ಪೇಮೆಂಟ್ ಸರ್ವಿಸ್ ಜೊತೆಗೆ ಹಲವು ಬೇರೆ ಬೇರೆ ಸೇವೆಗಳನ್ನು ಒದಗಿಸುವ ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಇದೀಗ ಪೇಟಿಎಂ ಹೆಲ್ತ್ ಸಾಥಿ (Paytm Health Saathi) ಎಂಬ ಸ್ಕೀಮ್ ಅನ್ನು ಘೋಷಿಸಿದೆ. ಇದು ಆರೋಗ್ಯ ಮತ್ತು ಆದಾಯ ರಕ್ಷಣೆ ಯೋಜನೆಯಾಗಿದೆ. ಆದರೆ, ಎಲ್ಲಾ ಪೇಟಿಎಂ ಬಳಕೆದಾರರಿಗೂ ಇದು ಲಭ್ಯ ಇಲ್ಲ. ಪೇಟಿಎಂನಲ್ಲಿ ನೊಂದಾಯಿಸಿರುವ ವರ್ತಕರಿಗೆ (merchant partners) ಎಕ್ಸ್ಕ್ಲೂಸಿವ್ ಆಗಿ ಲಭ್ಯ ಇದೆ. ಪೇಟಿಎಂ ಫಾರ್ ಬಿಸಿನೆಸ್ (Paytm for Business) ಎಂಬ ಆ್ಯಪ್ನಲ್ಲಿ ಈ ಪೇಟಿಎಂ ಹೆಲ್ತ್ ಸಾಥಿ ಪ್ಲಾನ್ ಅನ್ನು ಪಡೆಯಬಹುದು. ಮಾಸಿಕವಾಗಿ ಕೇವಲ 35 ರೂ ಮಾತ್ರವೇ ಇರುವುದು ಇದರ ಬೆಲೆ ಆರಂಭ.
ಪೇಟಿಎಂಗೆ ಅತಿಹೆಚ್ಚು ಆದಾಯ ತರುತ್ತಿರುವುದು ವರ್ತಕರ ಸಮುದಾಯವೇ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಹೇರಿದ ಕಾರಣಕ್ಕೆ ಬಹಳಷ್ಟು ವರ್ತಕರು ಪೇಟಿಎಂನಿಂದ ದೂರವಾಗಿದ್ದುಂಟು. ಇವರನ್ನು ಹಿಡಿದಿಡಲು ಮತ್ತು ಸೆಳೆಯಲು ಒನ್97 ಕಮ್ಯೂನಿಕೇಶನ್ಸ್ ಈ ಹೆಲ್ತ್ ಸಾಥಿ ಸ್ಕೀಮ್ ಅನ್ನು ಜಾರಿಗೊಳಿಸಿರಬಹುದು.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೇಲೆ ಯಾರೂ ಮಾರ್ಕ್ಸ್ ಕೇಳಲ್ಲ ಕಣ್ರೀ… ಎಸ್ಬಿಐ ನೂತನ ಮುಖ್ಯಸ್ಥರ ಕಿವಿಮಾತು ಕೇಳ್ರೀ
ಪೇಟಿಎಂ ಹೆಲ್ತ್ ಸಾಥಿ ಪ್ಲಾನ್ ಈ ಮೊದಲೇ ಹೇಳಿದಂತೆ ವರ್ತಕರಿಗೆಂದು ರೂಪಿಸಲಾಗಿದೆ. ಮೇ ತಿಂಗಳಲ್ಲಿ ಇದರ ಪ್ರಯೋಗಾರ್ಥ ಚಾಲನೆ ಆಗಿತ್ತು. ಈಗಾಗಲೇ 3,000 ವರ್ತಕ ಭಾಗಿದಾರರು ಪ್ಲಾನ್ ಸ್ವೀಕರಿಸಿದ್ದಾರೆ. ಈ ಸಕಾರಾತ್ಮಕ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ಈಗ ಎಲ್ಲಾ ವರ್ತಕರಿಗೂ ಹೆಲ್ತ್ ಸಾಥಿ ಸ್ಕೀಮ್ ಅನ್ನು ವಿಸ್ತರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ