: Nov 01, 2023 | 4:57 PM

Paytm Carnival sale: ಪೇಟಿಎಂ ಪ್ಲಾಟ್​ಫಾರ್ಮ್​ನಲ್ಲಿ ಆಫರ್ ಮಾಡಲಾಗುವ ದರಕ್ಕಿಂತ ಕಡಿಮೆ ಬೆಲೆಗೆ ಯಾವುದೇ ಪ್ಲಾಟ್​ಫಾರ್ಮ್​ನಲ್ಲಿ ಫ್ಲೈಟ್ ಟಿಕೆಟ್ ಸಿಕ್ಕಿದರೆ ಎರಡು ಪಟ್ಟು ಹಣವನ್ನು ರೀಫಂಡ್ ಮಾಡುವುದಾಗಿ ಹೇಳಲಾಗಿದೆ. ವಿಮಾನ ಮಾತ್ರವಲ್ಲ ಬಸ್ ಟಿಕೆಟ್​ಗೂ ಪೇಟಿಎಂ ಬೆಸ್ಟ್ ಪ್ರೈಸ್ ನೀಡುತ್ತಿದೆ. ತನ್ನ ಪ್ಲಾಟ್​ಫಾರ್ಮ್​ನಲ್ಲಿ ಬಸ್ ಟಿಕೆಟ್ ಅತಿ ಕಡಿಮೆ ಎಂದು ಪೇಟಿಎಂ ಹೇಳಿಕೊಂಡಿದೆ.

ಇದಕ್ಕಿಂತ ಕಡಿಮೆಗೆ ಸಿಕ್ಕರೆ ಎರಡು ಪಟ್ಟು ಹಣ ರೀಫಂಡ್; ಪೇಟಿಎಂನಲ್ಲಿ ಪ್ರೈಸ್ ಗ್ಯಾರಂಟಿ ಆಫರ್
ಪೇಟಿಎಂ
Follow us on

ನವೆಂಬರ್ 1: ಹಣಕಾಸು ತಂತ್ರಜ್ಞಾನ ಸಂಸ್ಥೆ ಪೇಟಿಎಂ (Paytm) ತನ್ನ ಪ್ಲಾಟ್​ಫಾರ್ಮ್​ನಲ್ಲಿ ಸಖತ್ ಆಫರ್​ಗಳನ್ನು ಗ್ರಾಹಕರ ಮುಂದಿಟ್ಟಿದೆ. ಅದರಲ್ಲೂ ಫ್ಲೈಟ್, ರೈಲು ಮತ್ತು ಬಸ್ಸುಗಳ ಟಿಕೆಟ್ ಬುಕಿಂಗ್​ಗೆ ಡಿಸ್ಕೌಂಟ್ ಸೇರಿದಂತೆ ವಿವಿಧ ಆಫರ್​ಗಳಿವೆ. ಅಕ್ಟೋಬರ್ 27ರಂದೇ ಶುರುವಾದ ಕಾರ್ನಿವಲ್ ಸೇಲ್ (Paytm carnival sale) ನವೆಂಬರ್ 5ಕ್ಕೆ ಮುಗಿಯುತ್ತದೆ. ವಿಮಾನ ಟಿಕೆಟ್​ಗಳಿಗಂತೂ ಬಹಳಷ್ಟು ರಿಯಾಯಿತಿಗಳನ್ನು ಪೇಟಿಎಂ ಘೋಷಿಸಿದೆ.

ದೇಶೀಯ ಫ್ಲೈಟ್​ಗಳಿಗೆ ಶೇ. 15ರಷ್ಟು ಇನ್ಸ್​ಟೆಂಟ್ ಡಿಸ್ಕೌಂಟ್ ಕೊಡಲಾಗುತ್ತಿದೆ. ಅಂತಾರಾಷ್ಟ್ರೀಯ ಫ್ಲೈಟ್​​ಗಳಿಗೆ ಶೇ. 10ರಷ್ಟು ರಿಯಾಯಿತಿ ಇದೆ. ಈ ಆಫರ್ ನವೆಂಬರ್ 5ರವರೆಗೂ ಮಾತ್ರವೇ ಇರುವುದು. ಇಂಡಿಗೋ, ವಿಸ್ತಾರ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್​ಪ್ರೆಸ್, ಸ್ಪೈಸ್​ಜೆಟ್, ಸ್ಟಾರ್ ಏರ್ ಮತ್ತು ಆಕಾಸ ಏರ್​ಲೈನ್ಸ್ ಸಂಸ್ಥೆಗಳ ಫ್ಲೈಟ್​ಗಳ ಬುಕಿಂಗ್​ಗೆ ಪೇಟಿಎಂ ಈ ಭರ್ಜರಿ ಡಿಸ್ಕೌಂಟ್​​ಗಳನ್ನು ಕೊಟ್ಟಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಎರಡನೇ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್; ಈ ವರ್ಷ ಯಾವ ರಾಜ್ಯಗಳಿಗೆ ಎಷ್ಟು ತೆರಿಗೆ ಪಾಲು ಕೊಟ್ಟಿದೆ ಕೇಂದ್ರ?

ಬೆಸ್ಟ್ ಪ್ರೈಸ್ ಗ್ಯಾರಂಟಿ

ಪೇಟಿಎಂ ಪ್ಲಾಟ್​ಫಾರ್ಮ್​ನಲ್ಲಿ ಆಫರ್ ಮಾಡಲಾಗುವ ದರಕ್ಕಿಂತ ಕಡಿಮೆ ಬೆಲೆಗೆ ಯಾವುದೇ ಪ್ಲಾಟ್​ಫಾರ್ಮ್​ನಲ್ಲಿ ಫ್ಲೈಟ್ ಟಿಕೆಟ್ ಸಿಕ್ಕಿದರೆ ಎರಡು ಪಟ್ಟು ಹಣವನ್ನು ರೀಫಂಡ್ ಮಾಡುವುದಾಗಿ ಹೇಳಲಾಗಿದೆ. ವಿಮಾನ ಮಾತ್ರವಲ್ಲ ಬಸ್ ಟಿಕೆಟ್​ಗೂ ಪೇಟಿಎಂ ಬೆಸ್ಟ್ ಪ್ರೈಸ್ ನೀಡುತ್ತಿದೆ. ತನ್ನ ಪ್ಲಾಟ್​ಫಾರ್ಮ್​ನಲ್ಲಿ ಬಸ್ ಟಿಕೆಟ್ ಅತಿ ಕಡಿಮೆ ಎಂದು ಪೇಟಿಎಂ ಹೇಳಿಕೊಂಡಿದೆ. 2,500 ಬಸ್ ಆಪರೇಟರುಗಳನ್ನು ಪೇಟಿಎಂ ಒಳಗೊಂಡಿದೆ. ಈ ಪ್ಲಾಟ್​ಫಾರ್ಮ್​ನಲ್ಲಿ ಲೈವ್ ಬಸ್ ಟ್ರ್ಯಾಕಿಂಗ್ ಸೌಲಭ್ಯವೂ ಇದೆ.

ಪೇಟಿಎಂ ಕಾರ್ನಿವಲ್ ಸೇಲ್​ನ (2023ರ ಅಕ್ಟೋಬರ್ 27ರಿಂದ ನವೆಂಬರ್ 5ರವರೆಗೆ) ಕೆಲ ಪ್ರಮುಖ ಅಂಶಗಳು

  • ಭಾರತದೊಳಗೆ ಹಾರಾಡುವ ವಿಮಾನದ ಟಿಕೆಟ್​ಗಳಿಗೆ ಪೇಟಿಎಂನಿಂದ ಶೇ. 15ರಷ್ಟು ರಿಯಾಯಿತಿ
  • ಅಂತಾರಾಷ್ಟ್ರೀಯ ಫ್ಲೈಟ್​ಗಳಿಗೆ ಶೇ. 10ರಷ್ಟು ಡಿಸ್ಕೌಂಟ್

ಇದನ್ನೂ ಓದಿ: ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ

  • ಇಂಡಿಗೋ, ವಿಸ್ತಾರ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್​ಪ್ರೆಸ್, ಸ್ಪೈಸ್ ಜೆಟ್, ಸ್ಟಾರ್ ಏರ್, ಆಕಾಸ ಇತ್ಯಾದಿ ಪ್ರಮುಖ ಏರ್​ಲೈನ್ ಕಂಪನಿಗಳ ಟಿಕೆಟ್​ಗಳಿಗೆ ಡಿಸ್ಕೌಂಟ್
  • ಐಸಿಐಸಿಐ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಆರ್​ಬಿಎಲ್ ಬ್ಯಾಂಕ್ ಮತ್ತು ಎಚ್​ಎಸ್​ಬಿಸಿ ಬ್ಯಾಂಕ್​ನಲ್ಲಿ ಝೀರೋ ಕನ್ವೀನಿಯನ್ಸ್ ಶುಲ್ಕ ಇತ್ಯಾದಿ ಆಫರ್.
  • ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಯೋಧರಿಗೆ ವಿಶೇಷ ರಿಯಾಯಿತಿ
  • ಟ್ರೈನ್ ಬುಕಿಂಗ್​ನಲ್ಲಿ ಪೇಮೆಂಟ್ ಗೇಟ್​ವೇ ಶುಲ್ಕ ಇಲ್ಲ.
  • ಟ್ರೈನ್ ಸ್ಟೇಟಸ್ ಮತ್ತು ಪಿಎನ್​ಆರ್ ಸ್ಟೇಟಸ್ ಅನ್ನು ಪರಿಶೀಲಿಸಬಹುದು.
  • ಗ್ಯಾರಂಟೀಡ್ ಸೀಟ್ ಅಸಿಸ್ಟೆನ್ಸ್ ಸ್ಕೀಮ್ ಅಡಿಯಲ್ಲಿ ಗ್ರಾಹಕರು ಖಚಿತವಾಗಿ ಸೀಟು ಬುಕ್ ಮಾಡಬಹುದು. ವೈಟಿಂಗ್ ಲಿಸ್ಟ್​ನಲ್ಲಿ ಕಾಯುವುದು ಬೇಕಾಗಿಲ್ಲ.
  • ಆಯ್ದ ಬಸ್ ಆಪರೇಟುಗಳ ಬಸ್ ಟಿಕೆಟ್ ಮೇಲೆ ಶೇ. 20ರವರೆಗೂ ರಿಯಾಯಿತಿ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ